ಚಂಡೀಗಢ: ಸಿಎಂ ಎಂದರೆ ಸಾಮಾನ್ಯ ಮನುಷ್ಯ ಎಂದು ಹೇಳುತ್ತಾರೆ. ನಾನು ಉನ್ನತ ಹುದ್ದೆಯನ್ನು ಪಡೆದರೂ ಸಾಮಾನ್ಯ ಮನುಷ್ಯನಾಗಿರುತ್ತೇನೆ ಎಂದು ಆಮ್ ಆದ್ಮಿ ಪಕ್ಷದ (AAP) ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರು ತಿಳಿಸಿದ್ದಾರೆ.
ಬುಧವಾರ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಮುಖ್ಯಮಂತ್ರಿಯಾದರೆ ಅಧಿಕಾರ ನನ್ನ ತಲೆಗೆ ಏರುವುದಿಲ್ಲ. ಖ್ಯಾತಿ ಯಾವಾಗಲೂ ನನ್ನ ಜೀವನದ ಭಾಗವಾಗಿದೆ. ಯಾವಾಗಲೂ ನಾನು ಜನರ ಮಧ್ಯೆ ಹೋಗಿ ಅವರಿಗಾಗಿ ಕೆಲಸ ಮಾಡುತ್ತೇನೆ. ಮುಖ್ಯಮಂತ್ರಿಯಾದರೆ ರಾಜಕೀಯ ನನ್ನ ತಲೆ ಕೆಡಿಸಿಕೊಳ್ಳುತ್ತದೆ ಎಂದು ನನಗೆ ಅನಿಸುವುದಿಲ್ಲ. ನನಗೆ ಯಾವುದು ಸಹ ಹೊಸದಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇಶಾದ್ಯಂತ ಸುದ್ದಿಯಾಗಿದ್ದ ಹತ್ರಾಸ್, ಲಖೀಂಪುರದಲ್ಲಿ ಬಿಜೆಪಿಗೆ ಮುನ್ನಡೆ
ನನ್ನ ಪಂಜಾಬ್ ಕನಸಿನ ಪಂಜಾಬ್ ಆಗಿದೆ. ಜನರು ಹಳೆಯ ಪಂಜಾಬ್ ಅನ್ನು ಮರಳಿ ಬಯಸುತ್ತಿದ್ದಾರೆ. ನಾವು ಮತ್ತೆ ಹಳೆಯ ಪಂಜಾಬ್ ಆಗಿ ಮಾಡುತ್ತೇವೆ. ಪಂಜಾಬ್ ಅನ್ನು ಪ್ಯಾರಿಸ್, ಲಂಡನ್ ಅಥವಾ ಕ್ಯಾಲಿಫೋರ್ನಿಯಾ ಆಗಿ ಪರಿವರ್ತಿಸುವ ಅಗತ್ಯವಿಲ್ಲ. ಆದರೆ ಇದು ಇತರ ಪಕ್ಷಗಳ ಕನಸಾಗಿದ್ದು, ಇದು ಸಾದ್ಯವಾಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶ ಅಂಚೆ ಮತ ಎಣಿಕೆ: ಆರಂಭದಲ್ಲಿ ಬಿಜೆಪಿ ಮುನ್ನಡೆ
ಕಾಂಗ್ರೆಸ್ ಏನನ್ನೂ ಬಿಟ್ಟಿಲ್ಲ. ಮರಳು ಮಾಫಿಯಾ, ಭೂ ಮಾಫಿಯಾ, ಕೇಬಲ್ ಮಾಫಿಯಾ, ಸಾರಿಗೆ ಮಾಫಿಯಾ, ಅಬಕಾರಿ ಮಾಫಿಯಾ ಹೀಗೆ ಪಂಜಾಬ್ ಹಲವಾರು ಮಾಫಿಯಾಗಳಿಂದ ತುಂಬಿದೆ. ಹಾಗಾಗಿ ನಾನು ಮುಖ್ಯಮಂತ್ರಿಯಾದರೆ ಮೊದಲು ಮಾಫಿಯಾ ಮುಕ್ತ ಪಂಜಾಬ್ ಆಗಿ ಮಾಡುತ್ತೇನೆ ಎಂದು ಹೇಳಿದ್ದಾರೆ.