ಬೆಂಗಳೂರು: ಉಚಿತ ಬಸ್ ಟಿಕೆಟ್ (Free Bus Ticket) ಜಾರಿಗೆ ಬಂದ ಬಳಿಕ ಒಂದಲ್ಲ ಒಂದು ರೀತಿಯಲ್ಲಿ ಮಹಿಳೆಯರು ಸುದ್ದಿ ಆಗತ್ತಲೇ ಇದ್ದಾರೆ. ಇದೀಗ ಮಹಿಳೆಯೊಬ್ಬರು ಉಗುಳಲು ಹೋಗಿ ಫಜೀತಿಗೆ ಸಿಲುಕಿದ ಘಟನೆ ನಡೆದಿದೆ.
ಮಹಿಳೆಯ ತಲೆ ಲಾಕ್ ಆಗಿ ಪರದಾಡುತ್ತಿರುವುದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ವೀಡಿಯೋ ಮಾಡಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ. ಇದನ್ನೂ ಓದಿ: ಬಸ್ ಸೀಟಿಗಾಗಿ ಕಿತ್ತಾಟ – ಚಪ್ಪಲಿಯಿಂದ ಹಲ್ಲೆ, ಬಟ್ಟೆ ಹಿಡಿದು ಎಳೆದಾಡಿದ ಮಹಿಳೆಯರು
KSRTC ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಕಿಟಕಿಯ ಮೂಲಕ ಉಗಳಲೆಂದು (Woman Spitting From KSRTC Bus Window) ತಲೆ ಹೊರಗೆ ಹಾಕಿದ್ದಾರೆ. ಆದರೆ ದುರಾದೃಷ್ಟವಶಾತ್ ಮಹಿಳೆಯ ತಲೆ ಅಲ್ಲಿಯೇ ಲಾಕ್ ಆಗಿದೆ. ಈ ವೇಳೆ ಮಹಿಳೆ ಸಾಕಷ್ಟು ಪರದಾಟ ಅನುಭವಿಸಿದ್ದಾರೆ.
ಕಿಟಕಿಯ ಸಣ್ಣ ಜಾಗ ಇದ್ದ ಕಾರಣ ಅರ್ಧ ಗಂಟೆಗೂ ಹೆಚ್ಚು ಕಾಲ ತಲೆ ಲಾಕ್ ಆಗಿದೆ. ಈ ವೇಳೆ ಮಹಿಳೆಯ ಪರದಾಟ ಗಮನಿಸಿದ KSRTC ಬಸ್ ಚಾಲಕ ಹಾಗೂ ನಿರ್ವಾಹಕ ಬಸ್ ನಿಲ್ಲಿಸಿ ಆಕೆಯ ಸಹಾಯಕ್ಕೆ ಬಂದಿದ್ದಾರೆ. ಬಳಿಕ ಜಾಗರೂಕತೆಯಿಂದ ಮಹಿಳೆಯ ರಕ್ಷಣೆ ಮಾಡಲಾಗಿದೆ.
ಒಟ್ಟಿನಲ್ಲಿ ಚಲಿಸುತ್ತಿದ್ದ ಸಂದರ್ಭದಲ್ಲಿ ಕಿಟಕಿಯ ಮೂಲಕ ಕೈ, ಹಾಗೂ ತಲೆಯನ್ನು ಹೊರಗೆ ಹಾಕಬಾರದು ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ.