CrimeDistrictsKarnatakaLatestMain PostShivamogga

ಸಾಲ ವಾಪಸ್ ಕೇಳಿದ್ದಕ್ಕೆ ಅನೈತಿಕ ಸಂಬಂಧದ ಅಪಪ್ರಚಾರ – ಮನನೊಂದು ಮಕ್ಕಳೊಂದಿಗೆ ನಾಲೆಗೆ ಹಾರಿದ ತಾಯಿ

ಶಿವಮೊಗ್ಗ: ಅಪಪ್ರಚಾರದ ಕಾರಣಕ್ಕೆ ಮನನೊಂದು ಡೆತ್‌ನೋಟ್ ಬರೆದಿಟ್ಟು ಮಕ್ಕಳೊಂದಿಗೆ ತಾಯಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಯಡೇಹಳ್ಳಿಯಲ್ಲಿ ನಡೆದಿದೆ.

ವೀಣಾ(32), ವರ್ಷ(7), ಹಾಗೂ 1 ವರ್ಷದ ಹೆಣ್ಣು ಮಗು ಮೃತ ದುರ್ದೈವಿಗಳು. ಸಂತೋಷ್ ಎಂಬ ವ್ಯಕ್ತಿಗೆ ವೀಣಾ 8 ಲಕ್ಷ ರೂ. ಸಾಲ ನೀಡಿದ್ದರು. ಸಾಲದ ಹಣವನ್ನು ವೀಣಾ ಸಂತೋಷ್‌ನಿಂದ ವಾಪಾಸ್ ಕೇಳಿದಾಗ ಆತ ವೀಣಾ ವಿರುದ್ಧ ಅನೈತಿಕ ಸಂಬಂಧದ ಬಗ್ಗೆ ಅಪಪ್ರಚಾರ ಮಾಡಿದ್ದಾನೆ. ಇದನ್ನೂ ಓದಿ: ಹಾರೆಯಿಂದ ಹೊಡೆದು ಪತ್ನಿಯ ಕೊಲೆ – ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

BRIBE

ಇದರಿಂದ ಮನನೊಂದ ವೀಣಾ ತನ್ನ ಇಬ್ಬರು ಮಕ್ಕಳೊಂದಿಗೆ ಶುಕ್ರವಾರ ಸಿದ್ಧಾಪುರ ಬಳಿಯ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶನಿವಾರ ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಬಳಿ ವೀಣಾ ಮೃತದೇಹ ಪತ್ತೆಯಾಗಿದೆ. ಚನ್ನಗಿರಿ ತಾಲೂಕಿನ ನಲ್ಲೂರು ಬಳಿ 7 ವರ್ಷದ ಮಗುವಿನ ಮೃತದೇಹವೂ ದೊರಕಿದೆ. 1 ವರ್ಷದ ಮಗುವಿನ ಮೃತದೇಹಕ್ಕೆ ಶೋಧಕಾರ್ಯ ಮುಂದುವರಿದಿದೆ. ಇದನ್ನೂ ಓದಿ: ಜಪ್ತಿ ಮಾಡುವ ನೆಪದಲ್ಲಿ ಚಿನ್ನಾಭರಣ, ನಗದು ರಾಬರಿ ಮಾಡಿದ್ದ ನಕಲಿ ಪೊಲೀಸ್ ಗ್ಯಾಂಗ್ ಅಂದರ್

POLICE JEEP

ಘಟನೆಯ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸಂತೋಷ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Leave a Reply

Your email address will not be published.

Back to top button