ಧರ್ಮಶಾಲಾ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ (Australia) ತಂಡವು ನ್ಯೂಜಿಲೆಂಡ್ (New Zealand) ವಿರುದ್ಧ 388 ರನ್ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ (ODI Cricket) ಹೊಸ ಇತಿಹಾಸ ಸೃಷ್ಟಿಸಿದೆ.
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 5 ಬಾರಿ ಚಾಂಪಿಯನ್ ಆಗಿರುವ ಆಸೀಸ್, ಸತತ 3 ಪಂದ್ಯಗಳಲ್ಲೂ 350ಕ್ಕೂ ಹೆಚ್ಚು ರನ್‌ಗಳಿಸಿದ ಮೊದಲ ತಂಡವಾಗಿ ಹೊರಹೊಮ್ಮಿದೆ. ಧರ್ಮಶಾಲಾ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ 388 ರನ್‌ಗಳನ್ನು ಸಿಡಿಸಿದ ಬಳಿಕ ಆಸೀಸ್ ತಂಡ ಈ ದಾಖಲೆ ಬರೆದಿದೆ. ಇದನ್ನೂ ಓದಿ: ಪಾಕ್ ವಿರುದ್ಧ ಗೆಲುವನ್ನು ಹನುಮಾನ್‌ಗೆ ಅರ್ಪಿಸಿದ ಮಹರಾಜ್ – ಜೈ ಶ್ರೀ ಹನುಮಾನ್ ಫುಲ್ ಟ್ರೆಂಡ್
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಪಾಕಿಸ್ತಾನ (Pakistan) ವಿರುದ್ಧದ ಪಂದ್ಯದಲ್ಲಿ 9 ವಿಕೆಟ್ ನಷ್ಟಕ್ಕೆ 367 ರನ್, ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ 8 ವಿಕೆಟ್ ನಷ್ಟಕ್ಕೆ 399 ರನ್ ನಂತರ ನ್ಯೂಜಿಲೆಂಡ್ ವಿರುದ್ಧ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 388 ರನ್ ಸಿಡಿಸುವ ಮೂಲಕ ಆಸ್ಟ್ರೇಲಿಯಾ ತಂಡ ಈ ವಿಶೇಷ ಸಾಧನೆ ಮಾಡಿತು.
ಅಲ್ಲದೇ ವಿಶ್ವಕಪ್ ಟೂರ್ನಿಯಲ್ಲಿ ಇತ್ತಂಡಗಳಿಂದ ಒಟ್ಟು 771 ರನ್ ದಾಖಲಾಗಿದ್ದು, ಇದು ಟೂರ್ನಿಯಲ್ಲಿ ಗರಿಷ್ಠ ಸ್ಕೋರ್ ಆಗಿದೆ. ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಒಟ್ಟು 754 ರನ್ ದಾಖಲಾಗಿರುವುದು 2ನೇ ಗರಿಷ್ಠ ಸ್ಕೋರ್ ಆಗಿದೆ. ಕಿವೀಸ್ ಮತ್ತು ಆಸೀಸ್ ನಡುವಿನ ಪಂದ್ಯದಲ್ಲಿ ಒಟ್ಟು 32 ಸಿಕ್ಸರ್ ಹಾಗೂ 65 ಬೌಂಡರಿಗಳು ಸಿಡಿದಿವೆ. ಆಸೀಸ್ ಪರ 20 ಸಿಕ್ಸರ್, 32 ಬೌಂಡರಿ ದಾಖಲಾದರೆ, ಕಿವೀಸ್ ಪರ 33 ಬೌಂಡರಿ ಹಾಗೂ 12 ಸಿಕ್ಸರ್‌ಗಳು ಮಾತ್ರ ದಾಖಲಾಗಿರುವುದು ವಿಶೇಷ. ಇದನ್ನೂ ಓದಿ: World Cup 2023: ರೋಚಕ ಪಂದ್ಯದಲ್ಲಿ ಆಸೀಸ್‌ಗೆ 5 ರನ್‌ಗಳ ಜಯ – ಹೋರಾಡಿ ಸೋತ ಕಿವೀಸ್
ಇನ್ನೂ ಶನಿವಾರ ನಡೆದ ಜಿದ್ದಾಜಿದ್ದಿ ಕಣದಲ್ಲಿ ನ್ಯೂಜಿಲೆಂಡ್ ಆಸೀಸ್ ವಿರುದ್ಧ ಚೇಸಿಂಗ್‌ನಲ್ಲಿ 383 ರನ್ ಗಳಿಸಿತು. ಇದು ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ಚೇಸಿಂಗ್ ರನ್ ಎನ್ನುವ ಜೊತೆಗೆ ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ ಟೂರ್ನಿಯಲ್ಲಿ ಯಾವುದೇ ತಂಡದಿಂದ ದಾಖಲಾದ ಗರಿಷ್ಠ ಸ್ಕೋರ್ ಸಹ ಆಗಿದೆ. 2019ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 352 ರನ್ ಸಿಡಿಸಿದ್ದು, ಇದುವರೆಗಿನ ಗರಿಷ್ಠ ಸ್ಕೋರ್ ಆಗಿತ್ತು. ಆದ್ರೆ 2015ರ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವೆಸ್ಟ್ ಇಂಡೀಸ್ ವಿರುದ್ಧ 393 ರನ್ ಗಳಿಸಿದ್ದು, ಈವರೆಗಿನ ತಂಡದ ಗರಿಷ್ಠ ಸ್ಕೋರ್ ಆಗಿದೆ. ಇದನ್ನೂ ಓದಿ: IND vs ENG: 2019 ರ ವಿಶ್ವಕಪ್ ಪಂದ್ಯದಲ್ಲಿ ಭಾರತ ಕೊನೆ ಬಾರಿಗೆ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿದಾಗ ಏನಾಗಿತ್ತು?
Web Stories