ನವದೆಹಲಿ: 16 ವರ್ಷದ ಬಾಲಕಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.
ದೆಹಲಿಯ ತಿಲಕ್ ನಗರ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯ ತಾಯಿಯು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ದೂರಿನಲ್ಲಿ, ಬಾಲಕಿ ಮೇಲೆ ಬಾಲಕನೊಬ್ಬ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಆದರೆ ಹಲ್ಲೆಗೂ ಮುನ್ನವೇ ನಾವು ಪೊಲೀಸರಿಗೆ ದೂರು ನೀಡಿದ್ದೆವು. ಆದರೆ ಪೊಲೀಸರು ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.
Advertisement
Advertisement
ಈ ದೂರಿನ ಆಧಾರದ ಮೇಲೆ ಡಿಸಿಡಬ್ಲ್ಯೂ ಅಧ್ಯಕ್ಷೆ ಸ್ವಾತಿ ಮಲಿವಾಲ್ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದು, ಎಫ್‍ಐಆರ್‍ನ ವಿವರಗಳು ಮತ್ತು ಬಂಧನದ ವಿವರಗಳನ್ನು ಕೇಳಿದ್ದಾರೆ. ಬಾಲಕಿ ಮತ್ತು ತಾಯಿ ಕೊಟ್ಟ ಹಿಂದಿನ ದೂರುಗಳ ಬಗ್ಗೆ ತೆಗೆದುಕೊಂಡ ಕ್ರಮಗಳ ವಿವರಗಳನ್ನೂ ಆಯೋಗ ಪ್ರಶ್ನಿಸಿದೆ. ಆಗ ಬಾಲಕಿಯ ತಾಯಿ, ಪೊಲೀಸರು ರಾಜಿ ಮಾಡಿಸಿ ಠಾಣೆಯಿಂದ ಕಳಿಸಿದ್ದರು. ಈ ಕುರಿತು ಯಾವುದೇ ರೀತಿಯ ವಿಚಾರಣೆ ನಡೆದಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಜಮ್ಮು, ಕಾಶ್ಮೀರದಲ್ಲಿ ಪೊಲೀಸ್ ನೇಮಕಾತಿ ವಂಚನೆ – 1,200 ಮೆರಿಟ್ ಪಟ್ಟಿ ರದ್ದು
Advertisement
ನಡೆದಿದ್ದೇನು?
ತಾಯಿಯ ದೂರಿನ ಪ್ರಕಾರ, ಬಾಲಕನೊಬ್ಬ ತನ್ನ ಮಗಳೊಂದಿಗೆ ಕೋಚಿಂಗ್ ಸೆಂಟರ್‌ನಲ್ಲಿ ಓದುತ್ತಿದ್ದನು. ಈ ವೇಳೆ ನನ್ನ ಮಗಳ ಫೋನ್ ನಂಬರ್ ತೆಗೆದುಕೊಂಡು ಹಲವು ಬಾರಿ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದನು.
Advertisement
ಈ ಹಿನ್ನೆಲೆ ಬಾಲಕನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ರಾಜಿ ಮಾಡಿಕೊಳ್ಳುವಂತೆ ಹೇಳಿದ್ದಾರೆ. ಆದರೆ ಜುಲೈ 7 ರಂದು ಬಾಲಕ ತನ್ನ ಮಗಳ ಮೇಲೆ ಚಾಕುವಿನಿಂದ ಬರ್ಬರವಾಗಿ ಇರಿದಿದ್ದಾನೆ. ಸದ್ಯ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.