– ಸತ್ತಿದ್ದಾಳೆ ಎಂದು ತಿಥಿ ಕಾರ್ಯವನ್ನೂ ಮಾಡಿದ್ದ ಕುಟುಂಬಸ್ಥರು
ಬಳ್ಳಾರಿ: ಮನೆಯಿಂದ ನಾಪತ್ತೆಯಾಗಿದ್ದ ಮಹಿಳೆ 25 ವರ್ಷಗಳ ಬಳಿಕ ಪತ್ತೆಯಾಗಿದ್ದು, ವಿಡಿಯೋ ಕಾಲ್ ಮೂಲಕ ತಾಯಿ ಮುಖ ಕಂಡು ಮಕ್ಕಳು ಬಿಕ್ಕಿ ಬಿಕ್ಕಿ ಅತ್ತ ಘಟನೆ ಬಳ್ಳಾರಿಯಲ್ಲಿ (Ballari) ನಡೆದಿದೆ.
Advertisement
ಬಳ್ಳಾರಿ ಮೂಲದ ಸಾಕಮ್ಮಾ 25 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ. ಈಕೆ ಮನೆಯಿಂದ ದೂರವಾಗಿ 25 ವರ್ಷಗಳು ಕಳೆದಿತ್ತು. ಆ ಮಹಿಳೆಯ ಸುಳಿವೇ ಸಿಗದ ಕಾರಣ ಕುಟುಂಬಸ್ಥರು ಮೃತಪಟ್ಟಿದ್ದಾಳೆ ಎಂದು ಅಂದಾಜಿಸಿ, ಆಕೆಯ ತಿಥಿ ಕಾರ್ಯವನ್ನೂ ಮಾಡಿದ್ದರು. ಆದರೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರ ಇಚ್ಚಾಶಕ್ತಿಯಿಂದ, ಕುಟುಂಬಸ್ಥರು ಮೃತಪಟ್ಟಿದ್ದಾಳೆ ಅಂದುಕೊಂಡಿದ್ದ ಮಹಿಳೆ ದೂರದ ಹಿಮಾಚಲ ಪ್ರದೇಶದ (Himachal Pradesh) ಮಂಡಿಯಲ್ಲಿ (Mandi) ಪತ್ತೆಯಾಗಿದ್ದಾರೆ. ಇದನ್ನೂ ಓದಿ: Mandya | ತೋಟದ ಮನೆಯಲ್ಲಿ ಹತ್ಯೆಗೂ ಮುನ್ನ ಹಲವು ಗ್ರಾಮಗಳಲ್ಲಿ ಹೊಂಚು ಹಾಕಿದ್ದ ಪಾತಕಿ!
Advertisement
Advertisement
ನಾಪತ್ತೆಯಾಗಿದ್ದ ಸಾಕಮ್ಮಾ ಇದೀಗ ಹಿಮಾಚಲ ಪ್ರದೇಶದ ನಿರಾಶ್ರಿತರ ಶಿಬಿರದಲ್ಲಿ ಇರೋದು ಬೆಳಕಿಗೆ ಬಂದಿದೆ. ಇಬ್ಬರು ಗಂಡು ಮಕ್ಕಳು, ಓರ್ವ ಹೆಣ್ಣು ಮಗುವಿನ ತಾಯಿಯಾಗಿದ್ದ ಸಾಕಮ್ಮಾ, ಮಾನಸಿಕ ಸಮಸ್ಯೆ ಹೊಂದಿದ್ದರು. ಮಕ್ಕಳಾದ ವಿಕ್ರಮ್, ಬೋಧರಾಜ್, ಲಕ್ಷ್ಮೀ ಚಿಕ್ಕವರಿರುವಾಗಲೇ ಹೊಸಪೇಟೆಯಿಂದ ಆಕಸ್ಮಿಕವಾಗಿ ರೈಲು ಹತ್ತಿದ್ದ ಸಾಕಮ್ಮ, ಹಿಮಾಚಲ ಪ್ರದೇಶಕ್ಕೆ ಹೋಗಿದ್ದರು. ಅನಾಥವಾಗಿದ್ದ ಸಾಕಮ್ಮಾ ಹಿಮಾಚಲ ಪ್ರದೇಶದ ಮಂಡಿಯ ನಿರಾಶ್ರಿತ ಶಿಬಿರದಲ್ಲೇ ಆಶ್ರಯ ಪಡೆದಿದ್ದರು. ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮಂಡ್ಯ ಮೂಲದ ಐಪಿಎಸ್ ಅಧಿಕಾರಿ ರವಿನಂದನ್ ಅವರು ಸಾಕಮ್ಮಾಳ ಬಗ್ಗೆ ಬೆಂಗಳೂರಿನಲ್ಲಿರುವ ತಮ್ಮ ಸ್ನೇಹಿತರಿಗೆ ವಿಡಿಯೋ ಮೂಲಕ ಮಾಹಿತಿ ನೀಡಿದ್ದರು. ಐಪಿಎಸ್ ಅಧಿಕಾರಿಯ ಸ್ನೇಹಿತ ಸಾಕಮ್ಮ ಅವರ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದನ್ನೂ ಓದಿ: 71,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ
Advertisement
ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ವಿಡಿಯೋ ಗಮನಿಸಿದ್ದ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ ಮಣಿವಣ್ಣನ್, ಆ ಬಳಿಕ ಐಪಿಎಸ್ ಅಧಿಕಾರಿ ರವಿನಂದನ್ ಜೊತೆ ಚರ್ಚೆ ನಡೆಸಿ, ಮಾಹಿತಿ ಪಡೆದಿದ್ದರು. ಬಳ್ಳಾರಿ ಮೂಲದ ಅಜ್ಜಿ ಬಗ್ಗೆ ಬಳ್ಳಾರಿಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಮಣಿವಣ್ಣನ್ ನಿರ್ದೇಶನದ ಮೇರೆಗೆ ಮೂವರು ಸಿಬ್ಬಂದಿಗಳ ತಂಡ ಹಿಮಾಚಲ ಪ್ರದೇಶದ ಮಂಡಿಗೆ ಹೋಗಿತ್ತು. ಅಲ್ಲಿಗೆ ಹೋದಾಗ ಅಜ್ಜಿಗೆ ಮಕ್ಕಳು, ಕುಟುಂಬ ಇದೆ ಎಂಬ ಮಾಹಿತಿ ತಿಳಿದಿದೆ. ಮಾಹಿತಿ ತಿಳಿಯುತ್ತಲೇ ಕುಟುಂಬಸ್ಥರನ್ನು ಪತ್ತೆ ಹಚ್ಚಿದ ಅಧಿಕಾರಿಗಳು, ಮಂಡಿಯಿಂದಲೇ ವೀಡಿಯೋ ಕಾಲ್ ಮೂಲಕ ಮಕ್ಕಳ ಜೊತೆ ತಾಯಿ ಸಾಕಮ್ಮಾಳನ್ನು ಮಾತನಾಡಿಸಿದರು. ತಾಯಿ ಜೊತೆ ಮಾತನಾಡುವಾಗ, ತಾಯಿ ಕಂಡು ಸಾಕಮ್ಮಾ ಅವರ ಮಕ್ಕಳು ಭಾವುಕರಾಗಿ ಕಣ್ಣೀರು ಹಾಕಿದರು. ತಾಯಿ ಸತ್ತಿದ್ದಾಳೆ ಎಂದು ಈಗಾಗಲೇ ಎಲ್ಲಾ ಕಾರ್ಯ ಮುಗಿಸಿದ್ದ ಮಕ್ಕಳಿಗೆ ಅಧಿಕಾರಿಗಳ ಪ್ರಯತ್ನದಿಂದ ಹೆತ್ತಮ್ಮ ಮತ್ತೆ ಮನೆ ಸೇರುವಂತಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೊಂದು ಸರಣಿ ಅಪಘಾತ – KSRTC ಬಸ್, ಆಟೋ ಸಂಪೂರ್ಣ ಜಖಂ!