ಚಿಕ್ಕಮಗಳೂರು: ಕನ್ನಡ ರಾಜ್ಯೋತ್ಸವ (Kannada Rajyotsava) ಕಾರ್ಯಕ್ರಮದ ಬಳಿಕ ಮಹಿಳಾ ಸಬ್‍ಇನ್ಸ್‌ಪೆಕ್ಟರ್ ಒಬ್ಬರು, ಆಕಸ್ಮಿಕ ಸಿನಿಮಾದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ.
Advertisement
ಹೌದು, ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು ಪಟ್ಟಣದಲ್ಲಿ ಸಬ್‍ಇನ್ಸ್‌ಪೆಕ್ಟರ್ ರಮ್ಯಾ ಅವರು ಜನಸಾಮಾನ್ಯರ ಜೊತೆ ಹಾಡಿಗೆ ನೃತ್ಯ ಮಾಡಿದ್ದಾರೆ. 67ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕಡೂರು ಆಟದ ಮೈದಾನದಲ್ಲಿ ತಾಲೂಕು ಆಡಳಿತದಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಬಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮ ಮುಗಿದ ಬಳಿಕ ಕನ್ನಡಾಭಿಮಾನಿಗಳು ಕನ್ನಡ ಹಾಡಿಗೆ ಕುಣಿಯುತ್ತಿದ್ದರು. ಇದೇ ವೇಳೆ, ಬಂದೋಬಸ್ತ್ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪಿಎಸ್‍ಐ. ರಮ್ಯಾ ಕೂಡ ಜನಸಾಮಾನ್ಯರ ಜೊತೆ ಸೇರಿ ಕುಣಿದು ಕುಪ್ಪಳಿಸಿದ್ದಾರೆ. ಇದನ್ನೂ ಓದಿ: ಅಪ್ಪುಗೆ ‘ಕರ್ನಾಟಕ ರತ್ನ’ ಪ್ರದಾನ: ಅತಿಥಿಯಾಗಿ ಬೆಂಗಳೂರಿಗೆ ಬಂದ ಜ್ಯೂನಿಯರ್ ಎನ್.ಟಿ.ಆರ್
Advertisement
Advertisement
ಕನ್ನಡದ ಅಭಿಮಾನಿಗಳು ಮೈಕಿನಲ್ಲಿ ತಾವೇ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡು ಹಾಡುತ್ತಿದ್ದರೆ, ಶಾಲಾ ಮಕ್ಕಳು ಸೇರಿದಂತೆ ಪುರುಷರು-ಮಹಿಳೆಯರು ನೃತ್ಯಮಾಡಿದ್ದಾರೆ. ಮಹಿಳೆಯೊಬ್ಬರು ಪಿಎಸ್‍ಐ ಕೈ ಹಿಡಿದು ನೃತ್ಯ ಮಾಡುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಪಿಎಸ್‍ಐ ರಮ್ಯಾ ಕೂಡ ಎಲ್ಲರ ಜೊತೆ ಸೇರಿ ಕನ್ನಡ ನೆಲದ ಸಾಂಸ್ಕೃತಿಯನ್ನು ಸಾರುವ ಹಾಡಿಗೆ ಎಲ್ಲರ ಜೊತೆಗೂಡಿ ಕುಣಿದು ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಅಪ್ಪುಗೆ ಕರ್ನಾಟಕ ರತ್ನ : ಅಧಿಕೃತ ಆಹ್ವಾನವಿಲ್ಲ, ಹೋಗಲ್ಲ ಎಂದ ಸಿದ್ಧರಾಮಯ್ಯ