ವಾಷಿಂಗ್ಟನ್: ಅಮೆರಿಕದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೇಟಿಕ್ಸ್ ಚಾಂಪಿಯನ್‍ಶಿಪ್‍ನ ಪುರುಷರ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದು ಭಾರತಕ್ಕೆ ಮೊದಲ ಪದಕ ತಂದು ಕೊಟ್ಟಿದ್ದಾರೆ.
Advertisement
ಫೈನಲ್‍ನಲ್ಲಿ ನೀರಜ್ ಚೋಪ್ರಾ 88.13 ಮೀ. ದೂರ ಎಸೆದು ಬೆಳ್ಳಿ ಪದಕ ಪಡೆದರು. ಈ ಮೂಲಕ 19 ವರ್ಷಗಳ ಬಳಿಕ ಭಾರತಕ್ಕೆ ಮತ್ತೊಂದು ವಿಶ್ವ ಅಥ್ಲೇಟಿಕ್ಸ್ ಚಾಂಪಿಯನ್‍ಶಿಪ್ ಪದಕ ತಂದುಕೊಟ್ಟು ಇತಿಹಾಸ ನಿರ್ಮಿಸಿದರು. ಇದನ್ನೂ ಓದಿ: ರೈಟ್‍ಮೆನ್ ಪ್ರೀಮಿಯರ್ ಲೀಗ್ 2022 – ಪಬ್ಲಿಕ್ ಕ್ಯಾಪ್ಟನ್ ತಂಡ ಚಾಂಪಿಯನ್
Advertisement
ಫೈನಲ್‍ನಲ್ಲಿ ಗ್ರೆನಡಾದ ಆಂಡರ್ಸನ್ ಪೀಟರ್ಸ್ ಸತತ ಮೂರು ಎಸೆತಗಳನ್ನು 90+ ಮೀ. ಎಸೆದು ಚಿನ್ನದ ಪದಕಕ್ಕೆ ಮುತ್ತಿಕ್ಕಿದರೆ, ನೀರಜ್ ಚೋಪ್ರಾ ಮೊದಲ ಎಸೆತ ಫೌಲ್ ಆಯಿತು. ಎರಡನೇ ಎಸೆತ 82.39 ಮೀ., ಮೂರನೇ ಎಸೆತ 86.37 ಮೀ. ಮತ್ತು ನಾಲ್ಕನೇ ಎಸೆತ 88.13 ಎಸೆದು ಬೆಳ್ಳಿ ಪದಕ ಗೆದ್ದರು. ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಜಾಕುಬ್ ವಡ್ಲೆಜ್ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಪಡೆದರು.
Advertisement
Here’s the 88.13m Throw for #NeerajChopra
Bought back the smile and in Silver Medal position
Video Courtesy | WorldAthletics YT pic.twitter.com/7Be3lghcqr
— IndiaSportsHub (@IndiaSportsHub) July 24, 2022
Advertisement
ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಪಡೆದು ಇತಿಹಾಸ ನಿರ್ಮಿಸಿದ್ದ ನೀರಜ್ ಚೋಪ್ರಾ, ವಿಶ್ವ ಅಥ್ಲೇಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ 88.39 ಮೀ. ಎಸೆದು ಫೈನಲ್‍ಗೆ ಎಂಟ್ರಿಕೊಟ್ಟಿದ್ದರು. ಫೈನಲ್‍ನಲ್ಲಿ ಬೆಳ್ಳಿಗೆದ್ದು 39 ವರ್ಷಗಳ ಇತಿಹಾಸ ಹೊಂದಿರುವ ವಿಶ್ವ ಅಥ್ಲೇಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಭಾರತಕ್ಕೆ 2ನೇ ಪದಕ ತಂದುಕೊಟ್ಟರು. 2003ರಲ್ಲಿ ಪ್ಯಾರಿಸ್‍ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಲಾಂಗ್ ಜಂಪರ್ ಅಂಜು ಬಾಬಿ ಜಾರ್ಜ್ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಆ ಬಳಿಕ ಇದೀಗ ನೀರಜ್ ಚೋಪ್ರಾ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.