ಬೆಂಗಳೂರು: ನಾವು ಪೊಲೀಸರು ಎಂದು ಹೇಳಿ ಮನೆಯಲ್ಲಿದ್ದ ನಗದು, ಚಿನ್ನ ದೋಚಿ ಎಸ್ಕೇಪ್ ಆಗಿದ್ದ ಗ್ಯಾಂಗ್ ಅನ್ನು ನಗರದ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಮಯನಾಯ್ಕ್ ಅವರ ಮನೆಗೆ ಪೊಲೀಸರ ನೆಪದಲ್ಲಿ ನುಗ್ಗಿದ್ದ ಗ್ಯಾಂಗ್, ನಾವು ತಿಪಟೂರು ಪೊಲೀಸರು ನಿಮ್ಮ ಮನೆ ಸರ್ಚ್ ಮಾಡಬೇಕು ಎಂದು ಹೇಳಿ, ನಂತರ ಮನೆಯವರಿಗೆ ಗನ್ ಹಾಗೂ ಚಾಕು ತೋರಿಸಿ ಸುಮ್ಮನೆ ಕೂರುವಂತೆ ವಾರ್ನ್ ಮಾಡಿದರು. ಅಲ್ಲದೇ ಫೋನ್‍ಗಳನ್ನು ಕಿತ್ತುಕೊಂಡು ಎರಡು ಗಂಟೆಗಳ ಕಾಲ ಮನೆಯನ್ನು ಸರ್ಚ್ ಮಾಡಿದ್ದಾರೆ. ಇದನ್ನೂ ಓದಿ: ಪೊಲೀಸರನ್ನು ನೋಡಿ ಮಾಸ್ಕ್ ಹಾಕಬೇಡಿ – ಬೈಕ್ ಸವಾರನಿಗೆ ಮನವಿ ಮಾಡಿದ ಪೇದೆ
Advertisement
Advertisement
ಮನೆಯಲ್ಲಿದ್ದ 19 ಲಕ್ಷ ನಗದು, 500 ಗ್ರಾಂ ಚಿನ್ನಾಭರಣ ಪೊಲೀಸರಂತೆ ಜಪ್ತಿ ಮಾಡಿ, ನಂತರ ಸಮಯನಾಯ್ಕ್ ಅವರ ಪುತ್ರ ಮಂಜುನಾಥ್ ಅವರನ್ನು ಠಾಣೆಗೆ ಕರೆದೊಯ್ಯುವುದಾಗಿ ಕಾರಿನಲ್ಲಿ ಕೂರಿಸಿಕೊಂಡು, ಮಹಾಲಕ್ಷ್ಮಿ ಲೇಔಟ್, BEL ಸರ್ಕಲ್, ಎಂ.ಎಸ್.ಪಾಳ್ಯ ಸುತ್ತಾಡಿಸಿದ್ದಾರೆ. ಈ ವೇಳೆ 20 ಲಕ್ಷ ಹಣ ಕೊಟ್ಟರೆ ಜಪ್ತಿ ಮಾಡಿದ ಕ್ಯಾಶ್ ಒಡವೆ ಕೊಟ್ಟು ಬಿಟ್ಟು ಬಿಡುತ್ತೇವೆ ಕೇಸ್ ಹಾಕಲ್ಲ ಎಂದು ತಿಳಿಸಿದ್ದರು. ಆದರೆ ಹಣ ಕೊಡಲು ನಿರಾಕರಿಸಿದ್ದಕ್ಕೆ ಜಪ್ತಿ ಮಾಡುವ ನೆಪದಲ್ಲಿ 500 ಗ್ರಾಂ ಚಿನ್ನಾಭರಣ, 19 ಲಕ್ಷ ನಗದು ಕೊಂಡೊಯ್ದಿದ್ದಾರೆ.
Advertisement
Advertisement
ಠಾಣೆಗೆ ಕರೆದಾಗ ಬರಬೇಕು, ಜಪ್ತಿ ಮಾಡಿದ ಹಣ ಒಡವೆ ಸ್ಟೇಷನ್‍ಗೆ ಬಂದು ಬಿಡಿಸಿಕೊಳ್ಳಿ ಎಂದಿದ್ದರು. ಪೊಲೀಸ್ ಠಾಣೆಗೆ ತೆರಳಿ ವಿಚಾರಿಸಿದಾಗ ನಕಲಿ ಪೊಲೀಸರು ರಾಬರಿ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: 50 ಕೋಟಿ ರೂ. ಜಾಗತಿಕ ಕ್ರೆಡಿಟ್ ಕಾರ್ಡ್ ಹಗರಣ ಭೇದಿಸಿದ ಪೊಲೀಸರು – 7 ಜನ ಅರೆಸ್ಟ್