ಸುರಂಗದೊಳಗೆ ಸಿಲುಕಿ 10 ದಿನ – ಪೈಪ್ ಮೂಲಕ ಕ್ಯಾಮೆರಾ ಕಳುಹಿಸಿ ಕಾರ್ಮಿಕರ ಮೊದಲ ವೀಡಿಯೋ ಸೆರೆ

Public TV
1 Min Read
Uttarkashi tunnel

ಡೆಹ್ರಾಡೂನ್: ಕಳೆದ 10 ದಿನಗಳಿಂದ ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲಿ (Uttarkashi) ಸುರಂಗದೊಳಗೆ (Tunnel) ಸಿಲುಕಿರುವ ಕಾರ್ಮಿಕರ ಮೊದಲ ವೀಡಿಯೋವನ್ನು (Video) ರಕ್ಷಣಾ ಅಧಿಕಾರಿಗಳು ಸೆರೆಹಿಡಿದಿದ್ದಾರೆ.

ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರಿಗೆ ಕಳೆದ 10 ದಿನಗಳಿಂದ 6 ಇಂಚಿನ ಪೈಪ್ ಮೂಲಕ ನೀರು, ಆಹಾರವನ್ನು ಕಳುಹಿಸಲಾಗುತ್ತಿದೆ. ಇದೀಗ ಕಾರ್ಮಿಕರು ಸುರಕ್ಷಿತರಾಗಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಲು ಇದೇ ಪೈಪ್ ಮೂಲಕ ಎಂಡೋಸ್ಕೋಪಿ ಕ್ಯಾಮೆರಾವನ್ನು ಸುರಂಗದೊಳಗೆ ಕಳುಸಿದ್ದು, ಕಾರ್ಮಿಕರ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.

ರಕ್ಷಣಾ ಅಧಿಕಾರಿಗಳು ವಾಕಿ ಟಾಕೀಸ್ ಮೂಲಕ ಕೆಲ ಕಾರ್ಮಿಕರೊಂದಿಗೆ ಮಾತನಾಡಿದ್ದಾರೆ. ಸೆರೆಹಿಡಿಯಲಾದ ವೀಡಿಯೋದಲ್ಲಿ ರಕ್ಷಣಾ ಅಧಿಕಾರಿಗಳು ಕಾರ್ಮಿಕರಿಗೆ ಕ್ಯಾಮೆರಾ ಮುಂದೆ ಬರುವಂತೆ ಕೇಳಿರುವುದು ಕಂಡುಬಂದಿದೆ. ಕಾರ್ಮಿಕರಿಗೆ ಮೊಬೈಲ್, ಚಾರ್ಜರ್‌ಗಳನ್ನು ಪೈಪ್ ಮೂಲಕ ಕಳುಹಿಸಲಾಗುವುದು ಎಂದು ರಕ್ಷಣಾ ಕಾರ್ಯಾಚರಣೆ ಉಸ್ತುವಾರಿ ಕರ್ನಲ್ ದೀಪಕ್ ಪಾಟೀಲ್ ಹೇಳಿದ್ದಾರೆ.

ಕಾರ್ಮಿಕರು ಸುರಂಗದೊಳಗೆ ಸಿಲುಕಿದಾಗಿನಿಂದ ಅವರಿಗೆ ಸೇವಿಸಲು ಪೈಪ್ ಮೂಲಕ ಒಣ ಹಣ್ಣುಗಳನ್ನು ಮಾತ್ರವೇ ಕಳುಹಿಸಲಾಗಿತ್ತು. ಕಳೆದ ರಾತ್ರಿ ಗಾಜಿನ ಬಾಟಲಿಗಳಲ್ಲಿ ಕಿಚಡಿಯನ್ನು ತುಂಬಿ ಕಳುಹಿಸಲಾಗಿದೆ. ಈ ಮೂಲಕ 10 ದಿನಗಳ ಬಳಿಕ ಕಾರ್ಮಿಕರಿಗೆ ಬಿಸಿ ಊಟ ದೊರಕಿದಂತಾಗಿದೆ.

Uttarkashi Tunnel 1

ಕಳೆದ ಭಾನುವಾರ ಸುರಂಗದ ಒಂದು ಭಾಗ ಕುಸಿದ ಕಾರಣ ಅಂದಿನಿಂದ ಸುರಂಗದೊಳಗೆ 41 ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಸದ್ಯ ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಮತ್ತು ಅವರನ್ನು ಸುರಕ್ಷಿತವಾಗಿ ಹೊರತರಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದನ್ನೂ ಓದಿ: ವಿದ್ಯುತ್ ಕೊರತೆ ಮಧ್ಯೆ ಕಲ್ಲಿದ್ದಲು ಕಳ್ಳಾಟ – ಕಳ್ಳರ ಪಾಲಾಗುತ್ತಿದೆ ಟನ್‌ಗಟ್ಟಲೇ ಕಲ್ಲಿದ್ದಲು

ನಿರ್ಮಾಣ ಹಂತದಲ್ಲಿರುವ ಈ ಸುರಂಗ ಚಾರ್ ಧಾಮ್ ಯೋಜನೆಯ ಭಾಗವಾಗಿದೆ. ಇದು ಹಿಂದೂ ಯಾತ್ರಾ ಸ್ಥಳಗಳಾದ ಬದರಿನಾಥ್, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿಗಳಿಗೆ ಸಂಪರ್ಕವನ್ನು ಕಲ್ಪಿಸುವ ಯೋಜನೆಯಾಗಿದೆ. ಇದನ್ನೂ ಓದಿ: ಸತ್ತೇ ಹೋಗಿದ್ದೇನೆ ಎಂದು ಬಿಂಬಿಸಿ ತಲೆಮರೆಸಿಕೊಂಡಿದ್ದ ರೌಡಿ ಬಂಧನ

Share This Article