ಶ್ರೀನಗರ: ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿರುವ ಹಿನ್ನೆಲೆ ಜಮ್ಮು ಮತ್ತು ಕಾಶ್ಮೀರದಲ್ಲಿ 1,200 ಪೊಲೀಸ್ ಅಧಿಕಾರಿಗಳ ನೇಮಕಾತಿಯನ್ನು ರದ್ದುಪಡಿಸಲಾಗಿದೆ.
2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಇದೇ ಮೊದಲಬಾರಿಗೆ ನೇಮಕಾತಿ ರದ್ದು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ವೀರ ಮದಕರಿ ನಾಯಕ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ – ಪ್ರೊಫೆಸರ್ ಕ್ಷಮೆಯಾಚನೆ
Advertisement
Advertisement
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ತನಿಖೆಗೆ ಆದೇಶ ನೀಡಿದ್ದು, ಆರ್.ಕೆ.ಗೋಯಲ್ ನೇತೃತ್ವದ ತನಿಖಾ ಸಮಿತಿಯು ವರದಿಯನ್ನು ಸಲ್ಲಿಸಿದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಭರವಸೆ ನೀಡಿದ್ದಾರೆ.
Advertisement
ಕಳೆದ ತಿಂಗಳು J&K ಸೇವೆಗಳ ಆಯ್ಕೆ ಮಂಡಳಿ (JKSSB) ಬಿಡುಗಡೆ ಮಾಡಿದ ಪೊಲೀಸ್ ಸಬ್-ಇನ್‍ಸ್ಪೆಕ್ಟರ್‌ಗಳ ಅರ್ಹತಾ ಪಟ್ಟಿಯ ದೊಡ್ಡ ಪ್ರಮಾಣದ ಭ್ರಷ್ಟಾಚಾರವನ್ನು ಸಮಿತಿಯು ಕಂಡುಹಿಡಿದಿದೆ. ಇದನ್ನೂ ಓದಿ: ಎರಡು ಸರ್ಕಾರಿ ಬಸ್‍ಗಳ ಮಧ್ಯೆ ಮುಖಾಮುಖಿ ಡಿಕ್ಕಿ – ಹತ್ತಕ್ಕೂ ಹೆಚ್ಚು ಜನರಿಗೆ ಗಾಯ
Advertisement
ರಾಜ್ಯಪಾಲ ಸಿನ್ಹಾ ಟ್ವೀಟ್ ಮಾಡಿದ್ದು, ಜೆಕೆಪಿ ಸಬ್-ಇನ್‍ಸ್ಪೆಕ್ಟರ್ ನೇಮಕಾತಿಯನ್ನು ರದ್ದುಗೊಳಿಸಲಾಗಿದೆ. ಆಯ್ಕೆ ಪ್ರಕ್ರಿಯೆಯನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಲಾಗಿದೆ. ಶೀಘ್ರದಲ್ಲೇ ತಪ್ಪಿತಸ್ಥರನ್ನು ನ್ಯಾಯಾಂಗದ ಮುಂದೆ ತಂದು ಒಪ್ಪಿಸಲಾಗುವುದು. ನಮ್ಮ ಯುವಕರ ಭವಿಷ್ಯವನ್ನು ಭದ್ರಪಡಿಸುವ ನಿಟ್ಟಿನಲ್ಲಿ ಮೊದಲ ದೊಡ್ಡ ಹೆಜ್ಜೆಯಾಗಿದೆ. ಸರ್ಕಾರವು ಭವಿಷ್ಯದ ಕೋರ್ಸ್ ಶೀಘ್ರದಲ್ಲೇ ನಿರ್ಧರಿಸುತ್ತದೆ. ಹೊಸ ನೇಮಕಾತಿ ಬಗ್ಗೆ ತನಿಖೆ ಮಾಡಲಾಗುತ್ತೆ ಎಂದು ಬರೆದುಕೊಂಡಿದ್ದಾರೆ.