ಲಂಡನ್: ಟ್ಯಾಟೂ ಎಂದರೇ ಇತ್ತೀಚೆಗೆ ಹೆಚ್ಚು ಯುವಕರ ಜೊತೆಗೆ ಹಿರಿಯರು ಹೆಚ್ಚು ಕ್ರೇಜ್ ಮೂಡುತ್ತಿದೆ. ಹಲವರಿಗೆ ಈಗ ಟ್ಯಾಟೂ ಹುಚ್ಚು ಹೆಚ್ಚಾಗಿ ಒಂದು ಇಂಚು ಜಾಗ ಬಿದೇ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾರೆ. ತಮ್ಮ ಹೆಸರು, ಪ್ರೀತಿ ಪಾತ್ರರ ಹೆಸರು ಇಲ್ಲವೇ ತಮ್ಮಿಷ್ಟದ ಡಿಸೈನ್ಗಳ ಟ್ಯಾಟೂ ಹಾಕಿಸಿಕೊಂಡರೆ, ಇನ್ನು ಕೆಲವರು ದೇವರ ದೊಡ್ಡ ದೊಡ್ಡ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ನಟಿ ಟ್ಯಾಟೂ ಹಾಕಿಸಿಕೊಂಡಿರುವ ಜಾಗವನ್ನು ನೋಡಿದ್ರೆ ಎಲ್ಲರೂ ಹುಬ್ಬೇರಿಸುವುದು ಗ್ಯಾರೆಂಟಿ.
Advertisement
ಬ್ರಿಟನ್ನ 34 ವರ್ಷದ ಹಾಲಿವುಡ್ ನಟಿ ಬೆಕಿ ಹಾಲ್ಟ್ ತನ್ನ ದೇಹದ ಇಂಚಿಂಚೂ ಬಿಡದೇ ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಈ ಮೂಲಕ ದಾಖಲೆ ಸೃಷ್ಟಿಸಿದ್ದಾಳೆ. ಆಕೆ ಎಷ್ಟರ ಮಟ್ಟಿಗೆ ಟ್ಯಾಟೂ ಪ್ರೇಮಿ ಎಂದರೇ ತನ್ನ ಖಾಸಗಿ ಅಂಗವಾದ ಜನನಾಂಗಕ್ಕೂ ಈಕೆ ಸ್ವಲ್ಪವೂ ಜಾಗ ಬಿಡದೇ ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಇದನ್ನೂ ಓದಿ: ಬಡ ಹುಡುಗಿಯರ ಶಿಕ್ಷಣಕ್ಕೆ ಲಡಾಖ್ನ ವರ್ಜಿನ್ ಶಿಖರ ಏರುತ್ತಿರುವ ಗಟ್ಟಿಗಿತ್ತಿಯರು
Advertisement
ಬೆಕಿ ಹಾಲ್ಟ್ಗೆ ಅವರು ದೇಹಪೂರ್ತಿ ಟ್ಯಾಟೂ ಹಾಕಿಸಿಕೊಳ್ಳಲು ಒಂದು ವರ್ಷ ಸಮಯವನ್ನು ತೆಗೆದುಕೊಂಡಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾಳೆ. ಈಕೆ ಇದಕ್ಕಾಗಿ 42 ಸಾವಿರ ಡಾಲರ್(ಸುಮಾರು 33.33 ಲಕ್ಷ ರೂಪಾಯಿ) ಖರ್ಚು ಮಾಡಿದ್ದಾಳೆ.
Advertisement
View this post on Instagram
Advertisement
ಈ ಬಗ್ಗೆ ಹೇಳಿಕೊಂಡಿರುವ ಬೆಕಿ, ಜನನಾಂಗಕ್ಕೆ ನಾನು ಟ್ಯಾಟೂ ಹಾಕಿಸಿಕೊಳ್ಳುವಾಗ ತುಂಬಾ ಅಂದರೆ ತುಂಬಾ ನೋವಾಯಿತು. ಜೀವವೇ ಹೋದ ಅನುಭವವಾಯಿತು. ಆದರೆ ಜಗತ್ತಿನ ಕೆಲವೇ ಕೆಲವು ಮಹಿಳೆಯರು ಈ ಸಾಹಸ ಮಾಡುತ್ತಾರೆ. ದೇಹದ ಇಂಚಿಂಚೂ ಬಿಡದೇ ಟ್ಯಾಟೂ ಹಾಕಿಸಿಕೊಂಡಿರುವ ನಾನು ಆ ಜಾಗದಲ್ಲಿ ಬಿಟ್ಟರೆ ಅದು ದಾಖಲೆ ಆಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಎಷ್ಟೇ ನೋವಾದರೂ ಸಹಿಸಿಕೊಂಡು ತೀರಾ ಸೂಕ್ಷ್ಮಭಾಗದಲ್ಲಿಯೂ ಟ್ಯಾಟೂ ಹಾಕಿಸಿಕೊಂಡಿದ್ದೇನೆ ಎಂದಿದ್ದಾಳೆ. ಇದನ್ನೂ ಓದಿ: 16 ವರ್ಷದ ಮಗನ ಮುಂದೆಯೇ ತಂದೆಯನ್ನು ಹತ್ಯೆ ಮಾಡಿದ ದುಷ್ಕರ್ಮಿ
ಖಾಸಗಿ ಅಂಗದ ಒಳ ಭಾಗದಲ್ಲಿ ಟ್ಯಾಟೂ ಹಾಕಿಸುವಾಗ ಖುದ್ದು ಬೆಕಿ ಅವರೇ ಸುಸ್ತಾಯಿತ್ತು ಎಂದು ಹೇಳಿಕೊಂಡಿದ್ದಾಳೆ. ಆ ಒಂದು ಭಾಗಕ್ಕೆ ಹಚ್ಚೆ ಹಾಕುವಾಗ ಐದು ಬಾರಿ ವಿಶ್ರಾಂತಿ ತೆಗೆದುಕೊಂಡೆ. ಶ್ರಮಪಟ್ಟು ಅಂತೂ ಇಂತೂ ಯಶಸ್ವಿಯಾಗಿ ಟ್ಯಾಟೂ ಹಾಕುವ ಕಾರ್ಯ ಪೂರ್ಣಗೊಂಡಿತು ಎಂದಿದ್ದಾಳೆ.
ತಾವು ಟ್ಯಾಟೂ ಹಾಕಿಸಿಕೊಂಡಿರುವ ಫೋಟೋಗಳನ್ನು ಇವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ದಾಖಲೆಯನ್ನು ಬರೆದಿದ್ದಾಳೆ.