ಥ್ರಿಲ್ಲಿಂಗ್ ಫೈನಲ್, ಸೂಪರ್ ಓವರ್ ಟೈ – ಇಂಗ್ಲೆಂಡ್ ಚಾಂಪಿಯನ್

Public TV
2 Min Read
england cricket main

ಲಾರ್ಡ್ಸ್: ಸೂಪರ್ ಓವರಿನಲ್ಲಿ ನ್ಯೂಜಿಲೆಂಡ್ ತಂಡವನ್ನು ಕೊನೆಯ ಎಸೆತದಲ್ಲಿ ಮಣಿಸುವ ಮೂಲಕ ತವರು ನೆಲದಲ್ಲಿ ಮೊದಲ ಬಾರಿಗೆ ವಿಶ್ವಕಪ್ ಚಾಂಪಿಯನ್ ಆಗಿ ಇಂಗ್ಲೆಂಡ್ ಹೊರ ಹೊಮ್ಮಿದೆ.

ಸೂಪರ್ ಓವರಿನ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 15 ರನ್ ಹೊಡೆಯಿತು. ನ್ಯೂಜಿಲೆಂಡ್ ತಂಡಕ್ಕೆ ಕೊನೆಯ ಎಸೆತದಲ್ಲಿ 2 ರನ್ ಬೇಕಿತ್ತು. ಈ ವೇಳೆ ಎರಡು ರನ್ ಕದಿಯಲು ಮುಂದಾಗಿದ್ದ ಗುಪ್ಟಿಲ್ ರನ್ ಔಟ್ ಆದರು.

ಟ್ರೆಂಟ್ ಬೌಲ್ಟ್ ಎಸೆದ ಓವರ್ ನಲ್ಲಿ ಬೆನ್ ಸ್ಟೋಕ್ಸ್ ಮತ್ತು ಬಟ್ಲರ್ ಒಂದೊಂದು ಬೌಂಡರಿ ಹೊಡೆದಿದ್ದರು. ಜೋಫ್ರಾ ಅರ್ಚರ್ ಎಸೆದ ಓವರ್ ನಲ್ಲಿ ನಿಶಮ್ ಒಂದು ಸಿಕ್ಸರ್ ಹೊಡೆದರೆ ಯಾವುದೇ ಬೌಂಡರಿ ಬಂದಿರಲಿಲ್ಲ. ಎರಡು ತಂಡಗಳ ರನ್ ಸಮವಾಗಿದ್ದರೂ  ಒಟ್ಟು 24 ಬೌಂಡರಿ ಸಿಡಿದ ಪರಿಣಾಮ ಇಂಗ್ಲೆಂಡ್ ಚಾಂಪಿಯನ್ ಆಗಿ ಹೊರಹೊಮ್ಮಿತು. ನ್ಯೂಜಿಲೆಂಡ್ 16 ಬೌಂಡರಿ ಹೊಡೆದಿತ್ತು.

ಪಂದ್ಯ ಟೈ: ಮೊದಲ ಬ್ಯಾಟ್ ನಡೆಸಿದ ನ್ಯೂಜಿಲೆಂಡ್ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿತು. ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಬೆನ್ ಸ್ಟೋಕ್ಸ್ ಸಾಹಸದಿಂದ 50 ಓವರ್ ಗಳಲ್ಲಿ 241 ರನ್ ಗಳಿಗೆ ಆಲೌಟ್ ಆಯ್ತು.

ಕೊನೆಯ ಓವರ್ ಹೀಗಿತ್ತು: ಕೊನೆಯ ಓವರಿನಲ್ಲಿ ಇಂಗ್ಲೆಂಡ್ ಗೆಲ್ಲಲು 15 ರನ್ ಬೇಕಿತ್ತು. ಬೌಲ್ಟ್ ಎಸೆದ ಮೊದಲ ಎರಡು ಎಸೆತಗಳಲ್ಲಿ ಯಾವುದೇ ರನ್ ಬಾರದೇ ಇದ್ದರೆ ಮೂರನೇ ಎಸೆತವನ್ನು ಬೆನ್ ಸ್ಟೋಕ್ಸ್ ಸಿಕ್ಸರಿಗೆ ಅಟ್ಟಿದರು. ನಾಲ್ಕನೇ ಎಸೆತದಲ್ಲಿ ಎರಡು ರನ್ ಓಡಿದ್ದರು. ಈ ವೇಳೆ ಬಾಲ್ ಓವರ್ ಥ್ರೋ ಆಗಿ ಕೂಪರ್ ಕೈ ಸೇರದೇ ಬೌಂಡರಿ ಸೇರಿದ ಪರಿಣಾಮ 4 ರನ್ ಬಂತು. ಹೀಗಾಗಿ ಕೊನೆಯ ಎರಡು ಎಸೆತಗಳಲ್ಲಿ ಮೂರು ರನ್ ಗಳಿಸಬೇಕಿತ್ತು. ಸ್ಟ್ರೈಕ್ ನಲ್ಲಿದ್ದ ಬೆನ್ ಸ್ಟೋಕ್ಸ್ ಎರಡು ರನ್ ಕದಿಯಲು ಯತ್ನಿಸಿದಾಗ ನಾನ್ ಸ್ಟ್ರೈಕ್ ನಲ್ಲಿದ್ದ ಅದಿಲ್ ರಶೀದ್ ರನೌಟ್ ಆದರು. ಕೊನೆಯ ಎಸೆತದಲ್ಲಿ 2 ರನ್ ಬೇಕಿತ್ತು. ಈ ಎಸೆತದಲ್ಲಿ ಒಂದು ರನ್ ಕಸಿದು ಎರಡನೇ ರನ್ ಓಡಲು ಯತ್ನಿಸಿದಾಗ ಮಾಕ್ ವುಡ್ ರನೌಟ್ ಆದರು. ಈ ಮೂಲಕ ಪಂದ್ಯ ಟೈ ಆಗಿ ಫಲಿತಾಂಶಕ್ಕೆ ಮೊದಲ ಬಾರಿಗೆ ಸೂಪರ್ ಓವರ್ ಮೊರೆ ಹೋಗಲಾಯಿತು.

england1

ಬೆನ್ ಸ್ಟೋಕ್ಸ್ ಔಟಾಗದೇ 84 ರನ್(98 ಎಸೆತ, 5 ಬೌಂಡರಿ, 2 ಸಿಕ್ಸರ್), ಜೋಸ್ ಬಟ್ಲರ್ 59 ರನ್(60 ಎಸೆತ, 6 ಬೌಂಡರಿ) ಬೈರ್ ಸ್ಟೋವ್ 36 ರನ್(55 ಎಸೆತ, 7 ಬೌಂಡರಿ) ಹೊಡೆದರು.

ನ್ಯೂಜಿಲೆಂಡ್ ಪರವಾಗಿ ನಿಕೋಲಸ್ 55 ರನ್(77 ಎಸೆತ, 4 ಬೌಂಡರಿ, ಕೇನ್ ವಿಲಿಯಮ್ಸನ್ 30 ರನ್(53 ಎಸೆತ, 2 ಬೌಂಡರಿ) ಲಥಮ್ 47 ರನ್( 56 ಎಸೆತ, 2 ಬೌಂಡರಿ, 1 ಸಿಕ್ಸ್) ಹೊಡೆದರು. ಇಂಗ್ಲೆಂಡ್ ಇತರೇ ರೂಪದಲ್ಲಿ 30 ರನ್(12 ಲೆಗ್ ಬೈ, 1 ನೋಬಾಲ್, 17 ವೈಡ್) ನೀಡಿತ್ತು.

newzeald e1563130505307

 

 

Share This Article