ಹೆರಿಗೆಗೂ ಮುನ್ನ ಲಿಂಗಪರೀಕ್ಷೆ- ಗರ್ಭಪಾತವಾಗಿ ಮಹಿಳೆ ಸಾವು

Public TV
1 Min Read
PREGNANT

– ಮೂವರು ಪೊಲೀಸರ ವಶಕ್ಕೆ

ಮುಂಬೈ: ಹೆರಿಗೆಗೂ ಮುನ್ನ ಒತ್ತಾಯಪೂರ್ವಕವಾಗಿ ಲಿಂಗಪರೀಕ್ಷೆಗೆ ಒಳಗಾದ 32 ವರ್ಷದ ಮಹಿಳೆಗೆ ಗರ್ಭಪಾತವಾಗಿ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ (Maharastra) ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ.

ಸೋಮವಾರ ಸಾಂಗ್ಲಿ ನಗರದಲ್ಲಿ ಕಾರಿನಲ್ಲಿ ಮಹಿಳೆಯೊಬ್ಬರು ಶವವಾಗಿ ಪತ್ತೆಯಾಗಿದ್ದರು. ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಕಾರಿನಿಂದ ಮೃತದೇಹವನ್ನು ವಶಕ್ಕೆ ಪಡೆದುಕೊಂಡರು. ಬಳಿಕ ತನಿಖೆ ನಡೆಸಿದ ವೇಳೆ ವಿಚಾರ ಬಯಲಿಗೆ ಬಂದಿದೆ. ಘಟನೆ ಸಂಬಂಧ ಮೃತ ಮಹಿಳೆಯ ಕುಟುಂಬದ ಮೂವರು ಸದಸ್ಯರನ್ನು ವಶಕ್ಕೆ ಪಡೆದು ಕರ್ನಾಟಕ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

POLICE JEEP 1

ಮೀರಜ್ ತಾಲೂಕಿನ ನಿವಾಸಿಯಾಗಿರುವ ಮಹಿಳೆಗೆ ಇಬ್ಬರು ಮಕ್ಕಳಿದ್ದು, ಪತಿ ಸೇನೆಯಲ್ಲಿದ್ದಾರೆ. ಗರ್ಭಿಣಿಯನ್ನು ನೆರೆಯ ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಆಕೆಯ ಕುಟುಂಬಸ್ಥರು ಪ್ರಸವಪೂರ್ವ ಲಿಂಗ ಪರೀಕ್ಷೆಗೆ ಒಳಗಾಗುವಂತೆ ಒತ್ತಾಯಿಸಿದ್ದಾರೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಪೆನ್‍ಡ್ರೈವ್ ಪ್ರಕರಣದಿಂದ ಸೈಡ್ ಎಫೆಕ್ಟ್- ಫೋಟೋಗ್ರಾಫರ್‌ಗಳಿಗೆ ತಟ್ಟಿದ ಬಿಸಿ!

ಅಧಿಕಾರಿಗಳ ಪ್ರಕಾರ, ಪರೀಕ್ಷೆಯ ನಂತರ ಮಹಿಳೆಗೆ ಗರ್ಭಪಾತವಾಗಿದೆ. ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ. ಆದರೆ ಮಹಿಳೆ ಮಹಾರಾಷ್ಟ್ರದ ನಿವಾಸಿ ಎಂದು ಉಲ್ಲೇಖಿಸಿ ಮರಣ ಪ್ರಮಾಣಪತ್ರವನ್ನು ನೀಡಲು ಆಸ್ಪತ್ರೆ ನಿರಾಕರಿಸಿತು.

ನಾವು ಘಟನೆಯ ಬಗ್ಗೆ ಗಮನಹರಿಸಿದ್ದೇವೆ, ಆದರೆ ಪ್ರಕರಣವನ್ನು ದಾಖಲಿಸಿಲ್ಲ. ಮರಣೋತ್ತರ ಪರೀಕ್ಷೆಯ ನಂತರ ನಾವು ಕರ್ನಾಟಕ ಪೊಲೀಸರಿಗೆ ತಿಳಿಸಿದ್ದೇವೆ. ಏಕೆಂದರೆ ಅವರ ವ್ಯಾಪ್ತಿಯಲ್ಲಿ ಸಾವು ಸಂಭವಿಸಿದೆ ಎಂದು ಪೊಲೀಸರು ತಿಳಿಸಿದರು.

Share This Article