ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಪದೇ ಪದೇ ಸಿಡಿ ಕೇಸ್ ಸೇರಿದಂತೆ ಹಲವು ಬ್ಲ್ಯಾಕ್ಮೇಲ್ ಕೇಸ್ ಸದ್ದು ಮಾಡುತ್ತಿದೆ. ಈ ನಡುವೆ ಇದೀಗ ಮತ್ತೊಂದು ಬ್ಲ್ಯಾಕ್ಮೇಲ್ ಕೇಸ್ ವರದಿಯಾಗಿದೆ.
Advertisement
ಕರ್ನಾಟಕ ಬಿಜೆಪಿ ಶಾಸಕರೊಬ್ಬರಿಗೆ ಮಹಿಳೆ ಬ್ಲ್ಯಾಕ್ಮೇಲ್ ಮಾಡಿದ ಆರೋಪ ಕೇಳಿಬಂದಿದೆ. ಉತ್ತರ ಕರ್ನಾಟಕ ಮೂಲದ ಶಾಸಕರಿಗೆ ಮಹಿಳೆಯೊಬ್ಬರು ಬ್ಲ್ಯಾಕ್ಮೇಲ್ ಮಾಡಿದ್ದು ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಕುತೂಹಲ ಮೂಡಿಸಿದ ರಾಜ್ಯ ಸಚಿವ ಸಂಪುಟ ಸರ್ಕಸ್ – ಸೋಮವಾರ ಬೊಮ್ಮಾಯಿ ನಡಿಗೆ ವರಿಷ್ಠರೆಡೆಗೆ
Advertisement
Advertisement
ಶಾಸಕರ ದೂರಿನ ಮೇರೆಗೆ ಇದೀಗ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರು ಪೊಲೀಸರು ತಮಿಳುನಾಡಿನಲ್ಲಿ ಆರೋಪಿಗಳನ್ನ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತರುತ್ತಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಪಂಚಭೂತಗಳಲ್ಲಿ ಸಂಗೀತ ಸಾಮ್ರಾಜ್ಞೆ ಲತಾ ಮಂಗೇಶ್ಕರ್ ಲೀನ
Advertisement