ನವದೆಹಲಿ: 2019ರ ವಿಶ್ವಕಪ್ ನಾನು ಆಡಿದ ವಿಶ್ವಕಪ್‍ಗಳಲ್ಲೇ ಅತ್ಯಂತ ಸವಾಲಿನ ಟೂರ್ನಿ ಎಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಇಂದು ರಾತ್ರಿ ವಿಶ್ವಕಪ್‍ಗೆಂದು ಭಾರತ ತಂಡ ಇಂಗ್ಲೆಂಡ್‍ಗೆ ತೆರಳಲಿದ್ದು, ಇದಕ್ಕೂ ಮುಂಚೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ನಾನು ಇಲ್ಲಿಯವರೆಗೂ ಅಡಿದ ಮೂರು ವಿಶ್ವಕಪ್‍ನಲ್ಲಿ ಈ ಬಾರಿ ವಿಶ್ವಕಪ್ ತುಂಬ ಸವಾಲಿನಿಂದ ಕೂಡಿದೆ ಎಂದರು.
Advertisement
“ಇದು ನನಗೆ ತುಂಬ ಸವಾಲಿನ ವಿಶ್ವಕಪ್. ನಾವು ಉತ್ತಮ ಕ್ರಿಕೆಟ್ ಅಟದ ಕಡೆ ಗಮನ ನೀಡಬೇಕು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಆಟವಾಡಿದರೆ ನಾವು ಆಡಿದ ಪ್ರತಿ ಪಂದ್ಯದಲ್ಲೂ ಉತ್ತಮ ಫಲಿತಾಂಶ ಕಾಣಬಹುದು. ನಮ್ಮ ತಂಡ ಸಾಧ್ಯವದಷ್ಟು ಸರಳವಾಗಿ ಇರಲು ಪ್ರಯತ್ನಮಾಡಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Advertisement
Advertisement
ಐಸಿಸಿ ಟೂರ್ನಿಗಳಲ್ಲಿ ಪಿಚ್‍ಗಳು ಉತ್ತಮವಾಗಿರುತ್ತವೆ. ವಿಶ್ವಪಕ್ ವೇಳೆಯ ಪಿಚ್‍ಗಳಿಗೂ ಮತ್ತು ನಾವು ಸಮಾನ್ಯವಾಗಿ ಆಡುವ ಏಕದಿನ ಪಂದ್ಯಗಳ ಪಿಚ್‍ಗಳಿಗೂ ತುಂಬಾ ವ್ಯತ್ಯಾಸವಿರುತ್ತದೆ. ಇಂಗ್ಲೆಂಡ್‍ನಲ್ಲಿರುವ ಪಿಚ್‍ಗಳು ಹೈ ಸ್ಕೋರಿಂಗ್ ಪಂದ್ಯಗಳಿಗೆ ಹೆಚ್ಚು ಅನುಕೂಲವಾಗಿವೆ. ಆದರೆ ಕೆಲ ತಂಡಗಳು 260ರಿಂದ 270 ರನ್‍ಗಳಿಗೆ ಎದುರಾಳಿಗಳನ್ನು ಕಟ್ಟಿಹಾಕುವ ಸಾಮಥ್ರ್ಯ ಹೊಂದಿವೆ ಎಂದು ಹೇಳಿದರು.
Advertisement
ಮೇ 30 ರಿಂದ ವಿಶ್ವಕಪ್ ಅರಂಭವಾಗಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ದಕ್ಷಿಣ ಅಫ್ರಿಕಾ ವಿರುದ್ಧ ಜೂನ್ 5 ರಂದು ಆಡಲಿದೆ. ನಂತರ ಆಸ್ಟ್ರೇಲಿಯಾ(ಜೂ.9), ನ್ಯೂಜಿಲೆಂಡ್(ಜೂ.13), ಪಾಕಿಸ್ತಾನ(ಜೂ.16), ಅಪ್ಘಾನಿಸ್ತಾನ(ಜೂ.22), ವೆಸ್ಟ್ ಇಂಡೀಸ್(ಜೂ.27), ಇಂಗ್ಲೆಂಡ್(ಜೂ.30), ಬಾಂಗ್ಲಾದೇಶ(ಜು.2), ಶ್ರೀಲಂಕಾ(ಜು.6) ವಿರುದ್ಧ ಆಡಲಿದೆ.
ಭಾರತದ ತಂಡದ ಹರ್ದಿಕ್ ಪಾಂಡ್ಯ, ವಿರಾಟ್ ಕೊಹ್ಲಿ, ಶಿಖರ್ ಧವನ್, ಎಂಎಸ್ ಧೋನಿ, ಕೆಎಲ್ ರಾಹುಲ್ ಮತ್ತು ಬೌಲರ್ ಗಳಾದ ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಅವರು ಉತ್ತಮವಾದ ಫಾರ್ಮ್‍ನಲ್ಲಿ ಇರುವುದರಿಂದ ವಿಶ್ವಕಪ್ ಗೆಲ್ಲುವ ತಂಡಗಳಲ್ಲಿ ಭಾರತ ಮುಂಚೂಣಿಯಲ್ಲಿದೆ.