ರೋಹಿತ್‌ ಶರ್ಮಾ ಸೆಲ್ಫಿಶ್‌ ಅಲ್ಲ – ಶೋಯೆಬ್‌ ಅಖ್ತರ್‌ ಹೀಗೇಕೆ ಹೇಳಿದ್ರು..?

Public TV
2 Min Read
Virat Rohit

ಮುಂಬೈ: ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಜಯದ ಓಟಕ್ಕೆ ತಡೆಯೇ ಇಲ್ಲದಂತೆ ಬಲಿಷ್ಠ ತಂಡಗಳನ್ನ ಬಗ್ಗುಬಡಿದು ಟೀಂ ಇಂಡಿಯಾ ಮುನ್ನುಗ್ಗುತ್ತಿದೆ. ಈ ನಡುವೆ ಪಾಕ್‌ ಮಾಜಿ ವೇಗಿ ಶೋಯೆಬ್‌ ಅಖ್ತರ್‌ (Shoaib Akhtar) ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾರನ್ನ (Rohit Sharma) ಹೊಗಳಿದ್ದಾರೆ.

ದಕ್ಷಿಣ ಆಫ್ರಿಕಾ (South Africa) ಪಂದ್ಯದ ವಿರುದ್ಧ ರೋಹಿತ್‌ ಶರ್ಮಾ ನಾಯಕತ್ವದ ಬಗ್ಗೆ ಮಾತನಾಡಿರುವ ಅಖ್ತರ್‌, ರೋಹಿತ್‌ ಮನಸ್ಸು ಮಾಡಿದ್ರೆ ಇದೇ ವಿಶ್ವಕಪ್‌ನಲ್ಲಿ 5 ಶತಕಗಳನ್ನ ಸಿಡಿಸಬಹುದಿತ್ತು. ಆದ್ರೆ ಅವರು ತಂಡಕ್ಕಾಗಿ ಆಡುತ್ತಾರೆ. ಆದ್ದರಿಂದಲೇ 5 ಶತಕಗಳನ್ನು ಕಳೆದುಕೊಂಡಿದ್ದಾರೆ, ಅವರು ನಿಸ್ವಾರ್ಥ ವ್ಯಕ್ತಿ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಕೊಹ್ಲಿ 49ನೇ ಶತಕವನ್ನು ಚಪ್ಪಾಳೆಯೊಂದಿಗೆ ಸಂಭ್ರಮಿಸಿದ ರೋಹಿತ್‌ ಶರ್ಮಾ ಪತ್ನಿ ರಿತಿಕಾ

ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ (Virat Kohli) ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಕ್ರಿಕೆಟ್‌ ದೇವರು ಸಚಿನ್‌ ಶತಕಗಳ ದಾಖಲೆಯನ್ನ ಸರಿಗಟ್ಟಿದ್ದಾರೆ. ಆದ್ರೆ ಕೊಹ್ಲಿ ನಿಧಾನಗತಿಯ ಬ್ಯಾಟಿಂಗ್‌ ಮಾಡಿದ್ದರಿಂದ ನೆಟ್ಟಿಗರು ಸೆಲ್ಫಿಶ್‌ ಎಂಬ ಹಣೆಪಟ್ಟಿ ಕಟ್ಟಿದ್ದಾರೆ. ಈ ಬೆನ್ನಲ್ಲೇ ರೋಹಿತ್‌ ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ: ಕಾಲಿಗೆ ಬೀಳಬೇಡಪ್ಪ..: ಪಾದ ಮುಟ್ಟಲು ಬಂದ ಯುವ ಅಭಿಮಾನಿಗೆ ಕೊಹ್ಲಿ ಪ್ರೀತಿಯ ಮಾತು: Viral Video

ಪ್ರಸಕ್ತ ಟೂರ್ನಿಯಲ್ಲಿ ಹಿಟ್‌ಮ್ಯಾನ್ ಅಫ್ಘಾನಿಸ್ತಾನ ವಿರುದ್ಧ 131 ರನ್‌ (84 ಎಸೆತ, 6 ಸಿಕ್ಸರ್‌, 16 ಬೌಂಡರಿ) ಬಾರಿಸಿ ದಾಖಲೆ ಬರೆದಿದ್ದರು.‌ ಇಂಗ್ಲೆಂಡ್‌ ವಿರುದ್ಧ ಪಂದ್ಯದಲ್ಲಿ 87 ರನ್‌ (101 ಎಸೆತ, 3 ಸಿಕ್ಸರ್‌, 10 ಬೌಂಡರಿ), ಪಾಕಿಸ್ತಾನ ವಿರುದ್ಧ 86 ರನ್‌ (63 ಎಸೆತ, 6 ಸಿಕ್ಸರ್‌, 6 ಬೌಂಡರಿ) ಗಳಿಸಿ ಶತಕದಿಂದ ವಂಚಿರಾದರು. ಇದನ್ನೂ ಓದಿ: 49th Century: ಗ್ರೌಂಡ್‌ ಹೊರಗೂ ದಾಖಲೆ ಬರೆದ ಕೊಹ್ಲಿ ಬರ್ತ್‌ ಡೇ ಶತಕ..!

Share This Article