ಮುಂಬೈ: ಎಟಿಎಂ ಸೆಂಟರ್ ನಲ್ಲಿ ತನಗೆ ವಂಚಿಸಿದ ಚಾಲಾಕಿ ಖದೀಮನನ್ನು ಮಹಿಳೆಯೊಬ್ಬರು ಸತತ 17 ದಿನ ಶ್ರಮಪಟ್ಟು, ಕೊನೆಗೂ ರೆಡ್‍ಹ್ಯಾಂಡಾಗಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದ ಬಾಂದ್ರಾ ಪ್ರದೇಶದಲ್ಲಿ ನಡೆದಿದೆ.
ನಗರದ ಬಾಂದ್ರಾ ಪ್ರದೇಶದಲ್ಲಿರುವ ಎಟಿಎಂನಲ್ಲಿ ಡಿ. 18ರ ರಾತ್ರಿ ವೇಳೆ ರೆಹಾನಾ ಶೇಖ್(35) ಹಣ ತೆಗೆಯಲು ಹೋಗಿದ್ದರು. ಎಟಿಎಂನಲ್ಲಿ ಕೊಂಚ ಯಾಂತ್ರಿಕ ಸಮಸ್ಯೆ ಇದ್ದ ಕಾರಣ ಹಣ ತೆಗೆಯಲು ಆಗುತ್ತಿರಲಿಲ್ಲ. ಈ ವೇಳೆ ಸ್ಥಳಕ್ಕೆ ಬಂದ ಭೂಪೇಂದ್ರ ಮಿಶ್ರಾ ಎಂಬಾತ ಮಹಿಳೆಗೆ ಸಹಾಯ ಮಾಡುವುದಾಗಿ ನಂಬಿಸಿ, ಎಟಿಎಂ ಒಳಗೆ ಆಕೆಯ ಕಾರ್ಡ್ ಹಾಕಿ, ಪಿನ್ ಹೊಡೆದು ಬಳಿಕ ಯಂತ್ರ ಕೆಲಸ ಮಾಡುತ್ತಿಲ್ಲ ಅಂತ ಮಹಿಳೆಗೆ ಕಾರ್ಡ್ ಕೊಟ್ಟು ಕಳುಹಿಸಿದ್ದಾನೆ.
Advertisement
Advertisement
ಮಹಿಳೆ ಎಟಿಎಂ ನಿಂದ ಹೊರ ಬಂದು ಸ್ವಲ್ಪ ದೂರ ಹೋಗುತ್ತಿದ್ದಂತೆ ಖಾತೆಯಿಂದ 10 ಸಾವಿರ ರೂ. ಹಣ ತೆಗೆಯಲಾಗಿದೆ ಎಂದು ಫೋನ್‍ಗೆ ಮೆಸೇಜ್ ಬಂದಿದೆ. ಆಗ ತಕ್ಷಣ ಹಿಂತಿರುಗಿ ಎಟಿಎಂಗೆ ಹೋಗುವಷ್ಟರಲ್ಲಿ ಆ ವ್ಯಕ್ತಿ ಹಣ ತೆಗೆದುಕೊಂಡು ಪರಾರಿಯಾಗಿದ್ದನು. ತನಗೆ ಮೋಸ ಮಾಡಿದವನನ್ನು ಹುಡುಕಲೇ ಬೇಕೆಂದು ನಿರ್ಧಾರ ಮಾಡಿದ ಮಹಿಳೆ ಸತತ 17 ದಿನದಿಂದ ಅದೇ ಎಟಿಎಂಗೆ ಹೋಗುತ್ತಿದ್ದರು. ಅಲ್ಲದೆ ಎಟಿಎಂ ಹೊರಗೆ ನಿಂತು ಆ ವ್ಯಕ್ತಿ ಬೇರೊಬ್ಬರಿಗೆ ವಂಚನೆ ಮಾಡಬಹುದು. ಈ ಕಾರಣಕ್ಕೆ ಆತ ಮತ್ತೆ ಎಟಿಎಂಗೆ ಬರಬಹುದು ಎಂದು ನಂಬಿ ಆತನಿಗಾಗಿ ಕಾಯುತ್ತಿದ್ದರು.
Advertisement
ಜನವರಿ 4 ರಂದು ಮಹಿಳೆ ಎಂಟಿಎಂ ಬಳಿ ಕಾಯುತ್ತಿದ್ದಾಗ ಆರೋಪಿ ಮಿಶ್ರ ಕಾಣಿಸಿಕೊಂಡಿದ್ದನು. ಆಗ ತಕ್ಷಣ ಮಹಿಳೆ ಪೊಲೀಸರಿಗೆ ಮಾಹಿತಿ ತಿಳಿಸಿ ಸ್ಥಳಕ್ಕೆ ಬರಲು ಹೇಳಿದ್ದಾರೆ. ಬಳಿಕ ಜಾಣತನದಿಂದ ಕಳ್ಳನನ್ನು ಹಿಡಿದು ಪೊಲೀಸರಿಗೆ ಮಹಿಳೆ ಒಪ್ಪಿಸಿದ್ದಾರೆ.
Advertisement
ಆರೋಪಿ ಮಿಶ್ರ ಜನರನ್ನು ವಂಚಿಸಿದ್ದು ಇದೇ ಮೊದಲ ಬಾರಿ ಅಲ್ಲ. ರೆಹಾನಾ ಅವರಿಗೆ ವಂಚಿಸಿದ ಹಾಗೆಯೇ ಸಾಕಷ್ಟು ಜನರಿಗೆ ಪಂಗನಾಮ ಹಾಕಿದ್ದಾನೆ. ಜನರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಹಣವನ್ನು ಮೋಸದಿಂದ ಪಡೆದು ಪರಾರಿಯಾಗುತ್ತಿದ್ದನು. ಹಲವು ಠಾಣೆಗಳಲ್ಲಿ ಆತನ ಮೇಲೆ ಸರಿಸುಮಾರು 7 ವಂಚನೆ ಪ್ರಕರಣಗಳು ಈ ಹಿಂದೆಯೇ ದಾಖಲಾಗಿತ್ತು. ಆದರಿಂದ ಈ ಖತರ್ನಾಕ್ ಕಳ್ಳನನ್ನು ಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದರು. ಕೊನೆಗೂ ದಿಟ್ಟ ಮಹಿಳೆ ರೆಹಾನಾ ಅವರ ಧೈರ್ಯದಿಂದ ಪೊಲೀಸರಿಗೆ ವಂಚಕ ದೊರಕಿದ್ದಾನೆ.
ವಂಚನೆ ಹೇಗೆ ಮಾಡ್ತಿದ್ದ:
ಭೂಪೇಂದ್ರ ಮಿಶ್ರಾ ತೆಗೆಯಲು ಸಹಾಯ ಮಾಡುವುದಾಗಿ ಹೇಳಿ ಎಟಿಎಂ ಒಳಗಡೆ ಜನರನ್ನು ನಂಬಿಸುತ್ತಿದ್ದ. ಎಟಿಎಂನಲ್ಲಿ ಪಿನ್ ಹಾಕಿ ಅರ್ಧ ಹಣ ವ್ಯವಹಾರ ನಡೆಸುತ್ತಿದ್ದಾಗ ಯಂತ್ರ ಹಾಳಾಗಿದೆ ಎಂದು ಹೇಳುತ್ತಿದ್ದ. ಗ್ರಾಹಕರು ಈತನ ಮಾತನ್ನು ನಂಬಿ ತೆರಳುತ್ತಿದ್ದರು. ಗ್ರಾಹಕರು ಎಟಿಎಂನಿಂದ ಹೊರ ಬರುವ ಸಮಯದಲ್ಲಿ `ಕ್ಯಾನ್ಸಲ್’ ಬಟನ್ ಒತ್ತುತ್ತಿರಲಿಲ್ಲ. ವ್ಯವಹಾರ ಕ್ಯಾನ್ಸಲ್ ಆಗದ ಕಾರಣ ಮಿಶ್ರಾ ಹಣವನ್ನು ಡ್ರಾ ಮಾಡುತ್ತಿದ್ದ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv