– ಸ್ಥಳೀಯ ಸಂಸ್ಥೆ ಚುನಾವಣೆ ಗೆಲುವಿನ ಬಳಿಕ ಹೇಳಿಕೆ
ತಿರುವನಂತಪುರಂ: ಮಲಪ್ಪುರಂನಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದ ಹಿನ್ನೆಲೆ ಕೇರಳದ ಸಿಪಿಐ(ಎಂ) ನಾಯಕ (Kerala CPM Leader) ಮಾಡಿದ ಭಾಷಣ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಭಾಷಣದ ವೇಳೆ ಸ್ತ್ರೀದ್ವೇಷಿ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನ ಖಂಡಿಸಿ ರಾಜ್ಯಾದ್ಯಂತ ಮಹಿಳೆಯರು, ಇತರ ನಾಯಕರು ಆಕ್ರೋಶ ಹೊರಹಾಕಿದ್ದಾರೆ.
ಮಲ್ಲಪುರಂನಲ್ಲಿ ವಿಜಯೋತ್ಸವದ ಭಾಷಣ ಮಾಡಿದ ಸಿಪಿಐ(ಎಂ) ಸಯೀದ್ ಅಲಿ ಮಜೀದ್ (Saed Ali Majeed), ಮದುವೆಯಾಗಿ ಕುಟುಂಬಕ್ಕೆ ಬರುವ ಮಹಿಳೆಯರನ್ನ ಮತಕ್ಕಾಗಿ ಅಪರಿಚಿತರ ಮುಂದೆ ತಂದು ನಿಲ್ಲಿಸಬಾರದು. ಮುಸ್ಲಿಂ ಲೀಗ್‌ನ ಪುರುಷರು ಈ ವಾರ್ಡ್ ಮೇಲೆ ಹಿಡಿತ ಸಾಧಿಸಲು ತಮ್ಮ ವಿವಾಹಿತ ಮಹಿಳೆಯರನ್ನ (Women’s) ಇತರರಿಗೆ ಪ್ರದರ್ಶಿಸಬಾರದಿತ್ತು. ನಾವು ಕೂಡ ವಿವಾಹಿತರು, ನಮಗೂ ಹೆಣ್ಣು ಮಕ್ಕಳಿದ್ದಾರೆ. ಆದ್ರೆ ಮಹಿಳೆಯರು ಇರೋದು ತಮ್ಮ ಗಂಡನ ಜೊತೆ ಮಲಗೋಕೆ ಮತ್ತು ಮಕ್ಕಳು ಮಾಡೋಕೆ ಅಂತ ಹೇಳಿದ್ರು. ಇದನ್ನೂ ಓದಿ: ನೈಟ್‌ಕ್ಲಬ್ ಮಾಲೀಕ ಲೂಥ್ರಾ ಸಹೋದರರು ನಾಳೆ ದೆಹಲಿಗೆ – ವಶಕ್ಕೆ ಪಡೆಯಲು ಗೋವಾ ಪೊಲೀಸರು ಸಿದ್ಧ
ಮುಂದುವರಿದು ಮುಸ್ಲಿಂ ಲೀಗ್ ಮಹಿಳಾ ಕಾರ್ಯಕರ್ತರ ಮೇಲೆ ಸಿಪಿಐ(ಎಂ) ನಡೆಸುತ್ತಿರುವ ದಾಳಿ ಕುರಿತಾದ ಟೀಕೆಗಳಿಗೆ ಪ್ರತಿಕ್ರಿಯಿಸಿ, ನೀವು ರಾಜಕೀಯ ಪ್ರವೇಶಿಸುತ್ತಿದ್ದರೆ ಅಥವಾ ಪ್ರವೇಶಿಸಲು ಬಯಸಿದ್ರೆ, ಟೀಕೆಗಳನ್ನ ಎದುರಿಸಲು ಸಿದ್ಧರಾಗಿ, ಇಲ್ಲದಿದ್ದರೆ, ಗೃಹಿಣಿಯಾಗಿ ಮನೆಯಲ್ಲಿರಿ ಎಂದರು.
ಈ ಹೇಳಿಕೆ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸಾರ್ವಜನಿಕ ಜೀವನದಲ್ಲಿರಲು ಅವನು ಯೋಗ್ಯನಲ್ಲ, ಹುದ್ದೆಯಿಂದ ಕೆಳಗಿಳಿಸಿ ಎಂದು ಏಕವಚನದಲ್ಲೇ ಮಹಿಳೆಯರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಪ್ರಧಾನಿ ಮೋದಿ ವಿದೇಶಿ ಪ್ರವಾಸ; ಜೋರ್ಡಾನ್, ಇಥಿಯೋಪಿಯಾ, ಒಮಾನ್‌ಗೆ ಭೇಟಿ
ಮಜೀದ್ ಸ್ಥಳೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿ ಮಲ್ಲಪುರಂ ಜಿಪಂ ವಾರ್ಡ್‌ನಿಂದ ಸ್ಪರ್ಧಿಸಿದ್ದರು. ಪ್ರತಿಸ್ಪರ್ಧಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಅಭ್ಯರ್ಥಿ ವಿರುದ್ಧ 666 ಮತಗಳಿಂದ ಗೆಲುವು ಸಾಧಿಸಿದ್ರು. ಇಂದು ವಿಜಯೋತ್ಸವ ಭಾಷಣ ಮಾಡುವ ನಾಲಿಗೆ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ದಟ್ಟ ಹೊಗೆ, ಮಂಜು – 100 ವಿಮಾನಗಳು ಕ್ಯಾನ್ಸಲ್, 400ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬ


