ಮುಂಗಾರು ಮಳೆಗೆ ರಾಜ್ಯದಲ್ಲಿ ಮೊದಲ ಬಲಿ – ಮನೆ ಮೇಲೆ ಗೋಡೆ ಕುಸಿದು ಕಾರ್ಮಿಕ ದುರ್ಮರಣ

Public TV
1 Min Read
BNG

ಬೆಂಗಳೂರು: ನಗರದಲ್ಲಿ ಮುಂಗಾರು ಮಳೆ ಮೊದಲ ಬಲಿ ಪಡೆದಿದ್ದು, ಶೀಟ್ ಮನೆ ಮೇಲೆ ಗೋಡೆ ಬಿದ್ದ ಪರಿಣಾಮ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.

ಬಸವನಗುಡಿಯ ಐಟಿಐ ಲೇಔಟ್‍ನಲ್ಲಿ ಶುಕ್ರವಾರ ಮಧ್ಯರಾತ್ರಿ 12.40ರ ಸುಮಾರಿಗೆ ಈ ದುರಂತ ನಡೆದಿದೆ. ಮೃತ ದುರ್ದೈವಿಯನ್ನು ಮಾಂತೇಶ್ ಎಂದು ಗುರುತಿಸಲಾಗಿದ್ದು, ಇವರು ಕಲಬುರಗಿ ಮೂಲದವರು ಎನ್ನಲಾಗಿದೆ.

vlcsnap 2018 06 02 09h05m43s10

ನಿನ್ನೆ ತಡರಾತ್ರಿ ಮನೆ ಮೇಲೆ ಗೋಡೆ ಕುಸಿದಿದ್ದು, ಮಾಂತೇಶ್ ಸ್ಥಳದಲ್ಲೇ ಮೃತಟಪಟ್ಟಿದ್ದಾರೆ. ಘಟನೆಯ ಬಳಿಕ ಶೋಭಾ, ಶರಣಪ್ಪ, ಪಾರ್ವತಿ ಈ ಮೂವರನ್ನು ರಕ್ಷಣೆ ಮಾಡಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಸಿಬ್ಬಂದಿಯಿಂದ ಮಾಂತೇಶ್ ಮೃತದೇಹ ಹೊರಕ್ಕೆ ತೆಗೆಯಲಾಗಿತ್ತು.

ಕೂಲಿ ಕೆಲಸ ಅರಸಿ ಸ್ವಂತ ಊರು ಚಂಚುವಳಾ ದೊಟಿಕೊಳಾದಿಂದ ಬಂದಿದ್ದ ಪಾರ್ವತಿ-ಮಾಂತೇಶ್‍ಗೆ ಒಂದೂವರೆ ವರ್ಷದ ಹಿಂದೆಯಷ್ಟೇ ಮದ್ವೆ ಆಗಿತ್ತು. ಆದ್ರೆ ಇದೀಗ ಘಟನೆಯಿಂದಾಗಿ ಕುಟುಂಬ ಸಂಕಷ್ಟಕ್ಕೀಡಾಗಿದೆ.

ಚೆನ್ನಮ್ಮನಕೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

vlcsnap 2018 06 02 09h06m36s2

Share This Article
Leave a Comment

Leave a Reply

Your email address will not be published. Required fields are marked *