ಶ್ರೀನಗರ: ಕಾಶ್ಮೀರದ ಯುವತಿಯರು ಧಾರ್ಮಿಕ ಕಟ್ಟಳೆಗಳನ್ನು ಮೀರಿ ಬುರ್ಕಾ ಹಿಜಬ್ ಧರಿಸಿ ಕ್ರಿಕೆಟ್ ಆಡುವ ಮೂಲಕ ದೇಶವ್ಯಾಪಿ ಸುದ್ದಿಯಾಗಿದ್ದಾರೆ.
ಹೌದು. ಜಮ್ಮು ಕಾಶ್ಮೀರದ ಬರಮುಲ್ಲಾ ಜಿಲ್ಲೆಯ ಮುಸ್ಲಿಮ್ ಮಹಿಳೆಯರು ಓದುತ್ತಿರುವ ಸರ್ಕಾರಿ ಕಾಲೇಜಿನಲ್ಲಿ ಬುರ್ಕಾ ಕ್ರಿಕೆಟ್ ಟ್ರೆಂಡ್ ಹುಟ್ಟಿಕೊಂಡಿದೆ. ಬರಮುಲ್ಲಾ ಜಿಲ್ಲಾಡಳಿತ ಮಹಿಳೆಯರಿಗೆ ಕ್ರಿಕೆಟ್ ಆಡಲು ಅವಕಾಶ ನೀಡಿದ್ದು, ಪುರುಷರಷ್ಟೇ ಸಮಾನ ಹಕ್ಕು ನಮಗೂ ಇದೆ. ನಮ್ಮಿಷ್ಟದಂತೆ ಬದುಕುವ ಅವಕಾಶವಿದೆ ಎಂಬ ರೀತಿಯಲ್ಲಿ ಸಾರ್ವಜನಿಕವಾಗಿ ಆಟ ವಾಡುತ್ತಿದ್ದಾರೆ.
ಪ್ರಥಮ ಪದವಿ ಓದುತ್ತಿರುವ ರಬ್ಯಾ ಕೂಡ ಕ್ರಿಕೆಟ್ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ. ತಮ್ಮ ಇಸ್ಲಾಮಿಕ್ ಧರ್ಮದ ಪಾಠ ಹೇಳಿಕೊಡುವ ಮದರಸಾದಲ್ಲಿ ಶಿಕ್ಷಕರು ಇವಕ್ಕೆಲ್ಲ ಅವಕಾಶ ನೀಡುತ್ತಿರಲಿಲ್ಲ. ಆತ್ಮ ವಿಶ್ವಾಸದಿಂದ ಹಿಜಬ್ ಹಾಗೂ ಬುರ್ಖಾ ಧರಿಸಿ ಮೈದಾನಕ್ಕಿಳಿಯಲು ಪ್ರಾರಂಭಿಸಿದೆ. ನಾನು ಬ್ಯಾಟ್ ಹಿಡಿದು ಫಿಲ್ಡ್ ಗೆ ಇಳಿದರೆ ನನ್ನ ತಂದೆಗೆ ದೂರು ನೀಡುತ್ತಿದ್ದರು. ಆದರೆ ತಂದೆ ಬಷೀರ್ ಅಹ್ಮದ್ ಮಿರ್ ನನ್ನ ಕನಸನ್ನು ಬೆಂಬಲಿಸಿದರು ಎಂದು ಹೇಳಿದ್ದಾರೆ.
ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿನಿ ಇನ್ಶಾ ಹೇಳುವಂತೆ, ನಾನು ಯಾವುದೇ ಭಯವಿಲ್ಲದೇ ಸ್ವತಂತ್ರ ಜೀವನ ನಡೆಸಬೇಕು ಎನ್ನುತ್ತಿರುವ ಯುವತಿ. ಈ ವರ್ಷ ಅಂತರ್ ವಿಶ್ವವಿದ್ಯಾಲಯ ಕ್ರಿಕೆಟ್ ಚಾಂಪಿಯನ್ ಶಿಪ್ ಜಯಗಳಿಸಿದ್ದೆವು. ಇನ್ನು ಇನ್ಶಾಳ ಪ್ರತಿಭೆಯಿಂದ ನಮಗೆ ಸಂತಸವಾಗುತ್ತಿದೆ. ಅವಳು ಈ ಕ್ಷೇತ್ರದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಎಂದು ಬಯಸಿದ್ದೇವೆ. ಆದರೆ ನಮ್ಮ ಕಾಲೇಜಿನಲ್ಲಿ ಮೂಲ ಸೌಕರ್ಯಗಳು ಇಲ್ಲದ ಕಾರಣ ಕ್ರೀಡಾಪಟುಗಳು ಸೊರಗುತ್ತಿದ್ದಾರೆ ಎಂದು ಉರ್ದು ಉಪನ್ಯಾಸಕ ರೆಹಮತ್ ಉಲ್ಹಾ ಮಿರ್ ಹೇಳಿದರು.
ಇನ್ನು ಪ್ರತ್ಯೇಕ ತರಬೇತಿ ಕೇಂದ್ರದ ಬಗ್ಗೆ ಅನಿಸಿಕೆ ಹಂಚಿಕೊಂಡ ಇನ್ಶಾ, ಯುವತಿಯರಿಗೆ ಕ್ರಿಕೆಟ್ ತರಬೇತಿ ಕೇಂದ್ರವನ್ನು ತೆರೆಯಬೇಕು. ನಾವು ಕ್ರೀಡೆಯಲ್ಲಿ ಏನಾದರೂ ಸಾಧನೆ ಮಾಡಲು ತರಬೇತಿಯ ಜೊತೆಗೆ ಉತ್ತಮ ವ್ಯಾಯಾಮ ಶಾಲೆಯ ಅಗತ್ಯವಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಹಾಗೂ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿಕೊಂಡಿದ್ದೇವೆ. ಆದರೆ ಯಾವುದೇ ಪ್ರಯೋಜವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.