ಮ್ಯಾಡ್ರಿಡ್: ಅಲರ್ಜಿಯಿಂದಾಗಿ 24 ವರ್ಷದ ಯುವತಿಯ ಮುಖ ಊದಿಕೊಂಡಿದ್ದರಿಂದ ಸಿಬ್ಬಂದಿ ವಿಮಾನ ಹತ್ತಲು ಬಿಡದ ಘಟನೆಯೊಂದು ಸ್ಪೇನ್‍ನಲ್ಲಿ ನಡೆದಿದೆ.
ಶನ್ನಾನ್ ವೊಥಸ್ರ್ಪೂನ್ ವಿದ್ಯಾರ್ಥಿನಿಯಾಗಿದ್ದು, ಈಕೆ ತಾಯ್ನಾಡು ಇಂಗ್ಲೆಂಡಿಗೆ ತೆರಳಲೆಂದು ಸ್ಪೇನ್ ನಲ್ಲಿರುವ ಅಲಿಕಾಂಟೆ ವಿಮಾನ ನಿಲ್ದಾಣಕ್ಕೆ ಬಂದಿದ್ದಾಳೆ. ಈ ವೇಳೆ ತಪಾಸಣೆ ಮಾಡಿದ ರಯಾನ್ ಏರ್ ವಿಮಾನಯಾನ ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿನಿಯ ಮುಖ ಚಹರೆ ಹಾಗೂ ಆಕೆಯ ಪಾಸ್ ಪೋರ್ಟ್ ನಲ್ಲಿರುವ ಫೋಟೋಗೂ ಹೊಂದಾಣಿಕೆ ಆಗುತ್ತಿಲ್ಲ ಎಂದು ಹೇಳಿದ್ದಾರೆ.
Advertisement
ನನ್ನ ಮುಖ ಊದಿಕೊಂಡಿತ್ತು. ಹೀಗಾಗಿ ನಾನು ಮುಖವನ್ನು ಕವರ್ ಮಾಡಿಕೊಂಡೆ. ಈ ವೇಳೆ ಅಲ್ಲೇ ಕುಳಿತಿದ್ದ ಮಹಿಳಾ ಕೌಂಟರ್, ಪಾಸ್ ಪೋರ್ಟ್ ಕೊಡುವಂತೆ ಕೇಳಿದರು. ಈ ವೇಳೆ ಅವರು ಅದನ್ನು ಪರಿಶೀಲಿಸಿ, ಕೂಡಲೇ ತಲೆ ಅಲ್ಲಾಡಿಸಿದರು. ಅಲ್ಲದೆ ತಕ್ಷಣ ಮೇಲ್ವಿಚಾರಕನನ್ನು ಕರೆದು ಆತನೊಂದಿಗೆ ಮಾತನಾಡುತ್ತಾ ನನ್ನ ಪ್ರಯಾಣಕ್ಕೆ ಬ್ರೇಕ್ ಹಾಕಿದಳು ಎಂದು ವಿದ್ಯಾರ್ಥಿನಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾಳೆ.
Advertisement
Advertisement
ವಿದ್ಯಾರ್ಥಿನಿ ತನ್ನಲ್ಲಿರುವ ಎಲ್ಲಾ ದಾಖಲೆಗಳನ್ನು ಸಿಬ್ಬಂದಿಗೆ ತೋರಿಸಿದ್ದಾಳೆ. ಆದರೆ ಅವರು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಅಲ್ಲದೆ ನನ್ನ ಟಿಕೆಟ್ ಕೂಡ ಅವರ ಬಳಿ ಇತ್ತು. ಆದರೂ ಯಾವುದಕ್ಕೂ ಅವರು ಕ್ಯಾರೇ ಎಂದಿಲ್ಲ. ಇದರಿಂದ ನನಗೆ ಅವರ ಮೇಲೆ ಸಿಟ್ಟು ಬಂದಿತ್ತು ಎಂದು ವಿದ್ಯಾರ್ಥಿನಿ ಬೇಸರ ವ್ಯಕ್ತಪಡಿಸಿದ್ದಾಳೆ.
Advertisement
ಕೊನೆ ಕ್ಷಣದವರೆಗೆ ವಿದ್ಯಾರ್ಥಿನಿ ಎಲ್ಲಾ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಬೇಸರಗೊಂಡು, ಬ್ರಿಟಿಷ್ ಏರ್ ವೇಸ್ ಟಿಕೆಟ್ ಬುಕ್ ಮಾಡಿದೆ. ಅಲ್ಲಿನ ಸಿಬ್ಬಂದಿ ನನಗೆ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟರು ಎಂದು ತಿಳಿಸಿದಳು.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಯಾನ್ ಏರ್ ವಿಮಾನಯಾನ ಸಂಸ್ಥೆ, ವಿಮಾನಯಾನ ಮಾಡುವಾಗ ಸಮಂಜಸವಾದ ಪಾರ್ಸ್ ಪೋರ್ಟ್ ಹಿಡಿದುಕೊಂಡು ಬರುವುದು ಪ್ರತಿಯೊಬ್ಬ ಪ್ರಯಾಣಿಕನ ಕರ್ತವ್ಯವಾಗಿದೆ ಎಂದು ತಿಳಿಸಿದೆ.