ಢಾಕಾ: ಮಹಿಳಾ ಏಷ್ಯಾಕಪ್ (Womens Asia Cup) ಸೆಮಿಫೈನಲ್‍ನಲ್ಲಿ ಥಾಯ್ಲೆಂಡ್ (Thailand) ವಿರುದ್ಧ 74 ರನ್‍ಗಳ ಭರ್ಜರಿ ಜಯದೊಂದಿಗೆ ಭಾರತ (India) ಫೈನಲ್‍ಗೆ ಲಗ್ಗೆ ಇಟ್ಟಿದೆ.
ಭಾರತ ನೀಡಿದ 149 ರನ್‍ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಥಾಯ್ಲೆಂಡ್ 20 ಓವರ್‌ಗಳಲ್ಲಿ ಕೇವಲ 74 ರನ್ ಸಿಡಿಸಲಷ್ಟೇ ಶಕ್ತವಾಯಿತು. ಇತ್ತ ಭಾರತ 74 ರನ್‍ಗಳ ಭರ್ಜರಿ ಜಯ ದಾಖಲಿಸಿತು. ಭಾರತದ ಪರ ಬ್ಯಾಟಿಂಗ್‍ನಲ್ಲಿ ಶಿಫಾಲಿ ವರ್ಮಾ (Shafali Verma) ಮಿಂಚಿದರೆ, ಬಳಿಕ ಬೌಲಿಂಗ್‍ನಲ್ಲಿ ದೀಪ್ತಿ ಶರ್ಮಾರ (Deepti Sharma) ಮ್ಯಾಜಿಕ್‍ನಿಂದಾಗಿ ಭಾರತ ಜಯಭೇರಿ ಬಾರಿಸಿದೆ. ಇದನ್ನೂ ಓದಿ: ಏನ್ ಫೀಲ್ಡಿಂಗ್ ಗುರು! – ಬೆನ್ ಸ್ಟೋಕ್ಸ್ ಫ್ಲೈಯಿಂಗ್ ಎಫರ್ಟ್
ಸಾಧಾರಣ ಮೊತ್ತವನ್ನು ಬೆನ್ನಟ್ಟಲು ಹೊರಟ ಥಾಯ್ಲೆಂಡ್ ಬ್ಯಾಟರ್‌ಗಳು ದೀಪ್ತಿ ಶರ್ಮಾರ ದಾಳಿಗೆ ಕಕ್ಕಾಬಿಕ್ಕಿಯಾದರು. ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿದ ಥಾಯ್ಲೆಂಡ್‌ಗೆ ಬ್ಯಾಟರ್‌ಗಳು ಸಾಥ್ ನೀಡಲು ಪರದಾಡಿದರು. ನರುಯೆಮೊಲ್ ಚೈವಾಯಿ 21 ರನ್ (41 ಎಸೆತ) ಮತ್ತು ನಟ್ಟಾಯ ಬೂಚಾತಂ 21 ರನ್ (29 ಎಸೆತ, 1 ಬೌಂಡರಿ) ಸಿಡಿಸಿದ್ದನ್ನು ಹೊರತು ಪಡಿಸಿ ಉಳಿದ 9 ಮಂದಿ ಬ್ಯಾಟರ್‌ಗಳು ಒಂದಂಕಿ ಮೊತ್ತ ದಾಟಲಿಲ್ಲ. ಭಾರತ ಪರ ದೀಪ್ತಿ ಶರ್ಮಾ 4 ಓವರ್ ಎಸೆದು 1 ಮೇಡನ್ ಸಹಿತ ಕೇವಲ 7 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದನ್ನೂ ಓದಿ: ಬುಮ್ರಾ ಬದಲು ಶಮಿ, ಚಹರ್ ಔಟ್ – ಆಸ್ಟ್ರೇಲಿಯಾಗೆ ಹಾರಲಿದ್ದಾರೆ ಶಾರ್ದೂಲ್, ಸಿರಾಜ್
ಈ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪರ ಶಿಫಾಲಿ ವರ್ಮಾ 42 ರನ್ (28 ಎಸೆತ, 5 ಬೌಂಡರಿ, 1 ಸಿಕ್ಸ್) ಚಚ್ಚಿ ಮಿಂಚಿದರು. ಇವರನ್ನು ಹೊರತು ಪಡಿಸಿ ಜೆಮಿಮಾ ರಾಡ್ರಿಗಸ್ 27 ರನ್ (26 ಎಸೆತ, 3 ಬೌಂಡರಿ) ಮತ್ತು ಹರ್ಮನ್‍ಪ್ರೀತ್ ಕೌರ್ 36 ರನ್ (30 ಎಸೆತ, 4 ಬೌಂಡರಿ) ನೆರವಿನಿಂದ ಭಾರತ ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 148 ರನ್ ಸವಾಲಿನ ಮೊತ್ತ ಪೇರಿಸಿತು.