ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ: ಸ್ವಾತಿ ಮಲಿವಾಲ್‌

Public TV
1 Min Read
Swati Maliwal 1

ನವದೆಹಲಿ: ನನ್ನ ರಾಜ್ಯಸಭಾ (Rajya Sabha) ಸ್ಥಾನ ಯಾರಿಗಾದರೂ ಬೇಕಾಗಿದ್ದರೆ, ಪ್ರೀತಿಯಿಂದ ಕೇಳಿದ್ದರೆ ನಾನು ಬಿಟ್ಟುಕೊಡುತ್ತಿದ್ದೆ. ಈಗ ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಸಂಸದೆ ಸ್ವಾತಿ ಮಲಿವಾಲ್ (Swati Maliwal) ಹೇಳಿದ್ದಾರೆ.

ತಮ್ಮ ಮೇಲೆ ನಡೆದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ಯಾವುದೇ ಪದವಿಗೆ ಆಸೆ ಪಟ್ಟಿಲ್ಲ. ಅವರಿಗೆ ಬೇಕಿದ್ದರೆ ನಾನು ಜೀವವನ್ನು ಕೊಡುತ್ತಿದ್ದೆ. ಈ ಘಟನೆ ಬಳಿಕ ಭೂಮಿಯ ಮೇಲಿರುವ ಯಾವುದೇ ಶಕ್ತಿ ಬಂದರೂ ನಾನು ರಾಜೀನಾಮೆ ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸರಿಗಾಗಿ ನಾನು, ನನ್ನ ಪೋಷಕರು, ಹೆಂಡತಿ ಕಾಯುತ್ತಿದ್ದೇವೆ: ಕೇಜ್ರಿವಾಲ್‌ ಪೋಸ್ಟ್‌

SWATI MALIWAL

ಅಧಿಕಾರವು ಬಂದಾಗ ಕ್ರಮೇಣ ಅಹಂಕಾರವೂ ಬರುತ್ತದೆ. ಯಾವುದು ಸರಿ, ಯಾವುದು ತಪ್ಪು ಎಂದು ನೋಡುವುದಿಲ್ಲ. ಒಬ್ಬ ಮಹಿಳೆಯ ಮೇಲೆ‌ ಹಲ್ಲೆ ಮಾಡುವುದಲ್ಲದೇ ಚಾರಿತ್ರ್ಯಹರಣ ಮಾಡಬಹುದು ಎಂದು ಊಹಿಸಿರಲಿಲ್ಲ ಎಂದು ಮಾತನಾಡಿದ್ದಾರೆ.

ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ನಿವಾಸದಲ್ಲಿ ಎಲ್ಲವೂ ನಡೆಯಿತು. ಅಂದು ನನ್ನ ಮೇಲೆ ಹಲ್ಲೆ ನಡೆಯುವಾಗ ಕೂಗಿಕೊಂಡೆ. ಯಾರು ನನ್ನ ಸಹಾಯಕ್ಕೆ ಬರಲಿಲ್ಲ. ಈಗ ಆರೋಪಿಯ ಸಹಾಯಕ್ಕೆ ಸಿಎಂ ಅರವಿಂದ್ ಕೇಜ್ರಿವಾಲ್ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರನ್ನು ಪಾರು ಮಾಡಲು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸ್ವಾತಿ ಮಲಿವಾಲ್‌ ಹಲ್ಲೆ ಪ್ರಕರಣ; ಕೊನೆಗೂ ಮೌನ ಮುರಿದ ಕೇಜ್ರಿವಾಲ್‌

Share This Article