ಆಸ್ಪತ್ರೆಯಿಂದ ಮಗು ಕದ್ದು ಸಾಗಿಸುತ್ತಿದ್ದ ಮಹಿಳೆ ಅರೆಸ್ಟ್ – ಪೊಲೀಸರ ಕಾರ್ಯಕ್ಕೆ ಸಿಎಂ ಮೆಚ್ಚುಗೆ

Public TV
1 Min Read
Kolar police

ಕೋಲಾರ: ನವಜಾತ ಶಿಶುವನ್ನು ಕಳ್ಳತನ ಮಾಡಿ ತಮಿಳುನಾಡಿಗೆ ಸಾಗಿಸುತ್ತಿದ್ದ ಮಹಿಳೆಯನ್ನು (Woman) ಪೊಲೀಸರು (Police) ಬಂಧಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಎಕ್ಸ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಗರದ (Kolar) ಆಸ್ಪತ್ರೆ ಒಂದರಿಂದ ಮೂವರು ಮಹಿಳೆಯರು ಗುರುವಾರ ಸಂಜೆ ನಾಲ್ಕು ದಿನಗಳ ಮಗುವನ್ನು ಬ್ಯಾಗ್‍ನಲ್ಲಿ ಹಾಕಿಕೊಂಡು ಕಳ್ಳತನ ಮಾಡಿದ್ದರು. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಪೊಲೀಸರು ಕೇವಲ ಐದೇ ಗಂಟೆಯಲ್ಲಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಮಗುವನ್ನು ಮರಳಿ ತಾಯಿಯ ಮಡಿಲಿಗೆ ಸೇರಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರದ್ದು ಹುಲಿ ಉಗುರು ಎಂಬ ಸದಾರಮೆ ನಾಟಕ: ಸಿ.ಟಿ. ರವಿ ವಾಗ್ದಾಳಿ

ಮಗು ಕಳ್ಳತನ ಮಾಡಿದ್ದ ಮೂವರ ಪೈಕಿ ಓರ್ವ ಮಹಿಳೆಯನ್ನು ತಮಿಳುನಾಡಿನ (Tamil Nadu) ಬೇರಿಕೆ ಬಳಿ ಬಂಧಿಸಲಾಗಿದೆ. ತಪ್ಪಿಸಿಕೊಂಡಿರುವ ಇನ್ನಿಬ್ಬರು ಮಹಿಳೆಯರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮಗುವನ್ನು ಕಳ್ಳತನ ಮಾಡಿ ತಮಿಳುನಾಡಿಗೆ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಮಾಲೂರಿನ ಪಟೇಲ ನಗರದ ನಂದಿನಿ ಮತ್ತು ಪೂವರ್ ಸನ್ ದಂಪಂತಿಯ ಮಗುವನ್ನ ಮೂವರು ಮಹಿಳೆಯರು ಅಪಹರಿಸಿದ್ದರು. ಇದನ್ನೂ ಓದಿ: ಅಕ್ಕಿಕಾಳಿನಲ್ಲಿ ನಾಡಗೀತೆ ಬರೆದು ಬುಕ್ ಆಫ್ ರೆಕಾರ್ಡ್ ಮಾಡಿದ ಯುವಕ

Web Stories

Share This Article