ಉಡುಪಿ: ಕರಾವಳಿ ಆಗಸದಲ್ಲಿ ಸೋಮವಾರ ರಾತ್ರಿ ಕೌತುಕವೊಂದು ನಡೆದಿದೆ. ಸಾಲಿನಲ್ಲಿ ನಕ್ಷತ್ರಗಳು ಚಲಿಸಿದಂತೆ ಉಪಗ್ರಹಗಳು ಬಾನಿನಲ್ಲಿ ಗೋಚರಿಸಿದ್ದು ಉಡುಪಿ ಜನತೆಯನ್ನು ನಿಬ್ಬೆರಗಾಗಿಸಿದೆ.
Advertisement
ಅಮೇರಿಕಾದ ಕ್ಯಾಲಿಫೋರ್ನಿಯಾದಿಂದ ಉಪಗ್ರಹಗಳು ಇಂಟರ್‌ನೆಟ್ ಶನಿವಾರ ಲಾಂಚ್ ಮಾಡಲಾಗಿದೆ. ಈ ಉಪಗ್ರಹ ಬಾನಲ್ಲಿ ಸಾಲಾಗಿ ಪರಿಭ್ರಮಿಸುತ್ತದೆ. ಈ ದೃಶ್ಯ ಉಡುಪಿಯಲ್ಲಿ ಜನರ ಬರಿಗಣ್ಣಿಗೆ ಕಾಣಿಸಿದೆ. ಎಲೋನ್ ಮಸ್ಕ್ ಒಡೆತನದ ಸ್ಟಾರ್ ಲಿಂಕ್ ಕಂಪನಿಗೆ ಸೇರಿದ ಉಪಗ್ರಹಗಳು ಇವು. ಸ್ಟಾರ್ ಲಿಂಕ್ ಕಂಪನಿಯು ಈಗಾಗಲೇ ಸುಮಾರು 60 ಕ್ಕೂ ಮಿಕ್ಕಿ ಇಂತಹ ಉಪಗ್ರಹಗಳನ್ನು ನಭಕ್ಕೆ ಬಿಡುಗಡೆ ಮಾಡಿದೆ. ಈ ಪೈಕಿ 52 ಉಪಗ್ರಹ ಒಂದೇ ದಿನ ಉಡಾವಣೆ ಮಾಡಲಾಗಿದೆ. ಇದನ್ನೂ ಓದಿ: ಬೊಮ್ಮಾಯಿ 1 ತಿಂಗಳಲ್ಲಿ ತಮ್ಮ ಅಸ್ತಿತ್ವ ಕಳೆದುಕೊಳ್ಳಲಿದ್ದಾರೆ ನಮ್ಮ ಶಾಪ ತಟ್ಟದೇ ಇರಲ್ಲ: ಬಸವಪ್ರಕಾಶ ಸ್ವಾಮೀಜಿ
Advertisement
Advertisement
ಮುಂದಿನ ದಿನಗಳಲ್ಲಿ ಸುಮಾರು 1,800 ಇಂಟರ್‌ನೆಟ್ ಉಪಗ್ರಹಗಳನ್ನು ಆಗಸಕ್ಕೆ ಕಳುಹಿಸುವ ತಯಾರಿ ನಡೆಸಲಾಗುತ್ತಿದ್ದು, ಮುಂದೊಂದು ದಿನ ವಿಶ್ವಕ್ಕೆ ಉಚಿತ ಅಥವಾ ಬಹಳ ಕಡಿಮೆ ಮೊತ್ತಕ್ಕೆ ಇಂಟರ್‌ನೆಟ್ ಲಭ್ಯ ಆಗಲಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಇಂಟರ್‌ನೆಟ್ ಸುಲಭವಾಗಿ ಜನರ ಮೊಬೈಲ್ ಕಂಪ್ಯೂಟರ್‌ಗಳಿಗೆ ಕೊಡಿಸುವ ಉದ್ದೇಶ ಸಂಸ್ಥೆಗೆ ಇದೆ. ಇದನ್ನೂ ಓದಿ: ಇಸ್ರೋ ವಿಶ್ವದಾಖಲೆ ಮುರಿದ ಸ್ಪೇಸ್ ಎಕ್ಸ್ – ಕಡಿಮೆ ಬೆಲೆಯಲ್ಲಿ ಉಪಗ್ರಹ ಉಡಾವಣೆ
Advertisement