ತಿರುವನಂತಪುರಂ: ಮಹಿಳೆಯೊಬ್ಬಳು ಆನ್‍ಲೈನ್‍ನಲ್ಲಿ ಕೇವಲ 299 ರೂಪಾಯಿ ಬೆಲೆಯ ಚೂಡಿದಾರ್ ಕೊಳ್ಳಲು ಹೋಗಿ ಒಂದು ಲಕ್ಷ ರೂಪಾಯಿ ಹಣವನ್ನು ಕಳೆದುಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾಳೆ.
Advertisement
ಮಹಿಳೆಯೊಬ್ಬಳು ಫೇಸ್‍ಬುಕ್ ನಲ್ಲಿ ಚೂಡಿದಾರ್ ಬಗ್ಗೆ ಜಾಹೀರಾತು ನೋಡಿದ್ದಾರೆ. ಡ್ರೆಸ್ ಇಷ್ಟವಾಗಿ ಆ ಲಿಂಕ್ ಓಪೆನ್ ಮಾಡಿದ್ದರು, ಬೆಲೆ ಕೇವಲ 299 ರೂಪಾಯಿ ಇದ್ದಿದ್ದರಿಂದ ಅದನ್ನು ಖರೀದಿ ಮಾಡಲು ಮುಂದಾಗಿದ್ದಳು. ಆರ್ಡರ್ ಮಾಡಿ ಗೂಗಲ್ ಪೇ ಮೂಲಕ ಪೇಮೆಂಟ್ ಕೂಡ ಮಾಡಿದ್ದಾರೆ.
Advertisement
Advertisement
ತನಗಿಷ್ಟವಾದ ಬಣ್ಣದ ಚೂಡಿದಾರ್ ಬುಕ್ ಮಾಡಿ ಯಾವಾಗ ಆರ್ಡರ್ ಡೆಲಿವರಿ ಆಗುತ್ತದೆ ಎಂದು ಕಾದು ಕೂತಿದ್ದಳು. ಎರಡು ದಿನ ಕಳೆದ ಬಳಿಕವೂ ಆ ಡೆಲಿವರಿ ಬಗ್ಗೆ ಯಾವುದೇ ಮಾಹಿತಿ ಬಂದಿರಲಿಲ್ಲ. ಬಟ್ಟೆ ಬುಕ್ ಮಾಡಿದ್ದ ಖುಷಿಯಲ್ಲಿ ಮಹಿಳೆ ತನ್ನ ಮೊಬೈಲ್‍ಗೆ ಬಂದ ಸಂದೇಶವನ್ನು ನೋಡಲು ಮರೆತಿದ್ದಾರೆ. ಮೂರು ದಿನದಲ್ಲಿ ಚೂಡಿದಾರ್ ಡೆಲಿವರಿ ಆಗುತ್ತೆ ಅಂತ ಅಲ್ಲಿ ತೋರಿಸಲಾಗಿತ್ತು. ಮೂರು ದಿನಗಳ ಬಳಿಕ ಜಾಹೀರಾತಿನಲ್ಲಿದ್ದ ನಂಬರ್‍ಗೆ ಮಹಿಳೆ ಮೆಸೇಜ್ ಮಾಡಿದ್ದಾರೆ. ಇದನ್ನೂ ಓದಿ ದೇಶ ವಿಭಜನೆಗೆ ಅಂದಿನ ಕಾಂಗ್ರೆಸ್ ನಾಯಕರೇ ಕಾರಣ: ಓವೈಸಿ
Advertisement
ಯಾರು ಫೋನ್ ತಗಯದ ಕಾರಣ ಸುಮ್ಮನಾಗಿದ್ದಾರೆ. ಬಳಿಕ ಈಕೆಯ ಫೋನ್‍ಗೆ 5 ಮೆಸೇಜ್ ಬಂದಿದೆ. ಅದನ್ನು ಓಪನ್ ಮಾಡಿ ನೋಡಿದಾಗ ಒಟ್ಟು ಒಂದು ಲಕ್ಷ ಹಣ ಬ್ಯಾಂಕ್ ಅಕೌಂಟ್‍ನಿಂದ ಕಾಣೆಯಾಗಿತ್ತು. ಕೂಡಲೇ ಮತ್ತೆ ಜಾಹೀರಾತಿನಲ್ಲಿದ್ದ ನಂಬರ್‍ಗೆ ಕರೆ ಮಾಡಿದರೆ, ಸ್ವಿಚ್ಡ್ ಆಫ್ ಆಗಿರುವುದು ತಿಳಿದಿದೆ. ಅದೇ ನಂಬರ್‍ಗೆ ಈಕೆಯ ಬ್ಯಾಂಕ್ ಅಕೌಂಟ್‍ನಿಂದ ಒಂದು ಲಕ್ಷ ಹಣ ವರ್ಗಾವಣೆಯಾಗಿತ್ತು. ಮಹಿಳೆ ಕೂಡಲೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.