ಯಾದಗಿರಿ: ಶಹಾಪೂರದ ಗ್ಯಾಂಗ್ ರೇಪ್ ಪ್ರಕರಣ ಇನ್ನೂ ಹಸಿ ಇರುವಾಗಲೇ ಯಾದಗಿರಿ ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಅತ್ಯಾಚಾರಕ್ಕೆ ನಿರಾಕರಿಸಿದ ಗೃಹಿಣಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಾರಣ, ಅರೆಬರೆ ಬೆಂದ ಸ್ಥಿತಿಯಲ್ಲಿ ಗೃಹಿಣಿ ನರಳಾಡುವಂತಾಗಿದೆ.
Advertisement
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚೌಡೇಶ್ವರಹಾಳ ಗ್ರಾಮದಲ್ಲಿ, ಇಡೀ ರಾಜ್ಯವೇ ತಲೆ ತಗ್ಗಿಸುವ ಕೃತ್ಯ ನಡೆದಿದೆ. ಗ್ರಾಮದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಅದೇ ಗ್ರಾಮದ ಗಂಗಪ್ಪ ಎನ್ನುವ ಯುವಕ ಯತ್ನಿಸಿದ್ದಾನೆ. ಟ್ರಾಕ್ಟರ್ ಚಾಲಕನಾಗಿರುವ ಗಂಗಪ್ಪ, ನಿನ್ನೆ ತಡರಾತ್ರಿ ಮಹಿಳೆ ಮನೆಗೆ ನುಗ್ಗಿ, ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಕ್ಕೆ ಮಹಿಳೆ ವಿರೋಧಿಸಿದ್ದಾರೆ. ಈ ಹಿನ್ನೆಲೆ ಕೋಪಗೊಂಡ ಗಂಗಪ್ಪ, ತನ್ನ ಬೈಕ್ ನಲ್ಲಿದ್ದ ಪೆಟ್ರೋಲ್ ತೆಗೆದುಕೊಂಡು ಬಂದು ಮಹಿಳೆ ಮೇಲೆ ಹಾಕಿ, ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಸುರಕ್ಷಿತ, ಸುಂದರ, ಹಸಿರುಮಯ ಬೆಂಗಳೂರು ನಗರ ಮಾಡುವುದು ನಮ್ಮ ಗುರಿ: ಸಿಎಂ
Advertisement
Advertisement
ಬೆಂಕಿಯಲ್ಲಿ ಅರೆಬೆಂದ ಮಹಿಳೆ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾರೆ. ಈಗಾಗಲೇ ಮಹಿಳೆಗೆ ಮದುವೆಯಾಗಿದ್ದು, ಕಳೆದ ಒಂದು ವರ್ಷದಿಂದ ಪ್ರೀತಿ ಪ್ರೇಮವೆಂದು ಗಂಗಪ್ಪ ಪೀಡಿಸುತ್ತಿದ್ದನು. ಈ ಹಿಂದೆ ಗಂಗಪ್ಪನಿಗೆ ಮಹಿಳೆ ಗಂಡನ ಮನೆಯವರು ಬುದ್ಧಿವಾದ ಹೇಳಿದ್ದರೂ, ಗಂಗಪ್ಪ ತನ್ನ ಚಾಳಿ ಮುಂದುವರಿಸಿದ್ದಾನೆ. ಇದನ್ನೂ ಓದಿ: ಹಳ್ಳದ ಕಂಟಕ – ಶಾಲೆಯನ್ನೇ ತೊರೆದ ವಿದ್ಯಾರ್ಥಿಗಳು!
Advertisement
ಸುರಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.