ಬೀದರ್: ಮದ್ಯ ಮಾರಾಟ ಬಂದ್ ಮಾಡುವಂತೆ ಶಾಸಕ ಶರಣು ಸಲಗರ್ ಮುಂದೆ ಮಹಿಳೆಯರು ಕಣ್ಣೀರು ಹಾಕಿದ ಘಟನೆ ಬಸವಕಲ್ಯಾಣ (Basava Kalyana) ತಾಲೂಕಿನ ನೀಲಕಂಠವಾಡಿ ಗ್ರಾಮದಲ್ಲಿ ನಡೆದಿದೆ.
ಶಾಸಕರು ಭೇಟಿ ನೀಡಿದ್ದ ವೇಳೆ, ಸ್ಥಳೀಯರು ಸಾರಾಯಿ ಕುಡಿದು ನಮ್ಮ ಗ್ರಾಮದ ಹಲವು ಜನರು ಸಾವನ್ನಪ್ಪಿದ್ದಾರೆ. ನಮ್ಮ ಊರಲ್ಲಿ 8 ಕಡೆ ಮದ್ಯ ಮಾರಾಟ ಮಾಡ್ತಿದ್ದು, ಇದನ್ನು ಬಂದ್ ಮಾಡಿಸಿ ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವದ ಅತಿ ದೊಡ್ಡ LNG ಘಟಕ ದುರಸ್ತಿಗೆ 5 ವರ್ಷ ಬೇಕು!
ಕಾಲೇಜು ಯುವಕರು ಸೇರಿದಂತೆ ನೀಲಕಂಠವಾಡಿ ಗ್ರಾಮದಲ್ಲಿ ಮದ್ಯ ಕುಡಿದು 22 ಜನ ಸಾವನಪ್ಪಿದ್ದಾರೆ. ಹೀಗಾಗಿ ನಿಮ್ಮ ಕಾಲು ಬೀಳ್ತಿವಿ ನಮ್ಮ ಊರಲ್ಲಿ ಸಾರಾಯಿ ಬಂದ್ ಮಾಡಿಸಿ ಎಂದಿದ್ದಾರೆ.
ಕಿರಾಣಿ ಅಂಗಡಿ ಸೇರಿದಂತೆ ಊರಲ್ಲಿ ಹೆಜ್ಜೆ ಹೆಜ್ಜೆಗೂ ಮದ್ಯ ಮಾರಾಟ ಮಾಡ್ತಿದ್ದು, ದೂರು ಕೊಟ್ಟರೆ ಪೊಲೀಸರು ಬರ್ತಾರೆ, ಸುಮ್ನೆ ನೋಡ್ಕೊಂಡ್ ಹೋಗ್ತಾರೆ ಅಷ್ಟೇ. ಊರಲ್ಲಿ ಸಾಕಷ್ಟು ಜನ ಮಹಿಳೆಯರು ವಿಧವೆಯರಾಗಿದ್ದು, ಹೇಗಾದರೂ ಮಾಡಿ ನೀಲಕಂಠವಾಡಿ ಗ್ರಾಮದ ಯುವಕರ ಭವಿಷ್ಯ ಕಾಪಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: KPSC ಅಕ್ರಮ ಆರೋಪ – ಪರೀಕ್ಷಾ ನಿಯಂತ್ರಕ ಎತ್ತಂಗಡಿ

