CrimeLatestLeading NewsMain PostNational

ಹಾರ್ನ್ ಮಾಡಿದರೂ ಸ್ಕೂಟರ್‌ಗೆ ಅಡ್ಡ ಬಂದನೆಂದು ಕಿವುಡನನ್ನು ಚಾಕುವಿನಿಂದ ಇರಿದು ಕೊಂದ ಬಾಲಕಿ

Advertisements

ರಾಯಪುರ: ಹಾರ್ನ್ ಮಾಡಿದರೂ ತನ್ನ ಸ್ಕೂಟರ್‌ಗೆ ಅಡ್ಡ ಬಂದನೆಂದು ಕಿವುಡ ಹಾಗೂ ಮೂಕನಾಗಿದ್ದ ವ್ಯಕ್ತಿಯನ್ನು 16 ವರ್ಷದ ಬಾಲಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಛತ್ತೀಸ್‌ಗಡದಲ್ಲಿ ನಡೆದಿದೆ.

ಛತ್ತೀಸ್‌ಗಡದ ರಾಜಧಾನಿ ರಾಯ್‌ಪುರದ ಕಂಕಾಲಿಪಾರಾ ಪ್ರದೇಶದ ಆಜಾದ್ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಚ್ಚಿಬೀಳಿಸುವ ಈ ಘಟನೆ ನಡೆದಿದೆ. ಇದನ್ನೂ ಓದಿ: ನಮ್ಮ ನಾಯಕರಾಗಿದ್ದ ಸಿದ್ದರಾಮಯ್ಯಗೆ ಕಾಂಗ್ರೆಸ್ ಶಾಸಕರೇ ಅಪಮಾನ ಮಾಡ್ತಿದ್ದಾರೆ – ಸಚಿವ ಸುಧಾಕರ್

ಸ್ಕೂಟರ್‌ನಲ್ಲಿ ಶಾಲೆಗೆ ಹೋಗುತ್ತಿದ್ದ ಮಂದಿರ್ ಅಸಾದ್ ಪ್ರದೇಶದ 16 ವರ್ಷದ ಬಾಲಕಿ ರಸ್ತೆಯಲ್ಲಿ ಅಡ್ಡ ಬಂದ ವ್ಯಕ್ತಿಗೆ ಹಾರ್ನ್ ಮಾಡಿದ್ದಾಳೆ. ಆದರೆ ಆ ವ್ಯಕ್ತಿ ದೂರ ಸರಿಯದಿದ್ದರಿಂದ ಬ್ಯಾಗ್‌ನಲ್ಲಿದ್ದ ಚಾಕುವನ್ನು ತೆಗೆದು ಆತನ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾಳೆ. ಹತ್ಯೆಯಾದ 36 ವರ್ಷದ ವ್ಯಕ್ತಿ ಕಿವುಡ ಹಾಗೂ ಮೂಕನಾಗಿದ್ದ ಎಂದು ಎಸ್‌ಪಿ ಡಿ.ಸಿ.ಪಟೇಲ್ ತಿಳಿಸಿದ್ದಾರೆ. ಇದನ್ನೂ ಓದಿ: ಮರಳು ಮೂಟೆ ಅಳವಡಿಸಿದ ನಂತರ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಘು ವಾಹನ ಸಂಚಾರ: ಬಿ.ಸಿ.ನಾಗೇಶ್

ಘಟನೆಗೆ ಸಂಬಂಧಿಸಿದಂತೆ ಬಾಲಕಿಯನ್ನು ಬಂಧಿಸಲಾಗಿದ್ದು ಸೋಮವಾರ ಬಾಲ ನ್ಯಾಯಮಂಡಳಿ ಮುಂದೆ ಅವಳನ್ನು ಹಾಜರು ಪಡಿಸಲಾಗುವುದು. ಬಾಲಕಿ ವಿರುದ್ಧ ಐಪಿಸಿ ಸೆಕ್ಷನ್ 302 (ಹತ್ಯೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪಟೇಲ್ ತಿಳಿಸಿದ್ದಾರೆ.

Live Tv

Leave a Reply

Your email address will not be published.

Back to top button