ಇಸ್ಲಾಮಾಬಾದ್: ಪಾಕಿಸ್ತಾನದ ಫೆಡರಲ್ ಆಪ್ ಎಜುಕೇಶನ್(ಎಫ್‍ಡಿಇ) ಮಹಿಳಾ ಅಧ್ಯಾಪಕರು ಜೀನ್ಸ್ ಮತ್ತು ಬಿಗಿಯಾದ ಉಡುಪುಗಳನ್ನು ಧರಿಸದಂತೆ ಆದೇಶ ಹೊರಡಿಸಿದೆ. ಅಲ್ಲದೇ ಜೀನ್ಸ್ ಮತ್ತು ಟೀ ಶರ್ಟ್ ಧರಿಸುವ ಅಧ್ಯಾಪಕರನ್ನು ನಿಷೇಧಿಸಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಲಾ ಮತ್ತು ಕಾಲೇಜುಗಳ ಪ್ರಾಂಶುಪಾಲರಿಗೆ ಶೈಕ್ಷಣಿಕ ನಿರ್ದೇಶಕರು ಸೋಮವಾರ ಪತ್ರವನ್ನು ಕಳುಹಿಸಿದ್ದು, ಪ್ರತಿ ಸಿಬ್ಬಂದಿಯ ದೈಹಿಕ ನೋಟ, ವೈಯಕ್ತಿಕ ಸ್ವಚ್ಛತೆಯನ್ನು ಸರಿಯಾದ ರೀತಿಯಲ್ಲಿ ಪಾಲಿಸುವಂತೆ ತಿಳಿಸಲಾಗಿದ್ದು, ಅಲ್ಲದೇ ಕ್ಷೌರ, ಗಡ್ಡವನ್ನು ಕತ್ತರಿಸುವುದು, ಉಗುರು ಕತ್ತರಿಸಿರುವುದು, ಸ್ನಾನ ಮತ್ತು ಸುಗಂಧ ದ್ರವ್ಯದ ಬಳಕೆ ಮುಂತಾದವುಗಳ ಬಗ್ಗೆ ಪತ್ರದಲ್ಲಿ ವಿವರಿಸಲಾಗಿದೆ. ಇದನ್ನೂ ಓದಿ: ಹೆರಿಗೆ ಬಳಿಕ ಕ್ಯಾಮೆರಾ ಮುಂದೆ ನುಸ್ರತ್ ಜಹಾನ್ – ಮಗುವಿನ ತಂದೆ ಬಗ್ಗೆ ಹೇಳಿದ್ದೇನು?
ಈ ಎಲ್ಲಾ ನಿಯಮಗಳನ್ನು ಪಾಕಿಸ್ತಾನದ ಶಿಕ್ಷಕರು ಕಚೇರಿ ಸಮಯದಲ್ಲಿ, ಕ್ಯಾಂಪಸ್, ಗ್ರೌಂಡ್ ಮತ್ತು ಮೀಟಿಂಗ್‍ಗಳಲ್ಲಿ ಅನುಸರಿಸಬೇಕು. ಜೊತೆಗೆ ಎಲ್ಲಾ ಅಧ್ಯಾಪಕರು ತರಗತಿಯಲ್ಲಿ ಪಾಠ ಮಾಡುವ ವೇಳೆ ಗೌವ್ನ್ ಮತ್ತು ಪ್ರಯೋಗಾಲದಲ್ಲಿ ಲ್ಯಾಬ್ ಕೋಟ್‍ಗಳನ್ನು ಧರಿಸುವಂತೆ ಸೂಚಿಸಲಾಗಿದೆ. ಇದಲ್ಲದೇ ಗೇಟ್ ಕಿಪರ್ ಹಾಗೂ ಸಹಾಯಕ ಸಿಬ್ಬಂದಿ ಸಮವಸ್ತ್ರಗಳನ್ನು ಧರಿಸುವಂತೆ ತಿಳಿಸಲಾಗಿದೆ. ಇದನ್ನೂ ಓದಿ: ಹಬ್ಬಕ್ಕೆ ವಂಡರ್ ಲಾದಿಂದ ಬಂಪರ್ ಆಫರ್- ಗಣೇಶ ಹೆಸರಿರೋ 100 ಮಂದಿಗೆ ಉಚಿತ ಪಾಸ್