ಕನ್ನಡದ ಕಿರುತೆರೆ ನಟಿ ದಿವ್ಯಾ ಶ್ರೀಧರ್ (Divya Sridhar) ಪ್ರಕರಣಕ್ಕೆ ಕರ್ನಾಟಕ ಮಹಿಳಾ ಆಯೋಗ ಪ್ರವೇಶ ಮಾಡಿದೆ. ಕರ್ನಾಟಕದ ನಟಿ ದಿವ್ಯಾ ಶ್ರೀಧರ್ ಗೆ ಸೂಕ್ತ ನ್ಯಾಯ ಒದಗಿಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು (Pramila Naidu) ಆಗ್ರಹಿಸಿದ್ದು, ಈ ಕುರಿತಂತೆ ತಮಿಳು ನಾಡು ಮಹಿಳಾ ಆಯೋಗದ ಜೊತೆ ದೂರವಾಣಿ ಮೂಲಕವೂ ಮಾತನಾಡಿದ್ದಾರೆ.
Advertisement
ತಮಿಳು ನಾಡು ಮಹಿಳಾ ಆಯೋಗದ ಜೊತೆ ದೂರವಾಣಿಯಲ್ಲಿ ಮಾತನಾಡುವುದರ ಜೊತೆಗೆ ಲಿಖಿತ ರೂಪದಲ್ಲೂ ಆಯೋಗಕ್ಕೆ ಪತ್ರ ಬರೆದು, ದಿವ್ಯಾಗೆ ಸೂಕ್ತ ರಕ್ಷಣೆ ಮತ್ತು ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರಂತೆ. ದಿವ್ಯಾ ಶ್ರೀಧರ್ ತನ್ನ ಗಂಡನಿಂದ ದೈಹಿಕ ಹಲ್ಲೆ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದರಿಂದ ಅವರಿಗೆ ರಕ್ಷಣೆ ನೀಡಬೇಕು. ಗರ್ಭಿಣಿ ಅನ್ನುವುದನ್ನೂ ನೋಡದೇ ಆಕೆಯ ಪತಿಯು ಹೊಟ್ಟೆಗೆ ಒದ್ದಿರುವ ಕುರಿತು ಗಂಭೀರ ಪ್ರಕರಣ ಎಂದು ಪರಿಗಣಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಅನ್ನಲಾಗುತ್ತಿದೆ. ಇದನ್ನೂ ಓದಿ:ಪವನ್ ಒಡೆಯರ್ ಬಾಲಿವುಡ್ ಚಿತ್ರಕ್ಕೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಪತ್ನಿ ನಾಯಕಿ
Advertisement
Advertisement
ಸ್ಯಾಂಡಲ್ ವುಡ್ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ದಿವ್ಯಾ ಶ್ರೀಧರ್, ಆನಂತರ ಕಿರುತೆರೆ ಜಗತ್ತಿಗೆ ಕಾಲಿಟ್ಟರು. ಸಿನಿಮಾ ರಂಗದಲ್ಲಿ ಅಷ್ಟೇನೂ ಮಿಂಚದೇ ಇದ್ದರೂ, ಆಕಾಶ ದೀಪ ಧಾರಾವಾಹಿ ಮೂಲಕ ಸಖತ್ ಫೇಮಸ್ ಆದರು. ಈ ಧಾರಾವಾಹಿಯ ಯಶಸ್ಸು ಅವರನ್ನು ತಮಿಳು ಕಿರುತೆರೆ ಜಗತ್ತಿಗೂ ಕಾಲಿಡುವಂತೆ ಮಾಡಿತು. ತಮಿಳು ಧಾರಾವಾಹಿಯಲ್ಲೂ ದಿವ್ಯಾ ಸಾಕಷ್ಟು ಹೆಸರು ಮಾಡಿದರು.
Advertisement
ತಮಿಳು ಧಾರಾವಾಹಿಯ ಸಂದರ್ಭದಲ್ಲೇ ನಟ ಅನರ್ವ್ (Anurv) ಅಲಿಯಾಸ್ ಅಮ್ಜದ್ ಖಾನ್ (Amjad Khan) ಜೊತೆ ಸ್ನೇಹ ಬೆಳೆದು, ಅದು ಪ್ರೀತಿಗೂ ತಿರುಗಿ ನಂತರ ಮದುವೆಯಾಗಿದ್ದಾರೆ. ದಿವ್ಯಾ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆಯೇ ಪತಿ ಅವರಿಂದ ದೂರವಾಗುವುದಕ್ಕೆ ಶುರು ಮಾಡಿದರು ಎಂದು ಆರೋಪಿಸಿದ್ದಾರೆ ದಿವ್ಯಾ. ಅಲ್ಲದೇ, ತಮಗೆ ಪತಿಯಿಂದ ದೈಹಿಕ ಹಿಂಸೆ ಸೇರಿದಂತೆ ಹಲವು ಆರೋಪಗಳನ್ನು ದಿವ್ಯಾ ಮಾಡಿದ್ದಾರೆ.