ಬೆಂಗಳೂರು: ನನ್ನ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಸತ್ತ ಬಳಿಕವೇ ಬಾಯಿ ಮುಚ್ಚೋದು ಎಂದು ಶಾಸಕ ಜಮೀರ್ ಅಹ್ಮದ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮತ್ತೆ ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್‌ನಲ್ಲಿ ನಡೀತಿರೋ `ಮುಖ್ಯಮಂತ್ರಿ ಕುರ್ಚಿ’ ಕದನಕ್ಕೆ ವಿರಾಮ ಬೀಳೋ ಲಕ್ಷಣಗಳು ಕಾಣಿಸುತ್ತಿಲ್ಲ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅತ್ಯಾಪ್ತ ಶಾಸಕ ಜಮೀರ್ ಅಹ್ಮದ್ ನಡುವಿನ ವಾಕ್ಸಮರ ಮುಂದುವರಿದಿದೆ. ಇದನ್ನೂ ಓದಿ: ಜಮೀರ್ Vs ಡಿಕೆಶಿ ಟಾಕ್ ವಾರ್ – ಶೋಕಾಸ್ ನೋಟಿಸ್‍ಗೆ ಪಟ್ಟು
Advertisement
ಬಾಯಿಮುಚ್ಚಿಕೊಂಡು ಕೆಲಸ ಮಾಡಬೇಕು, ವ್ಯಕ್ತಿ ಪೂಜೆ ಬಿಡ್ಬೇಕು ಅಂತ ನಿನ್ನೆಯಷ್ಟೇ ಜಮೀರ್‌ಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಾರ್ನಿಂಗ್ ಕೊಟ್ಟಿದ್ದರು. ಇದಕ್ಕೆ ಉತ್ತರಿಸಿರುವ ಶಾಸಕ ಜಮೀರ್, ನನ್ನ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಸತ್ತ ಬಳಿಕವೇ ಬಾಯಿ ಮುಚ್ಚೋದು ಅಂದಿದ್ದಾರೆ ಎಂದು ಹೇಳಿದ್ದಾರೆ.
Advertisement
ಹುಬ್ಬಳ್ಳಿಯಲ್ಲಿ ಸಿದ್ದರಾಮೋತ್ಸವ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಡಿಕೆಶಿ ನಮ್ಮ ಅಧ್ಯಕ್ಷರು, ನಮ್ಮ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಹಾರ್ನ್ ಮಾಡಿದರೂ ಸ್ಕೂಟರ್‌ಗೆ ಅಡ್ಡ ಬಂದನೆಂದು ಕಿವುಡನನ್ನು ಚಾಕುವಿನಿಂದ ಇರಿದು ಕೊಂದ ಬಾಲಕಿ
Advertisement
Advertisement
ನಾನು ಒಕ್ಕಲಿಗರ ಬಗ್ಗೆ ಯಾವುದೇ ತಪ್ಪು ಹೇಳಿಕೆ ನೀಡಿಲ್ಲ. ನನಗೂ ನಮ್ಮ ಜಾತಿಯವರಿಗಿಂತ ಒಕ್ಕಲಿಗರು ಬಹಳ ಆತ್ಮೀಯರಿದ್ದಾರೆ. ಚಲುರಾಯಸ್ವಾಮಿ ನನಗೆ ಏನನ್ನೂ ಹೇಳಿಲ್ಲ. ಎಐಸಿಸಿಯಿಂದಲೂ ನನಗೆ ಯಾವುದೇ ಸೂಚನೆ ಬಂದಿಲ್ಲ. ನಾನು ಪಕ್ಷ ಪೂಜೆನೂ ಮಾಡ್ತೀನಿ, ವ್ಯಕ್ತಿ ಪೂಜೆನೂ ಮಾಡ್ತೀನಿ. ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ ಅಂದಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ರಾಜಕೀಯದಲ್ಲಿ ಲೆವೆಲ್ ಗುರುತಿಸೋದು ಜನ. ನಮ್ಮ ಲೆವೆಲ್ ಜನ ಹೇಳಬೇಕು. ಪದೇ ಪದೇ ಇದನ್ನ ಮುಂದುವರಿಸೋದು ಬೇಡ ಎಂದು ಡಿಕೆಶಿಗೆ ಕುಟುಕಿದ್ದಾರೆ.