ಗದಗ: ಕೌಟುಂಬಿಕ ಕಲಹದ ಹಿನ್ನೆಲೆ ಮನನೊಂದ ಮಹಿಳೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವೇಳೆ, ತಡೆಯಲು ಹೋದ ಮಹಿಳೆ ಮೈದುನನಿಗೂ ಬೆಂಕಿ ತಗುಲಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮುಂಡರಗಿ ತಾಲೂಕಿನ ಗುಡ್ಡದ ಬೂದಿಹಾಳ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಗಂಡ ಸಿದ್ದಪ್ಪ, ಮೈದುನ ಚಂದ್ರಕಾಂತ ಹಾಗೂ ಕುಟುಂಬದವರ ಕಲಹದ ಹಿನ್ನಲೆ 29 ವರ್ಷದ ಲಕ್ಷ್ಮೀ ಗುಡಸಲಮನಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಅತ್ತಿಗೆಯನನು ಉಳಿಸಿಕೊಳ್ಳಲು ಹೋದ ಮೈದುನ ಚಂದ್ರಕಾಂತನಿಗೂ ಬೆಂಕಿ ತಗುಲಿ, ಇಬ್ಬರಿಗೂ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನ ಗದಗನ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
ಲಕ್ಷ್ಮೀ ಅವರ ದೇಹ ಶೇಕಡಾ 80 ರಷ್ಟು ಸುಟ್ಟಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಆದರೆ ವರದಕ್ಷಿಣೆ ಕಿರುಕುಳ ನೀಡಿ ಗಂಡನ ಮನೆಯವರೇ ಸೀಮೆಎಣ್ಣೆ ಸುರಿದು ಕೊಲ್ಲಲು ಮುಂದಾಗಿದ್ದಾರೆ ಎಂಬುದು ಮಹಿಳೆಯ ಸಂಬಂಧಿಕರ ಆರೋಪವಾಗಿದೆ. ವರದಕ್ಷಿಣೆ ತರದ ಹಿನ್ನೆಲೆ ಗಂಡ, ಮೈದುನ, ಅತ್ತೆ-ಮಾವ ಉದ್ದೇಶ ಪೂರ್ವಕವಾಗಿ ಬೆಂಕಿ ಹಚ್ಚಿದ್ದಾರೆ ಎಂದು ಲಕ್ಷ್ಮೀ ಸಹೋದರ ಆರೋಪಿಸುತ್ತಿದ್ದಾರೆ.
Advertisement
ಈ ಕುರಿತು ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv