ಬೆಂಗಳೂರು: 2023ರ ವಿಶ್ವಕಪ್ ಟೂರ್ನಿಯಲ್ಲಿ ಯಶಸ್ವಿಯಾಗಿ ಟೀಂ ಇಂಡಿಯಾವನ್ನ ಮುನ್ನಡೆಸುತ್ತಿರುವ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಚೇಸ್ ಮಾಸ್ಟರ್ ಖ್ಯಾತಿಯ ವಿರಾಟ್ ಕೊಹ್ಲಿ ಭಾನುವಾರ ನೆದರ್ಲೆಂಡ್ಸ್ (Netherlands) ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಲು ಎದುರುನೋಡುತ್ತಿದ್ದಾರೆ.
Rohit Sharma is 14 runs away from 14,000 runs in international cricket as an opener.
– The GOAT of the game…!!! pic.twitter.com/ZFv12Nh6II
— Mufaddal Vohra (@mufaddal_vohra) November 10, 2023
Advertisement
ಈಗಾಗಲೇ 8 ಪಂದ್ಯಗಳಲ್ಲೂ ಗೆಲುವು ಸಾಧಿಸಿರುವ ಭಾರತ ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತನ್ನ ಕೊನೆಯ ಲೀಗ್ ಪಂದ್ಯವನ್ನಾಡಲಿದೆ. ಇದು ಈ ಆವೃತ್ತಿಯಲ್ಲಿ ಕೊನೆಯ ಲೀಗ್ ಪಂದ್ಯವಾಗಿದೆ. ಇದನ್ನೂ ಓದಿ: ಆರ್‌ಸಿಬಿಯಲ್ಲಿ ಆಡಲು ರಚಿನ್ ಉತ್ಸಾಹ – ಟ್ವೀಟ್ ವೈರಲ್
Advertisement
ವಿಶೇಷವೆಂದರೆ ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (Virat Kohli) ಮಹತ್ವದ ಮೈಲುಗಲ್ಲು ಸ್ಥಾಪಿಸಲು ಕಾಯುತ್ತಿದ್ದಾರೆ. ಈಗಾಗಲೇ ತಮ್ಮ ವೃತ್ತಿ ಜೀವನದಲ್ಲಿ 18 ಸಾವಿರ ಅಂತಾರಾಷ್ಟ್ರೀಯ ರನ್‌ಗಳನ್ನು ಪೂರೈಸಿರುವ ರೋಹಿತ್ ಶರ್ಮಾ ಆರಂಭಿಕನಾಗಿ, ಟಾಪ್ ಆರ್ಡರ್ ಮತ್ತು 7ನೇ ಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡಿದ್ದಾರೆ.
Advertisement
Advertisement
ಇದೀಗ ಆರಂಭಿಕನಾಗಿಯೇ 14 ಸಾವಿರ ಅಂತಾರಾಷ್ಟ್ರೀಯ ರನ್‌ಗಳನ್ನು (International Runs) ಪೂರೈಸುವ ಸನಿಹದಲ್ಲಿದ್ದಾರೆ. 8 ಪಂದ್ಯಗಳಲ್ಲಿ 1 ಶತಕ, 2 ಅರ್ಧ ಶತಕಗಳು ಸೇರಿದಂತೆ 442 ರನ್ ಬಾರಿಸಿರುವ ಶರ್ಮಾ ಇನ್ನೂ 14 ರನ್ ಗಳಿಸಿದ್ರೆ, ಆರಂಭಿಕನಾಗಿಯೇ 14,000 ಅಂತಾರಾಷ್ಟ್ರೀಯ ರನ್‌ಗಳನ್ನು ಪೂರೈಸಿದ ಖ್ಯಾತಿ ತಮ್ಮದಾಗಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ವಿಶ್ವಕಪ್ ಪವರ್ ಪ್ಲೇನಲ್ಲಿ ವಿಶೇಷ ಸಾಧನೆ ನಿರ್ಮಿಸಿದ ರೋಹಿತ್ ಶರ್ಮಾ
ಇನ್ನೂ ಏಕದಿನ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ (South Africa) ವಿರುದ್ಧ 49ನೇ ಏಕದಿನ ಶತಕ ಸಿಡಿಸಿ ಕ್ರಿಕೆಟ್ ದೇವರು ಸಚಿನ್ ಶತಕ ದಾಖಲೆ ಸರಿಗಟ್ಟಿರುವ ಕೊಹ್ಲಿ 50ನೇ ಶತಕ ಸಿಡಿಸಿ ನಂ.1 ಪಟ್ಟಕ್ಕೇರುವ ತವಕದಲ್ಲಿದ್ದಾರೆ. ಕೊಹ್ಲಿ ಈಗಾಗಲೇ ಟೆಸ್ಟ್ ಕ್ರಿಕೆಟ್‌ನಲ್ಲಿ 29, ಟಿ20 ಕ್ರಿಕೆಟ್‌ನಲ್ಲಿ 1 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 49 ಶತಕ ಸಿಡಿಸಿರುವ ಕೊಹ್ಲಿ, ಅತಿಹೆಚ್ಚು ಶತಕ ಸಿಡಿಸಿದ ವಿಶ್ವದ 2ನೇ ಆಟಗಾರನಾಗಿದ್ದಾರೆ. ನೆದರ್ಲೆಂಡ್ಸ್ ವಿರುದ್ಧ ಭಾನುವಾರ ನಡೆಯಲಿರುವ ಪಂದ್ಯದಲ್ಲಿ 50ನೇ ಶತಕ ಸಿಡಿಸಿ ವೃತ್ತಿ ಜೀವನದ ಮಹತ್ವದ ಹೆಜ್ಜೆಯನ್ನಿಡಲು ಎದುರು ನೋಡುತ್ತಿದ್ದಾರೆ. ಅದು ಯಾವ ರೀತಿ ಸಕ್ಸಸ್ ಆಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
2023ರ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ‘ಅಷ್ಟ’ಜಯ!
ಮ್ಯಾಚ್ 1: ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಗೆಲುವು
ಮ್ಯಾಚ್ 2: ಆಫ್ಘಾನಿಸ್ತಾನ ವಿರುದ್ಧ 8 ವಿಕೆಟ್ ಗೆಲುವು
ಮ್ಯಾಚ್ 3: ಪಾಕಿಸ್ತಾನ ವಿರುದ್ಧ 7 ವಿಕೆಟ್ ಗೆಲುವು
ಮ್ಯಾಚ್ 4: ಬಾಂಗ್ಲಾದೇಶದ ವಿರುದ್ಧ 7 ವಿಕೆಟ್ ಗೆಲುವು
ಮ್ಯಾಚ್ 5: ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಗೆಲುವು
ಮ್ಯಾಚ್ 6: ಇಂಗ್ಲೆಂಡ್ ವಿರುದ್ಧ 100 ರನ್ ಗೆಲುವು
ಮ್ಯಾಚ್ 7: ಶ್ರೀಲಂಕಾ ವಿರುದ್ಧ 302 ರನ್ ಗೆಲುವು
ಮ್ಯಾಚ್ 8: ದಕ್ಷಿಣ ಆಫ್ರಿಕಾ ವಿರುದ್ಧ 243 ರನ್ ಗೆಲುವು