ಹುಬ್ಬಳ್ಳಿ: ಮೋದಿ (Narendra Modi) ಅವರ ಉದಾತ್ತ ಚಿಂತನೆಯಲ್ಲಿ ಮೂಡಿ ಬಂದ ಕಲ್ಪನೆ ಮಹಿಳಾ ಮೀಸಲಾತಿ (Women’s Reservation) ಇವತ್ತು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡೋ ದಿನ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಸಂತಸ ವ್ಯಕ್ತಪಡಿಸಿದ್ದಾರೆ.
ನಾರಿ ಶಕ್ತಿ ವಂದನ್ ಅಧಿನಿಯಮ ಅಂಗೀಕಾರದ ಬಳಿಕ ತಮ್ಮ ದೆಹಲಿ ಕಚೇರಿಯಿಂದ ಹೇಳಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿರುವ ಅವರು, ಜಗತ್ತಿನ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಹಿಳಾ ಮೀಸಲಾತಿ ಇಲ್ಲ. ಭಾರತದಲ್ಲಿ ಮೋದಿ ಅವರ ನಾಯಕತ್ವದಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಬಂದಿದೆ. 1980-90ರ ದಶಕದಿಂದ ಮಹಿಳಾ ಮೀಸಲಾತಿ ಕೂಗಿತ್ತು. ಹಲವು ಸರ್ಕಾರಗಳು ಬಂದು ಹೋದವು. ಅಟಲ್ ಬಿಹಾರಿ ವಾಜಪೇಯಿ ಬಹಳ ಪ್ರಯತ್ನ ಪಟ್ಟರು. ಸಂಪೂರ್ಣ ಬಹುಮತ ಇರದ ಕಾರಣ ಅವರ ಪ್ರಯತ್ನ ಆಗಲಿಲ್ಲ. ಮುಂದೆ ಬಂದ ಯುಪಿಎ ಸರ್ಕಾರ ಇದನ್ನು ವೋಟ್ ಬ್ಯಾಂಕ್ ರೀತಿ ನೋಡಿ, ಪ್ರಮಾಣಿಕ ಪ್ರಯತ್ನ ಮಾಡಲಿಲ್ಲ. ಇದನ್ನೂ ಓದಿ: ಬಿಜೆಪಿ ಮಹಿಳಾ ಕಾರ್ಯಕರ್ತೆಯರಿಂದ ಸನ್ಮಾನ- ತಲೆಬಾಗಿ ಕೈಮುಗಿದ ಪ್ರಧಾನಿ
ಆದರೆ ಮೋದಿ ಅವರ ಧೃಡ ನಿಶ್ಚಯ, ರಾಜಕೀಯ ಇಚ್ಛಾ ಶಕ್ತಿ ಕಾರಣದಿಂದ ಶಾಸನಸಭೆಯಲ್ಲಿ ಮಹಿಳಾ ಮೀಸಲಾತಿ ಅಂಗೀಕಾರ ಆಗಿದೆ. ಅತ್ಯಲ್ಪ ಎಂದರೆ 2 ವೋಟ್ ವಿರೋಧಿಂದ ಅಂಗೀಕಾರ ಆಗಿದೆ. ದೇಶದ ಎಲ್ಲ ಮಹಿಳೆಯರ ಪರವಾಗಿ ಮೋದಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಮಂಡ್ಯ ಬಂದ್‌ಗೆ ಕರೆ – ಪ್ರತಿಭಟನಾಕಾರರಿಗೆ ಎಚ್ಚರಿಕೆ ಕೊಟ್ಟ ಗೃಹಸಚಿವ ಜಿ.ಪರಮೇಶ್ವರ್
Web Stories