ಬೆಂಗಳೂರು: ಅನೈತಿಕ ಸಂಬಂಧಕ್ಕೆ ಮಹಿಳೆ ಬಲಿಯಾದ ಘಟನೆ ನಗರದ ವಿದ್ಯಾರಣ್ಯಪುರ ಬಳಿಯ ದೊಡ್ಡಬೊಮ್ಮಸಂದ್ರದಲ್ಲಿ ನಡೆದಿದೆ.
ಪ್ರಿಯಾಂಕಾ (24) ಕೊಲೆಯಾದ ಮಹಿಳೆ ಆಗಿದ್ದು, ಜಗದೀಶ್ ಕೊಲೆ ಮಾಡಿ ಆರೋಪಿ. ಪ್ರಿಯಾಂಕಾ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಪತಿಯಿಂದ ದೂರವಾಗಿದ್ದಳು. ಗಂಡನಿಲ್ಲದ ಪ್ರಿಯಾಂಕಾ, ಜಗದೀಶ್ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು.
ಸೋಮವಾರ ಯಾವುದೋ ವಿಚಾರವಾಗಿ ಪ್ರಿಯಾಂಕಾ ಹಾಗೂ ಜಗದೀಶ್ ನಡುವೆ ಜಗಳವಾಗಿತ್ತು. ಈ ವೇಳೆ ಆರೋಪಿ ಜಗದೀಶ್, ಪ್ರಿಯಾಂಕಾ ಮೇಲೆ ಹಲ್ಲೆ ಮಾಡಿದ್ದನು. ಹಲ್ಲೆಯಿಂದ ಪ್ರಿಯಾಂಕಾ ಅಸ್ವಸ್ಥಳಾಗಿ ಕುಸಿದು ಬಿದಿದ್ದಳು.
ಬಳಿಕ ಬುಧವಾರ ಅಸ್ವಸ್ಥಗೊಂಡ ಪ್ರಿಯಾಂಕಾಳನ್ನು ಕೆ.ಸಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ವೈದ್ಯರು ಪರೀಕ್ಷೆ ನಡೆಸಿ ಪ್ರಿಯಾಂಕಾ ಮೃತಪಟ್ಟಿದ್ದಾಳೆ ಎಂದು ತಿಳಿಸಿದರು.
ಈ ಬಗ್ಗೆ ವಿದ್ಯಾರಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಜಗದೀಶ್‍ನನ್ನು ಬಂಧಿಸಿದ್ದಾರೆ.