ಪುಣೆ: ಕ್ವಿಂಟನ್ ಡಿ ಕಾಕ್ (Quinton de Kock) ಮತ್ತು ಡುಸ್ಸೆನ್ (Rassie van der Dussen) ಅವರ ಶತಕದಾಟ ನಂತರ ಬೌಲರ್‌ಗಳ ಮಾರಕ ಬೌಲಿಂಗ್ ಸಹಾಯದಿಂದ ವಿಶ್ವಕಪ್ ಕ್ರಿಕೆಟ್‌ನಲ್ಲಿ (World Cup Cricket) ನ್ಯೂಜಿಲೆಂಡ್ (New Zealand) ವಿರುದ್ಧ ದಕ್ಷಿಣ ಆಫ್ರಿಕಾ (South Africa) 190 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 357 ರನ್ ಹೊಡೆಯಿತು. ಭಾರೀ ಮೊತ್ತವನ್ನು ಚೇಸ್ ಮಾಡಲು ಆರಂಭಿಸಿದ ನ್ಯೂಜಿಲೆಂಡ್ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಅಂತಿಮವಾಗಿ 35.3 ಓವರ್‌ಗಳಲ್ಲಿ 167 ರನ್‌ಗಳಿಗೆ ಸರ್ವಪತನಗೊಂಡಿತು.
Advertisement
ಕೇಶವ್ ಮಹಾರಾಜ್ ಅವರು 4 ವಿಕೆಟ್ ಕಿತ್ತರೆ, ಮಾಕ್ರೋ ಜನ್ಸೆನ್ 3 ವಿಕೆಟ್ ಪಡೆದರು. ನ್ಯೂಜಿಲೆಂಡ್ ಪರವಾಗಿ ಗ್ಲೇನ್ ಫಿಲಿಪ್ಸ್ 60 ರನ್ (50 ಎಸೆತ, 4 ಬೌಂಡರಿ, 4 ಸಿಕ್ಸರ್) ವಿಲ್ ಯಂಗ್ 33 ರನ್(37 ಎಸೆತ, 5 ಬೌಂಡರಿ) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು.
Advertisement
ಕ್ವಿಂಟನ್ ಡಿ ಕಾಕ್ ಅವರು 114 ರನ್ (116 ಎಸೆತ, 10 ಬೌಂಡರಿ, 3 ಸಿಕ್ಸ್) ಡುಸ್ಸೆನ್ 133 ರನ್ (118 ಎಸೆತ, 9 ಬೌಂಡರಿ, 5 ಸಿಕ್ಸರ್) ಹೊಡೆದು ಔಟಾದರು. ಡೇವಿಡ್ ಮಿಲ್ಲರ್ ಕೊನೆಯಲ್ಲಿ 30 ಎಸೆತ ಎದುರಿಸಿ 53 ರನ್ (2 ಬೌಂಡರಿ, 4 ಸಿಕ್ಸರ್) ಹೊಡೆದ ಪರಿಣಾಮ ದಕ್ಷಿಣ ಆಫ್ರಿಕಾ 350 ರನ್ ಗಳ ಗಡಿಯನ್ನು ದಾಟಿತು.
Advertisement
Advertisement
ಸೆಮಿಫೈನಲ್ ಹೋಗುತ್ತಾ ಪಾಕ್?
ಭಾರತ ಮತ್ತು ದಕ್ಷಿಣ ಆಫ್ರಿಕಾ 12 ಅಂಕ ಪಡೆದರೂ ನೆಟ್ ರನ್ ರೇಟ್ ಉತ್ತಮವಾಗಿರುವ ಕಾರಣ ಅಂಕ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಮೊದಲ ಸ್ಥಾನ ಪಡೆದರೆ ಭಾರತ (Team India) ಎರಡನೇ ಸ್ಥಾನ ಪಡೆದಿದೆ. ಆದರೆ ಭಾರತ 6 ಪಂದ್ಯದಿಂದ 12 ಅಂಕ ಸಂಪಾದಿಸಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಈ ಎರಡು ತಂಡಗಳು ಸೆಮಿಫೈನಲ್ ಪ್ರವೇಶದ ಬಾಗಿಲಿನ ಹತ್ತಿರ ಬಂದಿದೆ.
ನ್ಯೂಜಿಲೆಂಡ್ ಈ ಪಂದ್ಯವನ್ನು ಸೋತ ಕಾರಣ ಪಾಕಿಸ್ತಾನಕ್ಕೆ (Pakistan) ಸೆಮಿ ಪ್ರವೇಶಿಸುವ ಅವಕಾಶ ಈಗ ಸೃಷ್ಟಿಯಾಗಿದೆ. ಸದ್ಯ ಪಾಕಿಸ್ತಾನ 7 ಪಂದ್ಯವಾಡಿ 3ರಲ್ಲಿ ಜಯ ಸಾಧಿಸುವ ಮೂಲಕ 6 ಅಂಕ ಪಡೆದು 5ನೇ ಸ್ಥಾನದಲ್ಲಿದ್ದರೆ ನ್ಯೂಜಿಲೆಂಡ್ 7 ಪಂದ್ಯವಾಡಿ 4 ಜಯ ಸಾಧಿಸುವ ಮೂಲಕ 8 ಅಂಕ ಸಂಪಾದಿಸಿ 4ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ವಿಶ್ವಕಪ್‌ನಲ್ಲಿ ವಿಶೇಷ ಸಾಧನೆ ಮಾಡಿದ ಡಿ ಕಾಕ್ – ಸಚಿನ್ ವಿಶ್ವ ದಾಖಲೆ ಮುರಿಯಲು ಬೇಕಿದೆ 129 ರನ್
????????????????????????. ????????????????????????. ????????????????????????" ????????
Well deserved Player Of The Match award ???? ???? #CWC23 #BePartOfIt pic.twitter.com/RQ0vfEqEb2
— Proteas Men (@ProteasMenCSA) November 1, 2023
ಮುಂದಿನ ಎರಡು ಪಂದ್ಯವನ್ನು ನ್ಯೂಜಿಲೆಂಡ್ ಸೋತು ತನ್ನ ಎರಡು ಪಂದ್ಯವನ್ನು ಗೆದ್ದರೆ 10 ಅಂಕ ಸಂಪಾದಿಸುವ ಮೂಲಕ ಪಾಕ್ ಸೆಮಿ ಫೈನಲ್ ಪ್ರವೇಶಿಸುವ ಸಾಧ್ಯತೆ ಇದೆ.
ಇನ್ನೊಂದು ಕಡೆಯಲ್ಲಿ ಆಸ್ಟ್ರೇಲಿಯಾ 6 ಪಂದ್ಯಗಳಿಂದ 8 ಅಂಕ ಸಂಪಾದಿಸಿದರೆ ಬಾಂಗ್ಲಾದೇಶ 6 ಪಂದ್ಯಗಳಿಂದ 6 ಅಂಕ ಸಂಪಾದಿಸಿದೆ. ಈ ಎರಡು ತಂಡಗಳು 3 ಪಂದ್ಯ ಗೆದ್ದರೆ ಅಥವಾ 2 ಪಂದ್ಯ ಗೆದ್ದು ಉತ್ತಮ ರನ್ ರೇಟ್ ಹೊಂದಿದ್ದರೆ ಪಾಕಿಸ್ತಾನದ ಸೆಮಿ ಬಾಗಿಲು ಬಂದ್ ಆಗಲಿದೆ. ಹೀಗಾಗಿ ಬೇರೆ ಪಂದ್ಯಗಳ ಫಲಿತಾಂಶದ ಆಧಾರದ ಮೇಲೆ ಪಾಕಿಸ್ತಾನದ ಸೆಮಿಫೈನಲ್ ಭವಿಷ್ಯ ನಿಂತಿದೆ.
Web Stories