ಟಾಸ್ ಗೆದ್ದ ಆಸೀಸ್; ಫೀಲ್ಡಿಂಗ್ ಆಯ್ಕೆ- ಭಾರತ ಮೊದಲು ಬ್ಯಾಟಿಂಗ್

Public TV
1 Min Read
INDIA AUSTRALIA 1

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium Ahemadabad) ನಡೆಯಲಿರುವ ಪಂದ್ಯಕ್ಕೆ ಆಸ್ಟ್ರೇಲಿಯಾ (Australia) ಟಾಸ್ ಗೆದ್ದು, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಕೋಟ್ಯಂತರ ಮಂದಿ ಕಾಯುತ್ತಿರುವ ಫೈನಲ್ ಪಂದ್ಯ ವೀಕ್ಷಣೆಗೆ ಸಮಯ ಬಂದೇ ಬಿಟ್ಟಿದೆ. ಮಧ್ಯಾಹ್ನ 2 ಗಂಟೆಗೆ ಮ್ಯಾಚ್ ಆರಂಭವಾಗಲಿದ್ದು, ಭಾರತ (Team India) ಮೊದಲು ಬ್ಯಾಟಿಂಗ್ ಮಾಡಲಿದೆ.

WORLD CUP 2023

ಒಟ್ಟಿನಲ್ಲಿ ಎರಡು ತಂಡಗಳಿಗೂ ವಿಶ್ವಕಪ್ (World Cup 2023) ಮೇಲೆಯೇ ಕಣ್ಣು. ಹಾಗಾಗಿ ಉಭಯ ತಂಡಗಳು ಕಠಿಣ ತಾಲೀಮು ನಡೆಸಿವೆ. ಭಾರತ ತಂಡ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದ್ದು, ತವರು ನೆಲದ ಬೆಂಬಲ ಆತ್ಮವಿಶ್ವಾಸವನ್ನ ಹಿಮ್ಮಡಿಗೊಳಿಸಿದೆ. ರೋಹಿತ್ ಶರ್ಮಾ, ಗಿಲ್, ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ತಂಡದ ಟ್ರಂಪ್ ಕಾರ್ಡ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ ಮಿಡಲ್ ಆರ್ಡರ್ ನಲ್ಲಿ ನೆರವಾಗಲಿದ್ದಾರೆ. ಇದನ್ನೂ ಓದಿ: World Cup 2023- ಮೋದಿ ಸ್ಟೇಡಿಯಂನತ್ತ ಹರಿದು ಬಂದ ಜನಸಾಗರ

NARENDRA MODI STADIUM 1

ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್‍ಪ್ರೀತ್ ಬುಮ್ರಾ ಬೌಲಿಂಗ್ ದಾಳಿ ಆಸೀಸ್ ಬ್ಯಾಟ್ಸ್ ಮನ್‍ಗಳ ನಿದ್ದೆಗೆಡಿಸಿದೆ. ಆದರೆ ಪಿಚ್ ಸ್ಪಿನ್ನರ್ ಗೆ ಹೆಚ್ಚು ನೆರವಾಗಿರೋದ್ರಿಂದ ರವಿಚಂದ್ರನ್ ಅಶ್ವಿನ್‍ಗೂ ಸ್ಥಾನ ಸಿಗುತ್ತಾ ಕಾದುನೋಡಬೇಕಿದೆ.

Share This Article