ನವದೆಹಲಿ: ಮಹಾಭಾರತ ಸೀರಿಯಲ್‌ನಲ್ಲಿ ಭೀಷ್ಮನ ಪಾತ್ರ ನಿರ್ವಹಿಸಿದ್ದ ಶಕ್ತಿಮಾನ್ ಖ್ಯಾತಿಯ ನಟ ಮುಖೇಶ್ ಖನ್ನಾ ಇದೀಗ ಹೆಣ್ಣುಮಕ್ಕಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ಭಾರೀ ಟೀಕೆಗೆ ಗುರಿಯಾಗಿದ್ದಾರೆ.
`ಕ್ಯಾ ಆಪ್ಕೋ ಭಿ ಐಸಿ ಲಡ್ಕಿಯಾ ಲುಭಾತಿ ಹೈ’ ಶೀರ್ಷಿಕೆಯ ವೀಡಿಯೋವೊಂದರಲ್ಲಿ ಮಹಿಳೆಯರ ಖಾಸಗಿ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಈ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎಲ್ಲೆಡೆ ಆಕ್ಷೇಪ ವ್ಯಕ್ತವಾಗಿದೆ. ಇದನ್ನೂ ಓದಿ: ಗಂಡ ತೀರಿಕೊಂಡ ಬಳಿಕ ಮತ್ತೊಬ್ಬನ ಸಂಗ, ಅಕ್ರಮ ಸಂಬಂಧ ವಿರೋಧಿಸಿದಕ್ಕೆ ಮಗನನ್ನೇ ಕೊಂದ ತಾಯಿ
Advertisement
“जो औरतें करवा चौथ रखती है वो अनपढ़ हैं “ ये उदगार हैं कुछ ज़्यादा ही पढ़ी लिखी स्टार पत्नी की।जिसने एक मुस्लिम फ़िल्म स्टार से शादी कर के भी अपना हिन्दू सरनेम बरकरार रखा।रत्ना शाह के बदले रत्ना पाठक शाह रखा। क़ाबिले तारीफ़! पर पाठक धर्म भूल गई !https://t.co/OqLGYT2O0h pic.twitter.com/VQIdCD09ZM
— Mukesh Khanna (@actmukeshkhanna) August 9, 2022
Advertisement
ವೀಡಿಯೋದಲ್ಲಿ ಶಕ್ತಿಮಾನ್ ಮುಖೇಶ್ ಹೇಳಿದ್ದೇನು?
ಯಾರಾದರೂ ಹುಡುಗಿ ನಾನು ನಿಮ್ಮೊಂದಿಗೆ ಸೆಕ್ಸ್ ಮಾಡಲು ಬಯಸುತ್ತೇನೆ ಎಂದು ಆಮಿಷ ಒಡ್ಡಿದರೆ, ಆ ಹುಡುಗಿ ಲೈಂಗಿಕ ಕಾರ್ಯಕರ್ತೆಗೆ ಸಮ. ಏಕೆಂದರೆ ಸುಸಂಸ್ಕೃತ ಸಮಾಜಕ್ಕೆ ಸೇರಿದ ಹುಡುಗಿ ಎಂದಿಗೂ ಅಂತಹ ವಿಷಯಗಳನ್ನು ಮಾತನಾಡುವುದಿಲ್ಲ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್‍ಗೆ ಕರ್ನಾಟಕದ ಸಿಎಂಗಳೆಂದರೆ ಕೈ ಗೊಂಬೆ ಇದ್ದಹಾಗೆ ಆಡಿಸಿಯೂ ನೋಡ್ತಾರೆ, ಬೀಳಿಸಿಯೂ ನೋಡ್ತಾರೆ: ಕಾಂಗ್ರೆಸ್
Advertisement
Advertisement
1997ರಿಂದ 2005ರ ವರೆಗೆ ಪ್ರಸಾರವಾದ ಶಕ್ತಿಮಾನ್ ಧಾರಾವಾಹಿಯಲ್ಲಿ ಸೂಪರ್ ಹೀರೋ ಆಗಿ ಕಾಣಿಸಿಕೊಂಡಿದ್ದ ಶಕ್ತಿಮಾನ್ ಖ್ಯಾತಿಯ ಮುಖೇಶ್ ಕನ್ನಾ ಇಂದು ಭಾರೀ ಟೀಕೆಗಳಿಗೆ ಒಳಗಾಗಿದ್ದಾರೆ. ಹಿಂದಿ ಚಿತ್ರರಂಗದ ಅನೇಕ ದಿಗ್ಗಜರೂ ಈ ಹೇಳಿಕೆ ವಿರುದ್ಧ ಸಿಡಿದೆದ್ದಿದ್ದಾರೆ. `ಲಿಪ್‌ಸ್ಟಿಕ್ ಅಂಡರ್ ಮೈ ಬುರ್ಕಾ’ಚಿತ್ರದ ರತ್ನ ಪಾಠಕ್ ಶಾ ಸಹ ಮುಖೇಶ್ ವಿರುದ್ಧ ಕಿಡಿ ಕಾರಿದ್ದಾರೆ.