ಅಹಮದಾಬಾದ್: ಕ್ರಿಕೆಟ್ (Cricket) ಹಬ್ಬ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇಂಡಿಯಾ ಮತ್ತು ಆಸ್ಟ್ರೇಲಿಯಾ (IND Vs AUS) ವಿಶ್ವಕಪ್ ಗಾಗಿ ಅಖಾಡಕ್ಕೆ ಇಳಿಯಲಿದ್ದು ಎರಡು ದೇಶದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ನಾಡಿಬಡಿತವೂ ಜೋರಾಗಿದೆ. ವಿಶ್ವಕಪ್ ನಲ್ಲಿ ಇಲ್ಲಿವರೆಗೆ ವಿಶೇಷ ಸಾಧನೆ ಮಾಡಿರೋ ಟೀಮ್ ಆಸ್ಟ್ರೇಲಿಯಾ ಈ ಬಾರಿ ಭಾರತವನ್ನ ತವರು ನೆಲದಲ್ಲೇ ಸೋಲಿಸಲು ರೆಡಿಮಾಡಿಕೊಂಡಿದೆ.
Advertisement
ಹೌದು, ವಿಶ್ವಕಪ್ (World Cup 2023) ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾದ ಸಾಧನೆಯನ್ನ ಯಾರೂ ಅಲ್ಲಗೆಳೆಯುವಂತೆ ಇಲ್ಲ. ಯಾಕಂದ್ರೆ ಇಲ್ಲಿವರಗೆ ಅತಿಹೆಚ್ಚು ಬಾರಿ ಫೈನಲ್‍ಗೆ ಪ್ರವೇಶ ಪಡೆದಿರೋ ತಂಡ ಮಾತ್ರವಲ್ಲ, 5 ಬಾರಿ ವಿಶ್ವಕಪ್ ಕಿರೀಟವನ್ನ ತನ್ನದಾಗಿಸಿಕೊಂಡಿರೋ ರಾಷ್ಟ್ರವಾಗಿರೋದು ಆಸ್ಟ್ರೇಲಿಯಾ. 2023ರ ವಿಶ್ವಕಪ್‍ನಲ್ಲಿ ಫೈನಲ್‍ಗೆ ಎಂಟ್ರಿ ಕೊಟ್ಟಿರುವ ಆಸ್ಟ್ರೇಲಿಯಾ ಎಂಟನೇ ಬಾರಿ ಫೈನಲ್ ಪಂದ್ಯವನ್ನ ಇಂದು ಆಡಲಿದೆ. ಇದನ್ನೂ ಓದಿ: World Cup 2023: ರಾಜ್ಯದ ಎಲ್ಲಾ ಜಿಲ್ಲಾ ಕ್ರೀಡಾಂಗಣಗಳಲ್ಲಿ ದೊಡ್ಡ ಪರದೆಯಲ್ಲಿ ನೇರಪ್ರಸಾರದ ವ್ಯವಸ್ಥೆ
Advertisement
Advertisement
1987, 1999, 2003, 2007, 2015ರಲ್ಲಿ ಚಾಂಪಿಯನ್ ಆಗಿದ್ರೆ 1975 ಮತ್ತು 1996ರ ಫೈನಲ್‍ನಲ್ಲಿ ಸೋತಿರೋ ಅನುಭವವೂ ಆಸ್ಟ್ರೇಲಿಯಾ ತಂಡಕ್ಕೆ ಆಗಿದೆ. ಎಂಟನೇ ಬಾರಿ ಫೈನಲ್ ಆಡ್ತಿರೋ ಆಸ್ಟ್ರೇಲಿಯಾ ಟೀಂ ಈ ಪಂದ್ಯವನ್ನ ಸಹ ಗೆಲ್ಲುವ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಬಿಗ್ ಬಿಗ್ ಟೂರ್ನಿಯಲ್ಲಿ ಜಯಗಳಿಸೋದು ಹೇಗೆ ಅನ್ನೋದನ್ನ ಕಲಿತಿರೋ ಆಸೀಸ್ ತಂಡವನ್ನ ಸುಲಭವಾಗಿ ಮಣಿಸಲು ಸಾಧ್ಯವಿಲ್ಲ. ಇದನ್ನೂ ಓದಿ: ಶಮಿ ಕೈಯಲ್ಲಿ ಬೆಂಕಿ ಚೆಂಡು- ಕಾಂಗರೂಗಳ ನಿದ್ದೆಗೆಡಿಸಿರೋ ಸ್ವಿಂಗ್ ಮಾಸ್ಟರ್
Advertisement
ಟೀಂ ಇಂಡಿಯಾಗೆ ಸರಿಸಮನಾಗಿ ಸವಾಲು ಹಾಕುವ ಸಾಮರ್ಥ್ಯವಿರೋ ಆಸ್ಟ್ರೇಲಿಯಾ (Australia) ಈ ವಿಶ್ವಕಪ್‍ನಲ್ಲಿ ಮೂರನೇ ತಂಡವಾಗಿ ಸೇಮಿಸ್ ಪ್ರವೇಶ ಮಾಡಿತ್ತು. ಲೀಗ್ ಹಂತದಲ್ಲಿ ಆಡಿದ್ದ 9ರಲ್ಲಿ 7 ಪಂದ್ಯವನ್ನ ಗೆದ್ದು 14 ಅಂಕಗಳಿಸಿ ಮೂರನೇ ತಂಡವಾಗಿ ಆಸ್ಟ್ರೇಲಿಯಾ ಸೇಮಿಸ್‍ಗೆ ಲಗ್ಗೆ ಹಾಕಿತ್ತು. ಸೇಮಿಸ್‍ನಲ್ಲಿ ಸೌಥ್ ಆಫ್ರಿಕಾವನ್ನ (South Africa) ಬಗ್ಗುಬಡಿದು ಫೈನಲ್‍ಗೆ ಎಂಟ್ರಿ ನೀಡಿದೆ. ಮೊದಲ ಎರಡು ಪಂದ್ಯದಲ್ಲಿ ಮಾತ್ರ ಸೋತ ಆಸ್ಟ್ರೇಲಿಯಾ ಬಳಿಕ ಸತತವಾಗಿ 8 ಪಂದ್ಯಗಳಲ್ಲಿ ಜಯಗಳಿಸಿಕೊಂಡಿದೆ.
ಪಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ಟೀಂ ಬ್ಯಾಟಿಂಗ್ ಬೌಲಿಂಗ್ ಮತ್ತು ಫೀಲ್ಡಿಂಗ್‍ನಲ್ಲಿ ಫುಲ್ ಸ್ಟ್ರಾಂಗ್ ಆಗಿದೆ. ಬ್ಯಾಟಿಂಗ್ ಲೈನ್ ಆಫ್‍ನಲ್ಲಿ ವಾರ್ನರ್, ಹೆಡ್, ಸ್ಮೀತ್, ಮಾರ್ಶ್ ಮತ್ತು ಮಾಕ್ಸಿ ಟ್ರಂಪ್ ಕಾರ್ಡ್‍ಗಳಾಗಿದ್ರೇ, ಬೌಲರ್ ಗಳಾದ ಮಿಚೆಲ್ ಸ್ಟಾರ್ಕ್, ಜೋಶ್ ಹಷಲ್ಹುಡ್, ಕಮಿಂಗ್ಸ್, ಸ್ಪೀಡ್ ಬೌಲಿಂಗ್‍ನಲ್ಲಿ ಭಾರತದ ಬ್ಯಾಟರ್ ಗಳನ್ನ ಕಟ್ಟಿಹಾಕಲು ಸಜ್ಜಾಗ್ತಿದ್ರೇ ಸ್ಲೀನ್ ಜಾದೂ ಮಾಡಲು ಜಂಪಾ ಕೂಡ ಸಿದ್ಧರಾಗಿದ್ದಾರೆ.
ಒಟ್ಟಿನಲ್ಲಿ 7 ಬಾರಿ ವಿಶ್ವಕಪ್ ಫೈನಲ್ ಆಡಿರೋ ಅನುಭವ ಟೀಂ ಆಸೀಸ್‍ಗೆ ಇದೆ. ಇದೇ ಅನುಭವದಲ್ಲಿ 8ನೇ ಫೈನಲ್‍ಗೆ ಆಸ್ಟ್ರೇಲಿಯಾ ಸಜ್ಜಾಗಿದ್ದು, ಕಪ್ ಗೆಲ್ಲುವ ವಿಶ್ವಾಸದಲ್ಲಿದೆ. ಇದಕ್ಕೆ ಭಾರತ ಕೂಡ ರಣತಂತ್ರವನ್ನ ಹಾಕಿಕೊಂಡಿದ್ದು ಮೂರನೇ ಬಾರಿಗೆ ವರ್ಲ್ಡ್ ಕಪ್ ಗೆಲ್ಲುವ ತವಕದಲ್ಲಿದೆ. ಇದಕ್ಕೆ ಉತ್ತರ ಇವತ್ತಿನ ಮ್ಯಾಚ್‍ನಿಂದ ಸಿಗಲಿದೆ.