ಮಂಡ್ಯ: ವ್ಯಾಕ್ಸಿನ್ ಹಾಕಿಸಿಕೊಂಡರೆ ಜ್ವರ ಬರುತ್ತದೆ, ಅದರಿಂದ ನಮ್ಮ ದುಡಿಮೆ ನಿಂತು ಹೋಗುತ್ತದೆ ಎಂಬ ಭಯದಿಂದ ಅಲೆಮಾರಿಗಳು ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
Advertisement
ಮಂಡ್ಯಗೆ ಹೊಟ್ಟೆ ಪಾಡಿಗಾಗಿ 15 ಆಟೋಗಳ ಮೂಲಕ ಸುಮಾರು 50ಕ್ಕೂ ಹೆಚ್ಚು ಜನ ಕುಲುಮೆ ಕೆಲಸಕ್ಕೆ ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕ ಭಾಗಗಳಿಂದ ಈ ಜನರು ಮಂಡ್ಯ ಭಾಗಕ್ಕೆ ಬಂದಿದ್ದಾರೆ. ಯಾಕೆ ನೀವು ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ ಎಂದರೆ, ನಾವು ಇಲ್ಲಿಗೆ ಕೂಲಿ ಮಾಡಲು ಬಂದಿದ್ದೇವೆ. ನಾವು ಲಸಿಕೆ ಹಾಕಿಸಿಕೊಂಡು ಜ್ವರ ಹಾಗೂ ಕೈ ನೋವು ಬಂದರೆ ನಮಗೆ ಕೆಲಸ ಮಾಡಲು ಆಗುವುದಿಲ್ಲ. ನಾವು ಆ ದಿನ ದುಡಿದು ಆ ದಿನ ತಿನ್ನುವವರು. ನಾವು ಕೆಲಸ ಮಾಡದೇ ಇದ್ದರೆ ನಮಗೆ ಯಾರು ಊಟ ಕೊಡುತ್ತಾರೆ, ಹೀಗಾಗಿ ನಾವು ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಇದನ್ನೂ ಓದಿ:ಉಸಿರಾಟ ತೊಂದರೆ- ಹರ್ಯಾಣ ಗೃಹ ಸಚಿವ ಆಸ್ಪತ್ರೆಗೆ ದಾಖಲು
Advertisement
Advertisement
ಕೇಂದ್ರ ಸರ್ಕಾರ ಕಟ್ಟಕಡೆಯ ವ್ಯಕ್ತಿಗೂ ಲಸಿಕೆ ನೀಡುವ ಕೆಲಸ ನಾವು ಮಾಡುತ್ತಿದ್ದೇವೆ ಎನ್ನುತ್ತಿದೆ. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ. ಲಸಿಕೆ ಹಾಕಿಸಿಕೊಳ್ಳಿ ಎಂದು ಅಧಿಕಾರಿಗಳು ಜಾಗೃತಿ ಮೂಡಿಸಿ ಅವರಿಗೆ ಲಸಿಕೆ ನೀಡಬೇಕಿತ್ತು. ಆದರೆ ಇದುವರೆಗೂ ಅಧಿಕಾರಿಗಳು ಈ ಜನರ ಬಳಿಯೇ ಸುಳಿದಿಲ್ಲ. ಒಂದು ವೇಳೆ ಇವರಿಗೆ ಲಸಿಕೆ ನೀಡದಿದ್ದರೇ ಇವರಿಗೆ ಕೊರೊನಾ ತಗುಲಿ, ಮತ್ತಷ್ಟು ಕೊರೊನಾ ಹರಡುವ ಸಾಧ್ಯತೆ ಇದೆ. ಇದನ್ನೂ ಓದಿ:ಕೋವಿಡ್ ನಿಯಮ ಉಲ್ಲಂಘನೆ – 70 ಲಕ್ಷ ವಸೂಲಿ ಮಾಡಿದ ಹು-ದಾ ಪಾಲಿಕೆ