World Cup 2023: ಟೀಂ ಇಂಡಿಯಾಕ್ಕೆ ಮತ್ತೆ ಆಘಾತ – ನ್ಯೂಜಿಲೆಂಡ್‌ ವಿರುದ್ಧದ ಪಂದ್ಯಕ್ಕೆ ಪಾಂಡ್ಯ ಔಟ್‌

Public TV
2 Min Read
Hardik Pandya 3

ಪುಣೆ: ಗಾಯದ (Injured) ಸಮಸ್ಯೆಗೆ ತುತ್ತಾಗಿರುವ ಟೀಂ ಇಂಡಿಯಾ ಉಪನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಭಾನುವಾರ ನ್ಯೂಜಿಲೆಂಡ್‌ (New Zealand) ವಿರುದ್ಧ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಿಂದ ಹೊರಗುಳಿದಿದ್ದಾರೆ.

ಬಾಂಗ್ಲಾದೇಶ (Bangladesh) ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್‌ ವೇಳೆ ಕಾಲಿಗೆ ಪೆಟ್ಟಾಗಿಸಿಕೊಂಡ ಹಾರ್ದಿಕ್‌ ಪಾಂಡ್ಯ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ (BCCI) ತಿಳಿಸಿದೆ. ಅಕ್ಟೋಬರ್‌ 29ರಂದು ಲಕ್ನೋ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಮತ್ತೆ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: Virat Kohli: ಸಚಿನ್‌ ತೆಂಡೂಲ್ಕರ್‌ ಮತ್ತೊಂದು ದಾಖಲೆ ಉಡೀಸ್‌ ಮಾಡಿದ ಕೊಹ್ಲಿ!

Hardik Pandya

ಐಸಿಸಿ ಏಕದಿನ ವಿಶ್ವಕಪ್ (ICC World Cup) ಟೂರ್ನಿಯ 17ನೇ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಸೆಣಸಾಟ ನಡೆಸಿದ್ದವು. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ 9ನೇ ಓವರ್ ನಲ್ಲಿ ಬೌಲಿಂಗ್ ಮಾಡುತ್ತಿದ್ದ ಪಾಂಡ್ಯ 3ನೇ ಎಸೆತ ಬೌಲಿಂಗ್ ಮಾಡಿದಾಗ ಕ್ರೀಸ್‌ನಲ್ಲಿದ್ದ ಲಿಟ್ಟನ್ ದಾಸ್ ಸ್ರೈಟ್‌ಡ್ರೈವ್‌ ಮಾಡಿದರು. ಆಗ ಪಾಂಡ್ಯ ಕಾಲಿನಿಂದ ಚೆಂಡನ್ನು ತಡೆಯಲು ಪ್ರಯತ್ನಿಸಿದಾಗ ಬ್ಯಾಲೆನ್ಸ್ ತಪ್ಪಿ ಕಾಲು ಉಳುಕಿಸಿಕೊಂಡರು. ತಕ್ಷಣವೇ ಫಿಸಿಯೋ ಥೆರಪಿಸ್ಟ್ ಬಂದು ಚಿಕಿತ್ಸೆ ನೀಡಿದರೂ ಮತ್ತೆ ಬೌಲಿಂಗ್ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಆಟದ ಮಧ್ಯದಲ್ಲೇ ಮೈದಾನ ತೊರೆಯಲು ನಿರ್ಧರಿಸಿದರು. ಬಳಿಕ ರೋಹಿತ್ ಶರ್ಮಾ ಜೊತೆ ಮಾತುಕತೆ ನಡೆದ ಕೊಹ್ಲಿ ಉಳಿದಿದ್ದ ಮೂರು ಎಸೆತಗಳನ್ನು ತಾವೇ ಎಸೆಯುವ ಮೂಲಕ ಬೌಲಿಂಗ್ ಪೂರ್ಣಗೊಳಿಸಿದರು. ಇದನ್ನೂ ಓದಿ: World Cup 2023: ಟೀಂ ಇಂಡಿಯಾ ಬೌಲಿಂಗ್‌ ದಾಳಿಗೆ ಬೆಚ್ಚಿದ ಬಾಂಗ್ಲಾ – ಭಾರತಕ್ಕೆ 257 ರನ್‌ಗಳ ಗುರಿ

ಗುರುವಾರ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ ತಂಡ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 256 ರ್‌ ಗಳಿಸಿತು. ಈ ಗುರಿ ಬೆನ್ನತ್ತಿದ್ದ ಭಾರತ 41.3 ಓವರ್‌ಗಳಲ್ಲೇ 261 ರನ್‌ ಬಾರಿಸಿ ಗೆಲುವು ಸಾಧಿಸಿತು. ಇದನ್ನೂ ಓದಿ: World Cup 2023: ದಾಖಲೆಯ ಶತಕ ಸಿಡಿಸಿ ಮೆರೆದಾಡಿದ ಕೊಹ್ಲಿ – ಬಾಂಗ್ಲಾ ವಿರುದ್ಧ ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ

Web Stories

Share This Article