ಮುಂಬೈ: ಶ್ರದ್ಧಾ ವಾಕರ್ (Shraddha Walkar) ಅವರಂತಹ ವಿದ್ಯಾವಂತ ಮತ್ತು ಪ್ರಗತಿಪರ ಹೆಣ್ಣುಮಕ್ಕಳು ಸಂಬಂಧಗಳನ್ನು ಬೆಳೆಸುವ ಬಗ್ಗೆ ಜಾಗರೂಕರಾಗಿರಬೇಕು ಎಂದು ಶಿವಸೇನಾ (Shiv Sena) ಸಂಸದ ಸಂಜಯ್ ರಾವತ್ (Sanjay Raut) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್, ಅಫ್ತಾಬ್ (Aftab) ಜೊತೆ ಸಂಬಂಧ ಹೊಂದಲು ತನ್ನ ತಂದೆ ಪದೇ ಪದೇ ಆಕ್ಷೇಪಿಸಿದರೂ, ಅವಳು ಅವರ ಮಾತನ್ನು ಕೇಳಲು ನಿರಾಕರಿಸಿದಳು. ಶ್ರದ್ಧಾರಂತಹ ಹೆಣ್ಣುಮಕ್ಕಳು ಒಳ್ಳೆ ಹುಡುಗರನ್ನ ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಫ್ತಾಬ್‌ಗೆ ಮಂಪರು ಪರೀಕ್ಷೆ – ಪೊಲೀಸರಿಗೆ ಕೋರ್ಟ್ ಅನುಮತಿ
Advertisement
Advertisement
ಆರೋಪಿ ಅಫ್ತಾಬ್ ಕುರಿತು ಮಾತನಾಡಿ, ಅವನಿಗೆ ಕರುಣೆ ಇಲ್ಲ. ಸಾರ್ವಜನಿಕವಾಗಿ ಅವನನ್ನು ಗಲ್ಲಿಗೇರಿಸಬೇಕು. ಸಾಕ್ಷ್ಯಗಳು ನಮ್ಮ ಮುಂದೆ ಇವೆ, ಕಾಯುವ ಅಗತ್ಯವಿಲ್ಲ. ಕೆಲವು ವಿಷಯಗಳಲ್ಲಿ ನಾವು ಕಾನೂನನ್ನು ಕೈಗೆ ತೆಗೆದುಕೊಳ್ಳಬೇಕು ಎಂದಿದ್ದಾರೆ.
Advertisement
Advertisement
ಮುಂಬೈ ಮೂಲದ 27 ವರ್ಷದ ಶ್ರದ್ಧಾ ವಾಲ್ಕರ್ ಅವರನ್ನು ಈ ವರ್ಷದ ಮೇ ತಿಂಗಳಲ್ಲಿ ದೆಹಲಿಯಲ್ಲಿ ಆಕೆಯ ಪ್ರಿಯಕರ ಅಫ್ತಾಬ್ ಪೂನಾವಾಲಾ ಕೊಲೆ ಮಾಡಿದ್ದ. ಆಕೆಯ ಕತ್ತು ಹಿಸುಕಿ ಕೊಂದ ನಂತರ, ಅಫ್ತಾಬ್ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯ ವಿವಿಧ ಸ್ಥಳಗಳಲ್ಲಿ ಎಸೆದಿದ್ದ. ಕತ್ತರಿಸಿದ ದೇಹದ ಭಾಗಗಳನ್ನು ಶೇಖರಿಸಿಡಲು ರೆಫ್ರಿಜರೇಟರ್ ಕೂಡ ಬಳಿಸಿದ್ದ. ಇಂತಹ ಭೀಕರ ಪ್ರಕರಣವನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ಇದನ್ನೂ ಓದಿ: ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಸಿಬಿಐಗೆ ವರ್ಗಾವಣೆ ಸಾಧ್ಯತೆ