ನವದೆಹಲಿ: ಕೇಂದ್ರ ಸರ್ಕಾರ ಮಂಡಿಸಿದ್ದ ನಾರಿಶಕ್ತಿ ವಂದನ್ ಅಧಿನಿಯಮಕ್ಕೆ (Nari Shakti Vandan Adhiniyam) ಲೋಕಸಭೆ (Lok Sabaha) ಅನುಮೋದನೆ ನೀಡಿದೆ. ದಿನವಿಡಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದ ಬಳಿಕ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿ (33% women reservation) ನೀಡುವ ಮಸೂದೆ ಪರ 454 ಮಂದಿ ಪರ ಮತದಾನ ಮಾಡಿದರೆ ಇಬ್ಬರು ವಿರೋಧಿಸಿದರು.
ಅಸಾದುದ್ದೀನ್ ಒವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಇ-ಇಥೇಹಾದುಲ್ ಮುಸಲ್ಮಿನ್ (AIMIM) ಪಕ್ಷದ ಇಬ್ಬರು ಸಂಸದರು ವಿರೋಧ ವ್ಯಕ್ತಪಡಿಸಿದರು. 454 ಸಂಸದರು ಮಹಿಳಾ ಮೀಸಲಾತಿ ಪರ ಮತ ಚಲಾಯಿಸಿದ ಕಾರಣ ಈ ಐತಿಹಾಸಿಕ ಮಸೂದೆ ಲೋಕಸಭೆಯಲ್ಲಿ ಧ್ವನಿಮತದ ಮೂಲಕ ಸುಲಭವಾಗಿ ಅನುಮೋದನೆ ಸಿಕ್ಕಿತು.
Advertisement
ಬೆಳಗ್ಗೆ ಎಐಸಿಸಿ ನಾಯಕಿ ಸೋನಿಯಾ ಗಾಂಧಿ (Sonia Gandhi) ಚರ್ಚೆ ಶುರು ಮಾಡಿದರು. ಇದು ರಾಜೀವ್‌ಗಾಂಧಿ ಕನಸು. ಈಗ ನನಸಾಗುತ್ತಿದೆ ಎನ್ನುವ ಮೂಲಕ ಕ್ರೆಡಿಟ್ ತೆಗೆದುಕೊಳ್ಳಲು ನೋಡಿದರು. ಈ ವಿಧೇಯಕದಲ್ಲಿ ಒಬಿಸಿ ಮಹಿಳೆಯರಿಗೂ ಒಳಮೀಸಲಾತಿ ನೀಡಬೇಕು. ಅಲ್ಲದೇ ಈ ಮೀಸಲಾತಿಯನ್ನು ಜಾರಿಗೆ ತರಲು ತಕ್ಷಣ ಜಾತಿಗಣತಿ ನಡೆಸಬೇಕು ಎಂದು ಕೇಂದ್ರವನ್ನು ಸೋನಿಯಾ ಗಾಂಧಿ ಆಗ್ರಹಿಸಿದರು. ಇದನ್ನೂ ಓದಿ: ಸಂವಿಧಾನ ಪೀಠಿಕೆಯಲ್ಲಿ ಸಮಾಜವಾದಿ, ಜಾತ್ಯಾತೀತ ಪದಗಳೇ ಮಾಯ – ಕೇಂದ್ರ ಹಂಚಿದ ಪ್ರತಿಗಳು ಸೃಷ್ಟಿಸಿವೆ ಸಂಚಲನ
Advertisement
#BreakingNews | Lok Sabha passes Women’s Reservation Bill
Bill grants 33% seats to women in Lok Sabha and state legislative assemblies
454 MPs vote in favour of the bill, 2 MPs vote against it #WomenReservationBill #WomenReservationBill2023 pic.twitter.com/gmOp2VOGc0
— DD News (@DDNewslive) September 20, 2023
Advertisement
ಇದು ರಾಜೀವ್ ಕನಸು ಎಂಬ ಸೋನಿಯಾ ಮಾತಿಗೆ ಅಮಿತ್ ಶಾ ಸೇರಿ ಬಿಜೆಪಿಗರು ಆಕ್ಷೇಪಿಸಿದರು. ಒಬಿಸಿ ಕೋಟಾಗೆ ರಾಹುಲ್ ಗಾಂಧಿ ಕೂಡ ಪಟ್ಟು ಹಿಡಿದರು. ಮಸೂದೆಗೆ ನಮ್ಮ ಬೆಂಬಲವಿದೆ. ಆದರೆ ಓಬಿಸಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸದಿದ್ದರೆ ಈ ಬಿಲ್ ಅಪೂರ್ಣ ಎಂದು ವ್ಯಾಖ್ಯಾನಿಸಿದರು. ಕೇಂದ್ರ ಸರ್ಕಾರದ 90 ಕಾರ್ಯದರ್ಶಿಗಳಲ್ಲಿ ಮೂವರು ಮಾತ್ರ ಒಬಿಸಿಗಳಿದ್ದಾರೆ ಎಂಬುದನ್ನು ರಾಹುಲ್ ನೆನಪಿಸಿದ್ರು.
Advertisement
ಮಹಿಳಾ ಮೀಸಲಾತಿ ಜಾರಿಯನ್ನು ಡಿಲಿಮಿಟೇಷನ್ ಜೊತೆ ಏಕೆ ತಳಕು ಹಾಕ್ತಿದ್ದೀರಿ ಎಂದು ಡಿಎಂಕೆಯ ಕನಿಮೋಳಿ ಪ್ರಶ್ನಿಸಿದ್ರು. ಈ ವಿಧೇಯಕವನ್ನು ಜೆಡಿಯು ಬೆಂಬಲಿಸುತ್ತಲೇ, ಇದು ಸಾರ್ವತ್ರಿಕ ಚುನಾವಣೆ ಸಲುವಾಗಿ ಕೇಂದ್ರ ಮಾಡ್ತಿರುವ ಗಿಮಿಕ್ ಎಂದು ಟೀಕಿಸಿತು.
#WomenReservationBill | Lok Sabha passes the historic Women's Reservation Bill, which grants 33% of seats to women in both the Lok Sabha and state legislative assemblies.
– A total of 454 MPs voted in favor of the bill, while 2 MPs voted against it
– Union Law Minister… pic.twitter.com/NjKcZkoY2U
— DD News (@DDNewslive) September 20, 2023
ಮಹಿಳಾ ಮೀಸಲಾತಿಯಲ್ಲಿ ಒಬಿಸಿಗಳಿಗೆ ಕೋಟಾ ಇರಬೇಕು ಎಂದು ಎನ್‌ಸಿಪಿಯ ಸುಪ್ರಿಯಾ ಸುಳೆ ಒತ್ತಾಯಿಸಿದರು. ರಾಜ್ಯಸಭೆಗೂ ಈ ಮೀಸಲಾತಿ ಅನ್ವಯಿಸಬೇಕು ಎಂಬ ಬೇಡಿಕೆಯನ್ನು ಸಮಾಜವಾದಿ ಪಕ್ಷದ ಡಿಂಪಲ್ ಯಾದವ್ ಇಟ್ಟರು.
2024ರ ಚುನಾವಣೆಯಲ್ಲೇ ಮೀಸಲಾತಿ ಜಾರಿ ಮಾಡಿ ಮೋದಿ ತಾಕತ್ ತೋರಿಸಬೇಕು ಎಂದು ಟಿಎಂಸಿ ಮಹುವಾ ಮೋಯಿತ್ರಾ ಸವಾಲ್ ಹಾಕಿದರು. ಅಕಾಲಿದಳ ಇದನ್ನು ಜುಮ್ಲಾ ಎಂದು ಕರೆಯಿತು. ಇದು ಮುಸ್ಲಿಮ್ ಮಹಿಳಾ ವಿರೋಧಿ ಬಿಲ್ ಎಂದು ಓವೈಸಿ ವ್ಯಾಖ್ಯಾನಿಸಿದರು.
2029ಕ್ಕೆ ಮಹಿಳಾ ಮೀಸಲಾತಿ ಜಾರಿ ಆಗುತ್ತೆ ಅನ್ನೋದಾದ್ರೆ, ಇದಕ್ಕೆ ಇಷ್ಟು ತರಾತುರಿಯಲ್ಲಿ ವಿಶೇಷ ಅಧಿವೇಶನ ಏಕೆ ಕರೆಯಬೇಕಿತ್ತು ಎಂದು ಕೇಂದ್ರವನ್ನು ಆರ್‌ಎಸ್‌ಪಿಯ ಪ್ರೇಮಚಂದ್ರನ್ ತರಾಟೆಗೆ ತಗೊಂಡರು.
Web Stories