ಕೋಲಾರ: ಅವರಿಬ್ಬರು ಸ್ನೇಹಿತರು ಆದ್ರೂ ಅವರಿಬ್ಬರಿಗೆ ಬೇರೆಯವರೊಂದಿಗೆ ಮದುವೆಯಾಗಿ ವಿಚ್ಚೇದನ ವಿವಾದ ಇನ್ನೂ ಕೋರ್ಟ್ನಲ್ಲಿ ನಡೆಯುತ್ತಿತ್ತು. ಹೀಗಿರುವಾಗ ಆ ಇಬ್ಬರು ಸ್ನೇಹಿತರು ಕದ್ದುಮುಚ್ಚಿ ಸೇರ್ತಾ ಇದ್ರು. ಆದರೆ ಅಲ್ಲೇನಾಗಿದೆ ಗೊತ್ತಾಗಿಲ್ಲ, ಕೊಲೆಯಂತೆ ಅನುಮಾನ ಹುಟ್ಟಿಸುವ ಅಪಘಾತವೊಂದು ನಡೆದು ಆಕೆ ಸಾವನ್ನಪ್ಪಿದ್ದಾಳೆ.
ಕುತ್ತಿಗೆ ಭಾಗದಲ್ಲಿ ಗಾಯವಾಗಿ ಮೃತಪಟ್ಟ ಮಹಿಳೆ ಕೋಲಾರ ನಗರದ ಮಹಾಲಕ್ಷ್ಮೀ ಬಡಾವಣೆಯ ತಸ್ಮಿಯಾ ಬಾನು. ಇದನ್ನೂ ಓದಿ: ಊಟ ಬೇಕಂದ್ರೆ ಕೇಳಿ ಹಾಕಿಸ್ಕೋತಿನಿ ಬಿಡು ಗುರು – ನಟ ಕೋಮಲ್ ಶೈಲಿ ಕಾಪಿ ಹೊಡೆದ್ರಾ ಶಿಖರ್ ಧವನ್?
Advertisement
Advertisement
ಹೌದು ನಿನ್ನೆ ತಸ್ಮಿಯಾ ಹಾಗೂ ಆಕೆ ಸ್ನೇಹಿತ ಮುಜ್ಜು ಅಂತರಗಂಗೆ ಬೆಟ್ಟಕ್ಕೆ ಬಂದಿದ್ದರು. ಸುಂದರ ವಾತಾವರಣದಲ್ಲಿ ಕೆಲ ಹೊತ್ತು ಕಾಲ ಕಳೆದ ನಂತರ ಇಬ್ಬರು ವಾಪಸ್ಸಾಗುವ ವೇಳೆ ಅಲ್ಲಿ ನಡೆಯಬಾರದೊಂದು ಘಟನೆ ನಡೆದು ಹೋಗಿತ್ತು. ಮುಜ್ಜು ಜೊತೆಗೆ ಹೋಗಿದ್ದ ತಸ್ಮಿಯಾಬಾನು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾಳೆ. ಇಬ್ಬರೂ ಅಂತಗಂಗೆ ಬೆಟ್ಟಕ್ಕೆ ಇನ್ನೋವಾ ಕಾರ್‌ನಲ್ಲಿ ಹೋಗಿ ವಾಪಸ್ ಬರುವಾಗ ಯಾರಾದರೂ ನೋಡಿದ್ರೆ ಅಂತ ತಸ್ಮಿಯಾಬಾನು ಕಾರ್‌ನ ಹಿಂಬದಿ ಸೀಟ್‌ನಲ್ಲಿ ಮಲಗಿದ್ದಳಂತೆ.
Advertisement
Advertisement
ಈ ವೇಳೆ ಮುಜ್ಜು ಕಾರ್ ಚಲಾಯಿಸುತ್ತಿದ್ದ ಆಗ ಅಂತರಗಂಗೆ ರಸ್ತೆಯ ಕೀಲುಕೋಟೆ ತಿರುವಿನಲ್ಲಿ ರೋಡ್ ಹಂಪ್ ಇದ್ದ ಕಾರಣಕ್ಕೆ ಸಡನ್ ಆಗಿ ಬ್ರೇಕ್ ಹೊಡೆದಿದ್ದಾನೆ. ಆಗ ಹಿಂದೆ ಸೀಟ್‌ನಲ್ಲಿ ಮಲಗಿದ್ದ ತಸ್ಮಿಯಾಬಾನು ಒಂದೆ ಬಾರಿ ಮುಂದೆ ಬಿದ್ದಿದಾಳೆ ಅದೇ ಹೊತ್ತಿಗೆ ಮದ್ಯದ ಪೋಲ್ಡಿಂಗ್ ಸೀಟ್ ಮುಂದಕ್ಕೆ ಹೋಗಿ ಹಿಂದಕ್ಕೆ ಬಂದು ಸೀಟ್ ಕೆಳಗಿದ್ದ ಹರಿತವಾದ ಮೊಳೆ ಅವಳ ಕುತ್ತಿಗೆ ಭಾಗಕ್ಕೆ ಚುಚ್ಚಿದೆ. ಇದರಿಂದ ಉಸಿರಾಟದ ಸಮಸ್ಯೆಯಾಗಿದೆ ತಕ್ಷಣ ಅದೇ ಕಾರ್‌ನಲ್ಲಿ ಕೋಲಾರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಸೂಕ್ತ ಚಿಕಿತ್ಸೆ ಸಿಗದಿದ್ದರಿಂದ ಹೆಚ್ಚುವರಿ ಚಿಕಿತ್ಸೆಗಾಗಿ ಆರ್.ಎಲ್.ಜಾಲಪ್ಪ ವೈದ್ಯಕೀಯ ಕಾಲೇಜಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ತಸ್ಮಿಯಾಬಾನು ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಒಂದು ಹುಡುಗಿ ನಿಮ್ಮೊಂದಿಗೆ ಸೆಕ್ಸ್ ಮಾಡಬೇಕು ಅಂದ್ರೆ..? – ಶಕ್ತಿಮಾನ್ ಖ್ಯಾತಿಯ ಮುಖೇಶ್ ವಿವಾದಾತ್ಮಕ ಹೇಳಿಕೆ
ತಸ್ಮಿಯಾಬಾನುಗೆ ಮದುವೆಯಾಗಿದ್ದು ಒಂದು ಮಗು ಕೂಡಾ ಇದೆ. ಈ ನಡುವೆ ತಸ್ಮಿಯಾಬಾನು ಗಂಡನೊಂದಿಗೆ ವಿರಸ ಉಂಟಾಗಿ ವಿಚ್ಚೇದನ ಪ್ರಕರಣ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ತಸ್ಮಿಯಾಗೆ ಕೋಲಾರ ತಾಲ್ಲೂಕು ಮಹಾಲಕ್ಷ್ಮೀ ಬಡಾವಣೆಯಲ್ಲೇ ವಾಸವಿದ್ದ ಮುಜ್ಜು ಎಂಬುವನ ಜೊತೆಗೆ ಸ್ನೇಹ, ಅಕ್ರಮ ಸಂಬಂಧ ಕೂಡಾ ಇತ್ತು ಎನ್ನಲಾಗುತ್ತಿದೆ. ಆಗಾಗ ಇಬ್ಬರು ಕೆಲವೊಂದು ಸ್ಥಳಗಳಿಗೆ ಹೋಗಿ ಬರ್ತಾ ಇದ್ದರು ಎಂದು ಹೇಳಲಾಗಿದೆ.
ನಿನ್ನೆಯೂ ಹೀಗೆ ಅಂತರಗಂಗೆ ಬೆಟ್ಟಕ್ಕೆ ಹೋಗಿ ಬರುವಾಗ ಅಚಾನಕ್ಕಾಗಿ ನಡೆದ ಘಟನೆಯಿಂದ ಕುತ್ತಿಗೆ ಬಳಿ ಹರಿತವಾದ ಕಂಬಿ ತಗುಲಿ ಸಾವನ್ನಪ್ಪಿದ್ದಾಳೆ ಎಂದು ಮುಜ್ಜು ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ. ಆದರೆ ತಸ್ಮಿಯಾ ಬಾನು ಸಂಬಂಧಿಕರು ಇದು ಅಪಘಾತವಲ್ಲ ಇದು ಕೊಲೆ ಎಂದು ಹೇಳುತ್ತಿದ್ದಾರೆ. ಅಪಘಾತವಾದರೆ ಕಾರ್‌ಗೆ ಏನೂ ಆಗಿಲ್ಲ ಕಾರ್ ಚಲಾಯಿಸುತ್ತಿದ್ದ ಮುಜ್ಜುಗೂ ಏನೂ ಆಗಿಲ್ಲ ಆದರೆ ಈಕೆಗೆ ಮಾತ್ರ ಸಾಯುವಷ್ಟು ಗಾಯವಾಗಿದೆ. ಘಟನೆಯಾದ ನಂತರ ಆಸ್ಪತ್ರೆಗೆ ದಾಖಲು ಮಾಡಿ ಆರೋಪಿ ಮುಜ್ಜು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಎಂದು ಕೋಲಾರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಮುಜ್ಜುವನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರಿದಿದೆ.