ತಿರುವನಂತಪುರಂ: ಶಬರಿಮಲೆಗೆ ಬರುವ ಮಹಿಳೆಯರನ್ನು ಸೀಳಿ ಹಾಕಬೇಕು ಎಂದು ಮಲಯಾಳಂ ಚಿತ್ರ ನಟ ಕೊಲ್ಲಂ ತುಳಸಿ ವಿವಿದಾತ್ಮಕ ಹೇಳಿ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಶಬರಿಮಲೆಗೆ ಕಾಲಿಡುವ ಮಹಿಳೆಯನ್ನು ಎರಡು ಭಾಗ ಮಾಡಬೇಕು. ತುಂಡಾದ ಒಂದು ದೇಹವನ್ನು ದೆಹಲಿಗೆ, ಮತ್ತೊಂದನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಮನೆಗೆ ಕಳುಹಿಸಿಕೊಡಬೇಕು ಎಂದು ಹೇಳಿದ್ದಾರೆ.
Advertisement
Advertisement
ಮಹಿಳೆಯರಿಗೆ ಶಬರಿಮಲೆ ಪ್ರವೇಶ ಮಾಡಲು ಅವಕಾಶ ನೀಡಿದರೆ ದೇವಾಲಯದ ಪಾವಿತ್ರ್ಯ ಧಕ್ಕೆ ಬರುತ್ತದೆ. ಇದೇ ಕಾರಣಕ್ಕೆ ಹಿಂದಿನಿಂದಲೂ ಪ್ರವೇಶ ನಿಷೇಧಿಸಲಾಗಿತ್ತು. ಜನರ ನಂಬಿಕೆಯನ್ನು ಲೆಕ್ಕಿಸದೇ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಸುಪ್ರೀ ಕೋರ್ಟ್ ತೀರ್ಪು ಸಿಕ್ಕಿದೆ ಅಂತಾ ಮಹಿಳೆಯರು ದೇವಾಲಯಕ್ಕೆ ಬಂದರೆ ಕತ್ತರಿಸಿ ಹಾಕಲಾಗುತ್ತದೆ ಎಂದು ಕೊಲ್ಲಂ ತುಳಸಿ ಎಚ್ಚರಿಕೆ ನೀಡಿದ್ದಾರೆ.
Advertisement
`ಸುಪ್ರೀಂ’ ಹೇಳಿದ್ದೇನು?
ಶಬರಿಮಲೆ, ಮಹಿಳೆಯರ ಧಾರ್ಮಿಕ ಹಕ್ಕನ್ನು ಕಸಿದುಕೊಂಡಿದ್ದು, ಭಕ್ತಿಯನ್ನು ಲಿಂಗದ ಆಧಾರದಲ್ಲಿ ವಿವರಿಸಲು ಸಾಧ್ಯವಿಲ್ಲ. ಧಾರ್ಮಿಕ ಹಕ್ಕಿಗೂ- ದೈಹಿಕ ಸ್ಥಿತಿಗತಿಗೂ ಸಂಬಂಧವೇ ಇಲ್ಲ. ಅಯ್ಯಪ್ಪನ ಭಕ್ತರು ಅನ್ಯಧರ್ಮದವರಂತೆ ಪ್ರತ್ಯೇಕ ಸ್ಥಾನಮಾನ ಹೊಂದಿಲ್ಲ. ಒಂದೆಡೆ ಮಹಿಳೆಯರನ್ನು ದೇವರಂತೆ ಪೂಜಿಸುತ್ತೇವೆ. ಮತ್ತೊಂದೆಡೆ ನಿಷೇಧ ಹೇರಲಾಗಿದೆ. ಮಹಿಳೆ ದೇವರಿಗೆ ಸಮಾನವಾಗಿದ್ದು ಮಹಿಳೆಯರಿಗೆ ಶಬರಿಮಲೆಗೆ ಬಹಿಷ್ಕಾರ ಸರಿಯಲ್ಲ. ಮಹಿಳೆಯರ ಬಗೆಗಿನ ಇಬ್ಬಗೆ ನೀತಿಯಿಂದ ಆಕೆಯ ಸ್ಥಾನಮಾನಕ್ಕೆ ಧಕ್ಕೆಯಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv