ಬಾಲ್ಕನಿಯಿಂದ ಬೀಳ್ತಿದ್ದ ಮಗುವಿನ ರಕ್ಷಣೆ: ವಿಡಿಯೋ

Public TV
1 Min Read
child save 1

ಮೊಬೈಲಿನಲ್ಲಿ ಮಾತನಾಡುತ್ತಿದ್ದಾಗ ಬಾಲ್ಕನಿಯಿಂದ ಬೀಳುತ್ತಿದ್ದ ಮಗುವನ್ನು ತಾಯಿ ರಕ್ಷಣೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ತಾಯಿ ತನ್ನ ಮಗನ ಕೈ ಹಿಡಿದುಕೊಂಡು ನಾಲ್ಕನೇ ಮಹಡಿಗೆ ಲಿಫ್ಟ್ ನಿಂದ ಹೊರಗೆ ಬರುತ್ತಾರೆ. ಈ ವೇಳೆ ಮಹಿಳೆ ಬಾಲ್ಕನಿ ಮುಂದೆ ಮೊಬೈಲಿನಲ್ಲಿ ಮಾತನಾಡುತ್ತಿರುತ್ತಾರೆ. ಹೀಗೆ ಮಾತನಾಡುವಾಗ ಮಹಿಳೆ ಮಗುವಿನ ಕೈ ಬಿಟ್ಟು ಬಿಡುತ್ತಾರೆ.

Child save 1

ತಾಯಿ ಕೈ ಬಿಟ್ಟ ತಕ್ಷಣ ಮಗು ಬಾಲ್ಕನಿ ಹತ್ತಿರ ಹೋಗಿ ಕಂಬಿಗಳಿಂದ ಇಣುಕಿ ನೋಡಿದೆ. ಈ ವೇಳೆ ಕಂಬಿಯ ಗ್ಯಾಪ್‍ನಲ್ಲಿ ಮಗು ಬೀಳುತ್ತಿದ್ದು, ಇದನ್ನು ನೋಡಿದ ತಾಯಿ ಕೆಳಗೆ ಕುಳಿತು ಮಗುವನ್ನು ಹಿಡಿದುಕೊಂಡಿದ್ದಾರೆ.

ತಾಯಿ ಬೀಳುತ್ತಿದ್ದ ಮಗುವನ್ನು ಹಿಡಿದುಕೊಂಡಿದ್ದನ್ನು ನೋಡಿದ ಸ್ಥಳೀಯರು ಮಗುವನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ಇದುವರೆಗೂ 3 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅಲ್ಲದೆ ಮಹಿಳೆಯ ಸಮಯಪ್ರಜ್ಞೆ ನೋಡಿ ಜನರು ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

child save 2 1

ಈ ವಿಡಿಯೋ ನೋಡಿ ಕೆಲವರು, ಪರ್ಸ್, ಮೊಬೈಲ್ ಹಿಡಿದುಕೊಂಡೇ ತಾಯಿ ಮಗುವಿಗೆ ರಕ್ಷಿಸಿದ್ದಾರೆ. ಇವರು ನಿಜವಾಗಿಯೂ ‘ಸೂಪರ್ ವುಮೆನ್’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ವಿಡಿಯೋ ನೋಡಿ ಎಲ್ಲ ಹೃದಯದ ಬಡಿತ ಒಂದು ಕ್ಷಣ ನಿಲ್ಲುತ್ತದೆ. ‘ಒಳ್ಳೆಯ ಕ್ಯಾಚ್ ಮಾಮ್’ ಎಂದು ಕಮೆಂಟ್ ಮಾಡಿದ್ದಾರೆ.

https://www.youtube.com/watch?v=21IAY-NtNrA

Share This Article
Leave a Comment

Leave a Reply

Your email address will not be published. Required fields are marked *