ಮುಂಬೈ: ಕಳ್ಳತನ ಮಾಡಲು ಪುರುಷರ ಬಟ್ಟೆಗಳನ್ನು ಧರಿಸಿದ್ದ 24 ವರ್ಷದ ಯುವತಿ ಸಿಕ್ಕಿಬಿದ್ದಿದ್ದು, ಸಹರ್‍ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಚಾಕಲ ನಿವಾಸಿ ಆರೋಪಿ ಪೂಜಾ ಲೋಂಡೆ ಪುರುಷನ ವೇಷಧರಿಸಿ ಸಿಕ್ಕಿಬಿದ್ದಿದ್ದಾಳೆ. ಪೂಜಾ ತನ್ನ ಸಹಾಯಕರೊಂದಿಗೆ ಫುಟ್‍ಪಾತ್‍ನಲ್ಲಿ ನಿಲ್ಲಿಸಿದ ವಾಹನಗಳನ್ನು ಕದಿಯುತ್ತಿದ್ದಳು. ಕಳ್ಳತನ ಮಾಡಬೇಕಾದರೆ ಪುರುಷನ ವೇಷಧರಿಸುವುದೇ ಈಕೆಯ ವಿಶೇಷತೆ. ಕಾರಿನಲ್ಲಿ ಮಲಗಿದ್ದ ಚಾಲಕನನ್ನು ಗಮನಿಸಿದ ಪೂಜಾ ತನ್ನ ಗ್ಯಾಂಗ್ ಸಹಾಯದಿಂದ ಕಾರನ್ನು ಕದಿಯಲು ಸಿದ್ಧವಾಗಿದ್ದಾರೆ. ಇದನ್ನೂ ಓದಿ: ನಾನಾ ವೇಷ ತೊಟ್ಟು ಜನರಿಗೆ ಟೋಪಿ ಹಾಕಿದ್ದ ಸ್ವಾಮೀಜಿ ಪೊಲೀಸರ ಅತಿಥಿ!
ಪೂಜಾ ತನಗೆ ತಾನೇ ಹಾನಿ ಮಾಡಿಕೊಳ್ಳುವುದಾಗಿ ಬೆದರಿಸುತ್ತಾ ಬ್ಲೇಡನ್ನು ಹೊರತೆಗೆದು ಅವಳ ಬಾಯಿಗೆ ಇಟ್ಟುಕೊಂಡಿದ್ದಾಳೆ. ಗಾಬರಿಯಾದ ಚಾಲಕ ಪೂಜಾಳನ್ನು ತಡೆಯಲು ಮುಂದಾಗಿದ್ದಾನೆ. ಚಾಲಕ ಹತ್ತಿರ ಬರುತ್ತಿದಂತೆ ಆಕೆ ಅವನ ಬಳಿ ಇದ್ದ ಗಾಡಿ ಕೀಯನ್ನು ಕಸಿದುಕೊಂಡು, ತನ್ನ ಗ್ಯಾಂಗ್ ಸಮೇತ ಪರಾರಿಯಾಗಿದ್ದಾಳೆ.
ಈ ಕುರಿತು ಚಾಲಕ ಪೊಲೀಸರಿಗೆ ದೂರು ನೀಡಿದ್ದು, ಪುರುಷ ವೇಷ ಧರಿಸಿದ ಮಹಿಳೆಯೊಬ್ಬಳು ತನ್ನ ಗ್ಯಾಂಗ್ ಸಹಾಯದಿಂದ ನನ್ನ ಕಾರನ್ನು ಕದ್ದಿದ್ದಾಳೆ. ಈ ವೇಳೆ ಬಾಯಿಗೆ ಬ್ಲೇಡ್ ಇಟ್ಟು ನನಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ನಾನು ಗಾಬರಿಯಾಗಿ ಅವರನ್ನು ತಡೆಯಲು ಮುಂದಾದೆ. ಆದರೆ ಅವರೇ ನನ್ನ ಗಾಡಿ ಕೀ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾನೆ. ಇದನ್ನೂ ಓದಿ: ನಾಯಕರಿಗಿಲ್ಲದ ವಯಸ್ಸು ನಾಯಕಿಗೇಕೆ? ಲಾರಾ ದತ್ತ ಪ್ರಶ್ನೆ
ಸಹರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ಕೊಟ್ಟಿದ್ದು, ಚಾಲಕ ನೀಡಿದ ವಿವರಣೆಯ ಆಧಾರದ ಮೇಲೆ ನಾವು ನಮ್ಮ ಮೂಲಗಳನ್ನು ಟ್ಯಾಪ್ ಮಾಡಿದ್ದೇವೆ. ಕಳೆದ ವಾರ ಮಹಿಳೆಯನ್ನು ಬಂಧಿಸಿದ್ದೇವೆ. ತನಿಖೆಯ ಸಮಯದಲ್ಲಿ ಆಕೆಯ ವಿರುದ್ಧ 2018 ರಲ್ಲಿ ವಿಲೆ ಪಾರ್ಲೆ ಮತ್ತು ಸಾಂತಾಕ್ರೂಜ್ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣ ಮತ್ತು ದರೋಡೆ ಪ್ರಕರಣ ದಾಖಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.