ಟೋಕಿಯೊ: ಜಪಾನಿನ ಕಾಕಾಮಿಗಾರಾದಲ್ಲಿ ನಡೆದ ಮಹಿಳೆಯರ ಜೂನಿಯರ್ ಏಷ್ಯಾ ಕಪ್ ಹಾಕಿ (Womens Junior Asia Cup 2023 Hockey) ಟೂರ್ನಿಯ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ತಂಡವನ್ನ 2-1 ಗೋಲುಗಳ ಅಂತರದಲ್ಲಿ ಮಣಿಸುವ ಮೂಲಕ ಭಾರತ ತಂಡ (Indian Hockey Team) ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
Congratulations to our young champions on winning the 2023 Women’s Hockey Junior Asia Cup! The team has shown immense perseverance, talent and teamwork. They have made our nation very proud. Best wishes to them for their endeavours ahead. pic.twitter.com/lCkIDMTwWN
— Narendra Modi (@narendramodi) June 11, 2023
Advertisement
ಭಾರತ ತಂಡದ ಸಾಂಘಿಕ ಪ್ರದರ್ಶನದಿಂದ ಅನು (21) ಮತ್ತು ನೀಲಂ (40) ಅವರು ಭಾರತ ತಂಡದ ಪರ ಗೋಲುಗಳನ್ನು ದಾಖಲಿಸಿದರೆ, 4 ಬಾರಿಯ ಚಾಂಪಿಯನ್ ಆಗಿದ್ದ ದಕ್ಷಿಣ ಕೊರಿಯಾ (South Korea) ಪರ ಏಕೈಕ ಗೋಲನ್ನು ಸಿಯೊಯಾನ್ ಪಾರ್ಕ್ (24) ದಾಖಲಿಸಿದರು. ಇದಕ್ಕೂ ಮುನ್ನ ಶನಿವಾರ ಸೆಮಿಫೈನಲ್‌ನಲ್ಲಿ ಜಪಾನ್ ತಂಡವನ್ನು 1-0 ಯಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದ ಭಾರತ ತಂಡ ವರ್ಷಾಂತ್ಯಕ್ಕೆ ನಡೆಯುವ ಜೂನಿಯರ್ ಮಹಿಳಾ ವಿಶ್ವಕಪ್‌ಗೂ (Womens Hockey World Cup 2023) ಅರ್ಹತೆ ಪಡೆದುಕೊಂಡಿತು.
Advertisement
2012ರಲ್ಲಿ ಫೈನಲ್‌ಗೆ ತಲುಪಿದ್ದೇ ಭಾರತ ತಂಡದ ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. ಅಂದು ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ ಟೂರ್ನಿಯ ಫೈನಲ್ ಮ್ಯಾಚ್‌ನಲ್ಲಿ ಚೀನಾ ತಂಡದ ವಿರುದ್ಧ 2-5 ಗೋಲುಗಳಿಂದ ಸೋಲನುಭವಿಸಿತ್ತು. ಇದನ್ನೂ ಓದಿ: WTC: ಭಾರತಕ್ಕೆ ಹೀನಾಯ ಸೋಲು – 209 ರನ್‌ಗಳ ಭರ್ಜರಿ ಜಯ, ಆಸೀಸ್‌ಗೆ ಚೊಚ್ಚಲ ಟ್ರೋಫಿ
Advertisement
Advertisement
ಏಷ್ಯಾಕಪ್ ಫೈನಲ್ ಮ್ಯಾಚ್‌ನ 22ನೇ ನಿಮಿಷದಲ್ಲಿ ಅನು ಪೆನಾಲ್ಟಿ ಕಾರ್ನರ್‌ನಲ್ಲಿ ಭಾರತದ ಪರ ಮೊದಲ ಗೋಲು ದಾಖಲಿಸುವ ಮೂಲಕ ಆರಂಭಿಕ ಮುನ್ನಡೆ ತಂದುಕೊಟ್ಟರು. ಅದಾದ ಮೂರೇ ನಿಮಿಷದಕ್ಕೆ ಎದುರಾಳಿ ತಂಡದ ಸಿಯೊಯಾನ್ ಪಾರ್ಕ್ ಸಹ ಮೊದಲ ಗೋಲು ಸಿಡಿಸಿ ಸಮಬಲ ಸಾಧಿಸಿದ್ದರು. ವಿರಾಮದ ನಂತರ 41ನೇ ನಿಮಿಷಕ್ಕೆ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಬಿರುಸಿನ ಹೊಡೆತ ಬಾರಿಸಿದ ನೀಲಂ ಮತ್ತೊಂದು ಗೋಲ್ ಬಾರಿಸುವ ಮೂಲಕ ಭಾರತಕ್ಕೆ ಮತ್ತೊಮ್ಮೆ ಮುನ್ನಡೆ ತಂದುಕೊಟ್ಟರು. ಎದುರಾಳಿ ತಂಡದ ಆಟಗಾರರು ಮತ್ತೊಮ್ಮೆ ಗೋಲ್ ಬಾರಿಸಲು ಸಾಕಷ್ಟು ಪ್ರಯತ್ನ ನಡೆಸಿದರೂ ಅವರನ್ನು ನಿಯಂತ್ರಿಸುವಲ್ಲಿ ಭಾರತ ತಂಡ ಯಶಸ್ವಿಯಾಯಿತು. ಇದರಿಂದ ಭಾರತ 2-1 ಅಂತರದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಜಯ ಸಾಧಿಸಿತು. ಇದನ್ನೂ ಓದಿ: WTC Final: ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ರವೀಂದ್ರ ಜಡೇಜಾ
ಭಾರತದ ಕೀರ್ತಿಪತಾಕೆ ಹಾರಿಸಿದ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, 2023ರ ಮಹಿಳಾ ಹಾಕಿ ಜೂನಿಯರ್ ಏಷ್ಯಾ ಕಪ್ ಗೆದ್ದ ನಮ್ಮ ಯುವ ಚಾಂಪಿಯನ್‌ಗಳಿಗೆ ಅಭಿನಂದನೆಗಳು. ಭಾರತ ತಂಡವು ಅಪಾರ ಪರಿಶ್ರಮ, ಪ್ರತಿಭೆ ಹಾಗೂ ಸಾಂಘಿಕತೆಯನ್ನು ಪ್ರದರ್ಶಿಸಿದೆ. ಯುವ ಚಾಂಪಿಯನ್‌ಗಳು ನಮ್ಮ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು ಎಂದು ಅಭಿನಂದನೆ ಸಲ್ಲಿಸಿದ್ದಾರೆ.